Bandhavgarh elephant deaths: ಹುಲಿ ಮೀಸಲು ಅರಣ್ಯದಲ್ಲಿ ಬರೋಬ್ಬರಿ 10 ಆನೆಗಳ ಸಾವು, ಇಬ್ಬರ ಅಮಾನತು
ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದ ಇಬ್ಬರು ಹಿರಿಯ ಅಧಿಕಾರಿಗಳನ್ನು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.
ನವದೆಹಲಿ (ನ.4): ಹುಲಿ ಮೀಸಲು ಅರಣ್ಯದಲ್ಲಿ ಏಕಾಏಕಿ 10 ಆನೆಗಳು ಸಾವು ಕಂಡಿದ್ದ ಪ್ರಕರಣದಲ್ಲಿ ಉನ್ನತ ಮಟ್ಟದ ತಂಡವು ತನಿಖೆಯ ವರದಿಯನ್ನು ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲಿಯೇ ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಇನ್ನು ಈ ಆನೆಗಳ ಸಾವಿಗೆ ಯಾವುದೇ ಕೀಟನಾಶಕ ಅಥವಾ ಬೇರೆ ಇನ್ನಾವುದೇ ಕೈವಾಡ ಇರುವ ಪಾತ್ರವನ್ನು ಸೂಚಿಸುವುದಿಲ್ಲ ಎಂದು ಮೋಹನ್ ಯಾದವ್ ತಿಳಿಸಿದ್ದಾರೆ. ಮೀಸಲು ನಿರ್ದೇಶಕ ಗೌರವ್ ಚೌಧರಿ ಹಾಗೂ ಪ್ರಭಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅಧಿಕಾರಿ ಫತೇಹ್ ಸಿಂಗ್ ನಿನಾಮ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
'ಉನ್ನತ ಮಟ್ಟದ ತಂಡ ತನ್ನ ವರದಿಯನ್ನು ಸಲ್ಲಿಸಿದೆ. ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿರುವುದು, ರಜೆಯ ನಂತರ ಕೆಲಸಕ್ಕೆ ಹಿಂತಿರುಗದಿರುವುದು ಮತ್ತು ಇತರ ಕಾರಣಗಳಿಗಾಗಿ ಅಮಾನತುಗೊಳಿಸಲಾಗಿದೆ. ಎಸಿಎಫ್ ಫತೇಹ್ ಸಿಂಗ್ ನಿನಾಮ ಅವರನ್ನೂ ಅಮಾನತುಗೊಳಿಸಲಾಗಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಆನೆಗಳ ಸಾವು: ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಗಸ್ತು ಸಿಬ್ಬಂದಿ ಅಕ್ಟೋಬರ್ 29 ರಂದು ಪಟೌರ್ ಮತ್ತು ಖಿಯಾತುಲಿ ವ್ಯಾಪ್ತಿಯ ಸಲ್ಖಾನಿಯಾ ಬೀಟ್‌ಗಳಲ್ಲಿ ನಾಲ್ಕು ಆನೆಗಳು ಸತ್ತಿರುವುದನ್ನು ಕಂಡುಹಿಡಿದರು. ಪಕ್ಕದ ಪ್ರದೇಶಗಳ ಪರಿಶೀಲನೆಯ ಸಮಯದಲ್ಲಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಆರು ಆನೆಗಳು ಅನಾರೋಗ್ಯ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದವು ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಿಳಿಸಿದೆ. .
ಸ್ವಲ್ಪ ಸಮಯದ ನಂತರ, ವನ್ಯಜೀವಿ ಫೋರೆನ್ಸಿಕ್ ಮತ್ತು ಹೆಲ್ತ್ ಶಾಲೆಯ (SWFH) ಪಶುವೈದ್ಯರ ತಂಡದೊಂದಿಗೆ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಪಶುವೈದ್ಯಾಧಿಕಾರಿಗಳು ಅಸ್ವಸ್ಥ ಆನೆಗಳಿಗೆ ಔಷಧಿಗಳನ್ನು ನೀಡಲು ಪ್ರಾರಂಭಿಸಿದರು.
'ಚಾರ್ಟ್ ಸಿದ್ದವಾದ ಬಳಿಕ RAC ಟಿಕೆಟ್ Waiting ಲಿಸ್ಟ್‌ಗೆ ಹೋಗೋಕೆ ಹೇಗೆ ಸಾಧ್ಯ..' ರೈಲ್ವೇಸ್‌ಗೆ ಪ್ರಶ್ನೆ ಮಾಡಿದ ಯುವಕ
ಆದರೂ, ಆರು ಅಸ್ವಸ್ಥ ಆನೆಗಳ ಪೈಕಿ ನಾಲ್ಕು ಆನೆಗಳು ಅಕ್ಟೋಬರ್ 30 ರಂದು ಸಾವಿಗೆ ಶರಣಾದವು, ಉಳಿದ ಎರಡು ಆನೆಗಳು ಮರುದಿನ (ಅಕ್ಟೋಬರ್ 31) ಪ್ರಾಣ ಕಳೆದುಕೊಂಡವು. 10 ಆನೆಗಳ ಪೈಕಿ ಒಂಬತ್ತು ಆನೆಗಳು, ಹೆಣ್ಣಾನೆಯಾಗಿದ್ದವು. ಇವುಗಳ ಪೈಕಿ ಆರು ಆನೆ ಬಾಲ ಆನೆಗಳಾಗಿದ್ದರೆ, ನಾಲ್ಕು ವಯಸ್ಕ ಆನೆಗಳಾಗಿದ್ದವು. ಆ ವೇಳೆ 13 ಆನೆಗಳ ಹಿಂಡು ಕೊಡೋ ರಾಗಿ ಬೆಳೆಗೆ ದಾಳಿ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.
ಮುಂದಿನ ಎರಡೇ ತಿಂಗಳಲ್ಲಿ ದೇಶದಲ್ಲಿ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ ನಿರೀಕ್ಷೆ!
ಪರ್ಯಾಯ ವಿಚಾರಣೆ: 10 ಆನೆಗಳ ಸಾವಿನ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದೆ. ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB) ಈ ವಿಷಯವನ್ನು ಪರಿಶೀಲಿಸಲು ತಂಡವನ್ನು ರಚಿಸಿದೆ ಎಂದು ನವೆಂಬರ್ 2 ರಂದು ಕೇಂದ್ರ ಪರಿಸರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಮಧ್ಯಪ್ರದೇಶ ಸರ್ಕಾರವು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ನೇತೃತ್ವದ ಐದು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ.
ಪರಿಹಾರ ಹೆಚ್ಚಳ: ಆನೆಗಳ ಸಾವಿನ ನಂತರ, ರಾಜ್ಯ ಸರ್ಕಾರವು ಕಾಡು ಪ್ರಾಣಿಗಳ ದಾಳಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರವನ್ನು ಹೆಚ್ಚಿಸಿದೆ ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಖ್ಯಮಂತ್ರಿ ಯಾದವ್ ಅವರು ಪರಿಹಾರವನ್ನು ₹ 8 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಿಸಿದ್ದಾರೆ ಎಂದು ಅದು ಹೇಳಿದೆ. ಇತ್ತೀಚೆಗೆ ಉಮಾರಿಯಾ ಜಿಲ್ಲೆಯಲ್ಲಿ ಆನೆಗಳ ದಾಳಿಗೆ ಬಲಿಯಾದ ಇಬ್ಬರ ಕುಟುಂಬಗಳಿಗೂ ಇದನ್ನು ಒದಗಿಸಲಾಗುವುದು ಎಂದಿದ್ದಾರೆ.