ಈ ಪುಟ್ಟ ಆನೆ ಮರಿಯ ಸಂಭ್ರ,ಮಕ್ಕೆ ಎಣೆ ಎಲ್ಲಿ. ಈ ಮರಿ ಜನಸಿ ಕೇವಲ 20  ನಿಮಿಷ ಆಗಿದೆ.  ಆನೆ ಮರಿಯ ಡ್ಯಾನ್ಸ್ ಈಗ ಫುಲ್ ವೈರಲ್. ಇದೊಂದು ಹಳೆಯ ವಿಡಿಯೋವೇ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡುತ್ತಿದೆ. 

ಐಎಫ್ ಎಸ್ ಅಧಿಕಾರಿ ಸುಶಾಂತಾ ನಂದಾ ಇದನ್ನು ಹಂಚಿಕೊಂಡಿದ್ದಾರೆ.  ಇಪ್ಪತ್ತು ನಿಮಿಷದ ಮರಿಯಾನೆ ತನ್ನ ಕಾಲಮೇಲೆ ನಿಂತು ತನ್ನದೇ ಲೋಕದಲ್ಲಿ ಸಂಚಾರ ಮಾಡುತ್ತಿದೆ. ಈ ಭಾವನೆ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

ದುರುಳರ ಅಟ್ಟಹಾಸಕ್ಕೆ ಬಲಿಯಾದ ಗರ್ಭಿಣಿ ಆನೆ

ಲಕ್ಷಕ್ಕೂ ಅಧಿಕ ವೀವ್ ಪಡೆದುಕೊಂಡಿರುವ ವಿಡಿಯೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಗುಣಗಾನ ಬಂದಿದೆ. ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ನೀಡಿದ್ದ ದುರುಳರು ಆಕೆ ನೋವುಂಡು ಸಾಯುವಂತೆ ಮಾಡಿದ್ದರು. ಇದಾದ ಮೇಲೆಯೂ ದೇಶದಲ್ಲಿ ಪ್ರಾಣಿ ಹಿಂಸೆಯ ಸುಮಾರು ಘಟನೆಗಳು ವರದಿಯಾಗಿದ್ದವು.

ಮರಿಯಾನೆಯ  ತುಂಟಾಟವನ್ನು ಆಸ್ವಾದಿಸುವುದೊಂದೆ ನಮ್ಮ ಮುಂದಿರುವ ಹಾದಿ. ಸುಮ್ಮನೆ ಒಮ್ಮೆ ನೋಡಿ ಹೊಸ ಲೋಕಕ್ಕೆ ಹೋಗಿ ಬನ್ನಿ