* ಇಂದು ಹೊಸ ಸಂಪುಟ ಪ್ರಮಾಣವಚನ* ಪಟ್ನಾಯಕ್‌ ಕಾಮರಾಜ್‌ ಸೂತ್ರ: ಎಲ್ಲ 20 ಒಡಿಶಾ ಸಚಿವರ ರಾಜೀನಾಮೆ

ಭುವನೇಶ್ವರ(ಜೂ.05): ಮಹತ್ವದ ವಿದ್ಯಮಾನವೊಂದರಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ 20 ಸಚಿವರ ರಾಜೀನಾಮೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶನಿವಾರ ಪಡೆದಿದ್ದಾರೆ. ಈ ಮೂಲಕ ‘ಕಾಮರಾಜ್‌ ಮಾದರಿ’ ಸಂಪುಟ ಪುನಾರಚನೆಗೆ ಅವರು ಮುಂದಾಗಿದ್ದು, ಭಾನುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲ ಸಚಿವರ ರಾಜೀನಾಮೆ ಪಡೆದು ಹೊಸ ಸಂಪುಟ ರಚಿಸುವುದೇ ‘ಕಾಮರಾಜ್‌ ಸೂತ್ರ’. 60ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕೆ. ಕಾಮರಾಜ್‌ ಈ ಸೂತ್ರ ಜಾರಿಗೆ ತಂದಿದ್ದರು.

‘ಈಗ ಇದನ್ನೇ ಅನುಸರಿಸಲು ಪಟ್ನಾಯಕ್‌ ಮುಂದಾಗಿದ್ದಾರೆ. ಎಲ್ಲ ಸಚಿವರ ರಾಜೀನಾಮೆ ಪಡೆದು ನೂತನ ಮಂತ್ರಿಮಂಡಲ ರಚಿಸಲಿದ್ದಾರೆ. ಭಾನುವಾರ ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.

2​024ರ ಚುನಾವಣೆಗೆ ಪಕ್ಷ ಬಲಪಡಿಸಲು ಈ ತಂತ್ರವನ್ನು ಪಟ್ನಾಯಕ್‌ ಅನುಸರಿಸಿದ್ದಾರೆ ಎಂದು ಅವು ಹೇಳಿವೆ.