Asianet Suvarna News Asianet Suvarna News

ಉಷ್ಣ ಮಾರುತದ ಹೊಡೆತಕ್ಕೆ ಉತ್ತರ ಭಾರತ ತತ್ತರ: ದೆಹಲಿಯಲ್ಲಿ ಒಂದೇ ದಿನ 20 ಮಂದಿ ಸಾವು..!

ಉತ್ತರ ಭಾರತದ ಬಹುತೇಕ ಕಡೆ 45 ಡಿಗ್ರಿಗಿಂತ ಹೆಚ್ಚು ತಾಪಮಾನ ಮುಂದುವರಿದಿದೆ. ಇದರ ನಡುವೆ ಕಳೆದ 24 ಗಂಟೆಗಳಲ್ಲಿ ದಿಲ್ಲಿಯ 3 ಪ್ರಮುಖ ಆಸ್ಪತ್ರೆಗಳಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸಫರ್ ಜಂಗ್ ಆಸ್ಪತ್ರೆ, ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ ಹಾಗೂ ರಾಮ ಮನೋಹರ ಲೋಹಿಯಾ ಆಸ್ಪತ್ರೆಗಳಲ್ಲಿ ಒಟ್ಟು 20 ಜನರು ಬಿಸಿಗಾಳಿಯಿಂದ ಬಳಲಿ ದಾಖಲಾಗಿದ್ದರು. ಅವರು ಮೃತಪಟ್ಟಿದ್ದಾರೆ. 

20 Killed on June 19th 2024 in Delhi due to Heatwave grg
Author
First Published Jun 20, 2024, 7:30 AM IST | Last Updated Jun 20, 2024, 7:30 AM IST

ನವದೆಹಲಿ(ಜೂ.20):  ಉಷ್ಣ ಮಾರುತದ ಹೊಡೆತದಿಂದ ಉತ್ತರ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್‌ ಹಾಗೂ ನೀರಿಗೆ ಕೆಲವೆಡೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎ.ಸಿ. ಇಲ್ಲದ ಮನೆ ಹಾಗೂ ಆಸ್ಪತ್ರೆಗಳಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಭಾರತದಾದ್ಯಂತ ಬುಧವಾರವೂ ಸುಮಾರು 45 ಡಿಗ್ರಿ ತಾಪಮಾನ ದಾಖಲಾಗಿದೆ. ತಾಪಮಾನ ಏರಿಕೆಯಿಂದ ಹಾಗೂ ಉಷ್ಣಮಾರುತದಿಂದ ಎಸಿ, ಫ್ಯಾನ್‌ನಂಥ ಹವಾನಿಯಂತ್ರಿತ ಸಾಧನಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ. 

ಉತ್ತರ ಭಾರತದ ಬಹುತೇಕ ಕಡೆ 45 ಡಿಗ್ರಿಗಿಂತ ಹೆಚ್ಚು ತಾಪಮಾನ ಮುಂದುವರಿದಿದೆ. ಇದರ ನಡುವೆ ಕಳೆದ 24 ಗಂಟೆಗಳಲ್ಲಿ ದಿಲ್ಲಿಯ 3 ಪ್ರಮುಖ ಆಸ್ಪತ್ರೆಗಳಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸಫರ್ ಜಂಗ್ ಆಸ್ಪತ್ರೆ, ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ ಹಾಗೂ ರಾಮ ಮನೋಹರ ಲೋಹಿಯಾ ಆಸ್ಪತ್ರೆಗಳಲ್ಲಿ ಒಟ್ಟು 20 ಜನರು ಬಿಸಿಗಾಳಿಯಿಂದ ಬಳಲಿ ದಾಖಲಾಗಿದ್ದರು. ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ನಗರದ ಇತಿಹಾಸದಲ್ಲಿಯೇ ದಾಖಲೆಯ ತಾಪಮಾನ, 52.3 ಡಿಗ್ರಿ ಬಿಸಿಲಿಗೆ ಜನ ಕಂಗಾಲು!

ಉಪವಾಸ- ಸಚಿವೆ ಅತಿಶಿ ಎಚ್ಚರಿಕೆ: 

ಬೇಸಿಗೆಯಲ್ಲಿ ದಿಲ್ಲಿಯಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಜಲ ಸಚಿವೆ ಅತಿಶಿ, ಸಮಸ್ಯೆ ಬಗೆಹರಿಯರೆದಿದ್ದರೆ ಜೂ.21ರಿಂದ ಅನಿರ್ದಿಷ್ಟ ಉಪವಾಸ ನಡೆಸುವುದಾಗಿ ಎಚ್ಚರಿಸಿದ್ದಾರೆ.

Latest Videos
Follow Us:
Download App:
  • android
  • ios