Asianet Suvarna News

ಹೈದರಾಬಾದ್‌ನಲ್ಲಿ NIA ಬಲೆಗೆ ಬಿದ್ದ ಇಬ್ಬರು ಲಷ್ಕರ್‌ ಉಗ್ರರು!

* ಬಿಹಾರದ ದರ್‌ಭಂಗಾದಲ್ಲಿ ರೈಲ್ವೇ ನಿಲ್ದಾಣದ ಬಳಿ ಜೂ. 17 ರಂದು ಸಂಭವಿಸಿದ್ದ ಪಾರ್ಸೆಲ್ ಬ್ಲಾಸ್ಟ್‌ ಪ್ರಕರಣ

* ಪ್ರಕರಣದ ಹಿಂದಿದ್ದ ಇನಬ್ಬರು ಉಗ್ರರು ಅರೆಸ್ಟ್

* ಹೈದರಾಬಾದ್‌ನಲ್ಲಿ NIA ಬಲೆ ಬಿದ್ದ ಲಷ್ಕರ್‌ ಉಗ್ರರು

2 lashkar terrorists from Hyderabad arrested by NIA pod
Author
Bangalore, First Published Jul 1, 2021, 2:39 PM IST
  • Facebook
  • Twitter
  • Whatsapp

ಹೈದರಾಬಾದ್(ಜೂ.01): ಬಿಹಾರದ ದರ್‌ಭಂಗಾದಲ್ಲಿ ರೈಲ್ವೇ ನಿಲ್ದಾಣದ ಬಳಿ ಜೂ. 17 ರಂದು ಸಂಭವಿಸಿದ್ದ ಪಾರ್ಸೆಲ್ ಬ್ಲಾಸ್ಟ್‌ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಅಧಿಕಾರಿಗಳು ಹೈದರಾಬಾದ್‌ನಲ್ಲಿ ಅಡಗಿದ್ದ ಲಷ್ಕರ್‌-ಏ-ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದೆ. ಈ ಉಗ್ರರು ಭಾರತದ ಅನೇಕ ಕಡೆ ಸ್ಫೋಟ ನಡೆಸಲು ಸಂಚು ರೂಪಿಸುತ್ತಿದ್ದರು.

ಹೈದರಾಬಾದ್‌ನಿಂದ ಪಾರ್ಸೆಲ್ ರವಾನೆ

ದರ್‌ಭಂಗಾದಲ್ಲಿ ನಡೆದಿದ್ದ ಈ ಸ್ಫೋಟ ರೈಲಿನ ಅಂಗಡಿಗೆ ಬಟ್ಟೆಗಳ ಸ್ಟಾಕ್‌ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿತ್ತು. ಅದೃಷ್ಟವಶಾತ್ ಈ ವೇಳೆ ಯಾರಿಗೂ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಈ ಪಾರ್ಸೆಲ್ ಸಿಖಂದರಾಬಾದ್‌ನಿಂದ ರೈಲಿನಲ್ಲಿ ದರ್‌ಭಂಗಾವರೆಗೆ ತರಲಾಗಿತ್ತು. ಇದನ್ನು ಹೈದರಾಬಾದ್‌ ನಿವಾಸಿ ಸೂಫಿಯಾನ್‌ ಹೆಸರಿನ ವ್ಯಕ್ತಿ ಕಳುಹಿಸಿದ್ದ. ಆದರೆ ತನಿಖೆಯಲ್ಲಿ ಇದು ನಕಲಿ ಎಂದು ಪತ್ತೆಯಾಗಿತ್ತು. 

ಪಾಕ್‌ ಜೊತೆ ಸಂಪರ್ಕ:

ಎನ್‌ಐಎ ಅಧಿಕಾರಿಗಳ ತನಿಖೆಯಲ್ಲಿ ದರ್‌ಭಂಗಾ ಸ್ಫೋಟದ ಹಿಂದೆ ಪಾಕ್‌ನ ಲಷ್ಕರ್‌-ಏ-ತೊಯ್ಬಾ ಉಗ್ರ ಸಂಘಟನೆ ಇತ್ತೆಂಬ ಮಾಹಿತಿ ಹೊರ ಬಿದ್ದಿದೆ. ಇದಾಧ ಬಳಿಕ ತನಿಖೆಗೆ ಮತ್ತಷ್ಟು ವೇಗ ನೀಡಲಾಗಿದ್ದು, ಆರೋಪಿಗಳಾದ ಮೊಹಮ್ಮದ್ ನಾಸಿರ್ ಹಾಗೂ ಆತನ ಸಹೋದರ ಇಮ್ರಾನ್‌ ಮಲಿಕ್‌ರನ್ನು ಬಂಧಿಸಲಾಗಿದೆ. ಇವರಿಬ್ಬರೂ ಐಐಡಿ ಬಾಂಬ್ ತಾವೇ ತಯಾರಿಸಿದ್ದೆಂಬುವುದನ್ನು ಒಪ್ಪಿಕೊಂಡಿದ್ದಾರೆ. ಈ ಬಾಂಬ್‌ನ್ನು ಬಟ್ಟೆಗಳ ಪಾರ್ಸೆಲ್‌ನಲ್ಲಿ ಪ್ಯಾಕ್‌ ಮಾಡಿ ದರ್‌ಭಂಗಾ ರೈಲಿನಲ್ಲಿಡಲಾಗಿತ್ತು. 

ಇನ್ನು ಆರೋಪಿ ನಾಸಿರ್ 2012ರಲ್ಲಿ ಪಾಖಿಸ್ತಾನಕ್ಕೆ ಭೇಟಿ ನೀಡಿದ್ದ. ಅಲ್ಲೇ ಆತ ಕೆಮಿಕಲ್ ಬಾಂಬ್ ತಯಾರಿಸುವುದನ್ನು ಕಲಿತಿದ್ದ. 

Follow Us:
Download App:
  • android
  • ios