ಮುಂಬೈ[ಜ.18]: 21 ದಿನಗಳ ಪರೋಲ್‌ ಮೇಲೆ ಬಿಡುಗಡೆಯಾಗಿ ಆ ಬಳಿಕ ನಾಪತ್ತೆಯಾಗಿದ್ದ 1993ರ ಮುಂಬೈ ದಾಳಿ ಸೇರಿ ದೇಶದ ಹಲವು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ದೋಷಿ ಡಾ.ಜಲೀಸ್‌ ಅನ್ಸಾರಿ ಅಲಿಯಾಸ್‌ ಡಾ.ಬಾಂಬ್‌ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ತಂಡ(ಎಟಿಎಸ್‌) ಹಾಗೂ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗಳು ಶುಕ್ರವಾರ ಕಾನ್ಪುರದಲ್ಲಿ ಡಾ.ಬಾಂಬ್‌ನನ್ನು ಸೆರೆ ಹಿಡಿದಿವೆ. ಮಸೀದಿಯೊಂದರಲ್ಲಿ ನಮಾಜು(ಪ್ರಾರ್ಥನೆ) ಮುಗಿಸಿ ರೈಲ್ವೆ ನಿಲ್ದಾಣ ಕಡೆ ಹೋಗುತ್ತಿದ್ದ ಡಾ.ಬಾಂಬ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಏತನ್ಮಧ್ಯೆ, ಡಾ.ಬಾಂಬ್‌ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಗುಂಡ್ಲುಪೇಟೆಯಲ್ಲಿ ಅಡಗಿದ್ದಾರಾ ಉಗ್ರರು, ತರಬೇತಿಗೆ ಸ್ಥಳೀಯರ ಬಳಕೆ..?

ಮುಂಬೈ ಮೂಲದ ಡಾ. ಬಾಂಬ್‌ ದೇಶಾದ್ಯಂತ ನಡೆದ 52ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯಿದೆ. ರಾಜಸ್ಥಾನದ ಅಜ್ಮೇರ್‌ ಜೈಲಿನಿಂದ 21 ದಿನಗಳ ಪರೋಲ್‌ ಮೇಲೆ ಬಿಡುಗಡೆಯಾಗಿದ್ದ ಡಾ. ಬಾಂಬ್‌ ಪ್ರತೀ ದಿನ ಮುಂಬೈನಲ್ಲಿರುವ ಅಗ್ರಿಪದ ಠಾಣೆಗೆ ಆಗಮಿಸಿ ಸಹಿ ಮಾಡಬೇಕಿತ್ತು. ಆದರೆ, ಗುರುವಾರ ಮಾತ್ರ ಡಾ. ಬಾಂಬ್‌ ಠಾಣೆಗೆ ಬಂದಿರಲಿಲ್ಲ.

ಮಧ್ಯಾಹ್ನದ ವೇಳೆ ಬಾಂಬ್‌ ಪುತ್ರ ಜೈದ್‌ ಆನ್ಸಾರಿ, ತನ್ನ ತಂದೆ ಬೆಳಗ್ಗೆ ನಮಾಜಿಗೆಂದು ಹೋದವರು ಮತ್ತೆ ವಾಪಸ್‌ ಬಂದಿಲ್ಲ ಎಂದು ದೂರು ದಾಖಲಿಸಿದ್ದ.

ಗುರುತು ಪತ್ತೆ ಹಚ್ಚಲಾಗದಂತೆ ಶೇವಿಂಗ್ ಮಾಡ್ಕೊಂಡಿದ್ದ ಉಗ್ರರು..!