ನವದೆಹಲಿ(ಜೂ.16):  ಮಹಾವೀರ ಚಕ್ರ  ಪುರಸ್ಕೃತ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜ್ ಮೋಹನ್ ವೊಹ್ರಾ(88)  ಮಾರಕ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

ಈ ಬಗ್ಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಜೂನ್ 14ರಂದು ಲೆಫ್ಟಿನೆಂಟ್ ಜನರಲ್ ರಾಜ್ ಮೋಹನ್ ವೊಹ್ರಾ ಅವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ  ಎಂದು ತಿಳಿಸಿದ್ದಾರೆ.

1971  ರ ಭಾರತ-ಪಾಕ್ ಯುದ್ಧದದಲ್ಲಿ ಮೋಹನ್ ವೊಹ್ರಾ ಶೌರ್ಯ ಪ್ರದರ್ಶನ ಮಾಡಿದ್ದರು. ಶಂಕರ್ ಘಡ ಸೆಕ್ಟರ್ ನಲ್ಲಿ ಸೈನ್ಯವನ್ನು ಮುನ್ನಡೆಸಿದ್ದರು.

ಕೊರೋನಾಕ್ಕೆ ಔಷಧಿ ಸಿಕ್ತು, ಸೋಂಕಿತರ ಪ್ರಾಣ ಉಳಿಸುತ್ತಿದೆ ಈ ಮೆಡಿಸಿನ್

ಬಸಂತರ್ ನಲ್ಲಿ ಯುದ್ಧ ನಡೆಯುತ್ತಿದ್ದ ವೇಳೆ ವೈರಿ ಪಡೆಯ 27  ಬಂಕರ್ ಗಳನ್ನು ಇವರ ನೇತೃತ್ವದ ತಂಡ ಉಡಾಯಿಸಿತ್ತು.  1972 ರಲ್ಲಿ ಅತ್ಯುನ್ನತ ಗೌರವಕ್ಕೆ ಮೋಹನ್ ಪಾತ್ರವಾಗಿದ್ದರು.

1932 ಶಿಮ್ಲಾದಲ್ಲಿ ಜನಿಸಿದ್ದ ಮೋಹನ್ ಭಾರತ ಪಾಕ್ ಯುದ್ಧದ ವೇಳೆ ಅಪಾರ ಶೌರ್ಯ ಪ್ರದರ್ಶನ ಮಾಡಿದ್ದರು. ಹೃದಯನಾಳಕ್ಕೆ ಸ್ಚಂಟ್ ಅಳವಡಿಸಿಕೊಳ್ಳುವ ಸಲುವಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಅವರ ವರದಿ ಪಾಸಿಟಿನ್ ಬಂದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಾವೀರ ಚಕ್ರ ದೇಶದ 2ನೇ ಅತ್ಯುನ್ನತ ಸೈನಿಕ ಪ್ರಶಸ್ತಿಯಾಗಿದ್ದು, ಯುದ್ಧ ಭೂಮಿಯಲ್ಲಿ ಅಪ್ರತಿಮ ಶೌರ್ಯ ಮೆರೆದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.