ಭುವನೇಶ್ವರ(ಮೇ 19) ಈ ಮಹಾನಗರ ಕೊರೋನಾ ಫ್ರೀಯಾಗಿದೆ. ಮೊದಲ ಪ್ರಕರಣ ದಾಖಲಾಗಿ ಬರೋಬ್ಬರಿ ಎರಡು ತಿಂಗಳ ನಂತರ ನಗರ ಕೊರೋನಾ ಮುಕ್ತವಾಗಿದೆ.  ಓರಿಸ್ಸಾದ ರಾಜಧಾನಿ  ಭುವನೇಶ್ವರದಲ್ಲಿ ಮೂವರಿಗೆ ಕೊರೋನಾ ಅಂತಿಮ ಪರೀಕ್ಷೆ ಮಾಡಲಾಗಿದ್ದು ನೆಗೆಟಿವ್ ವರದಿ ಬಂದಿದೆ.

ಮೇ 8 ರಂದು ಪರೀಕ್ಷೆ ಮಾಡಿದಾಗ ಈ ಮೂವರಲ್ಲಿಯೂ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. 57 ಜನರಲ್ಲಿ ಕೊರೋನಾ ಇತ್ತು.  ಕೇಂದ್ರ ಆರೋಗ್ಯ ಇಲಾಖೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಸೋಂಕಿತರು ಕಂಡು ಬಂದ ಪ್ರದೇಶವನ್ನು ರೆಡ್ ಝೋನ್ ಮಾಡಲಾಗಿತ್ತು ಎಂದು ಓರಿಸ್ಸಾ ಮುಖ್ಯ ಕಾರ್ಯದರ್ಶಿ ಅಸಿತ್ ತ್ರಿಪಾಠಿ ತಿಳಿಸಿದ್ದಾರೆ.

ಖಾಸಗಿ ವಾಹನ ಮಾಲೀಕರಿಗೆ ಗುಡ್ ನ್ಯೂಸ್

ಮಾರ್ಚ್ 15 ರಂದು ಮೊದಲ ಕೇಸ್ ಪತ್ತೆಯಾಗಿತ್ತು. 9 ದಿನ ದೆಹಲಿಯಲ್ಲಿ ಇದ್ದ 33 ವರ್ಷದ ವಿದ್ಯಾರ್ಥಿ ಓರಿಸ್ಸಾಕ್ಕೆ ಆಗಮಿಸಿ ಜೊತೆಗೆ ಕೊರೋನಾ ಹೊತ್ತು ತಂದಿದ್ದ.  ಇದಾದ ನಂತರ ಯುಕೆಯಿಂದ ಹಿಂದಿರುಗಿದ್ದ 19 ವರ್ಷದ ವ್ಯಕ್ತಿಗೆ ಕೊರೋನಾ ಕಾಭಣಿಸಿಕೊಂಡಿತ್ತು.  ದೆಹಲಿ ತಬ್ಲಿಘಿಗಳ ಸಂಪರ್ಕದಿಂದ 15 ಕೇಸು ಪತ್ತೆಯಾಗಿತ್ತು. 

ಮೊದಲಿಗೆ ಜಗತ್ ಸಿಂಗಫುರ್ ಜಿಲ್ಲೆ ಕೊರೋನಾ ಮುಕ್ತ ಎಂದು ಘೋಷಣೆ ಮಾಡಲಾಯಿತು.  ಇದೀಗ ಓರಿಸ್ಸಾದ 19 ಆಸ್ಪತ್ರೆಗಳಲ್ಲಿ 615 ಕೊರೋನಾ ರೋಗಿಗಳು ಇದ್ದಾರೆ.