ದೇಶದಲ್ಲಿ ಕಳೆದ ವರ್ಷ ಬರೋಬ್ಬರಿ 19,467 ಜನರು ಪೊಲೀಸರ ಭದ್ರತೆಯಲ್ಲಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.01): ದೇಶದಲ್ಲಿ 19,467 ಜನರು 2019ರಲ್ಲಿ ಪೊಲೀಸ್ ಭದ್ರತೆ ಪಡೆದಿದ್ದರು ಎಂದು ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೊ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ.
ಇದು 2018ಕ್ಕೆ ಹೋಲಿಸಿದರೆ 1833ರಷ್ಟು ಕಮ್ಮಿ. ಆದರೆ ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಅಧಿಕಾರಿಗಳಿಗೆ ಭದ್ರತೆ ನೀಡಲು ನಿಗದಿಪಡಿಸಲಾಗಿದ್ದ ಸಂಖ್ಯೆಗಿಂತ ಶೇ.35ರಷ್ಟು ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜಿಸಲ್ಪಟ್ಟಿದ್ದಾರೆ. ಅಂದರೆ 2019ರಲ್ಲಿ 43,556 ಪೊಲೀಸರನ್ನು ಭದ್ರತೆ ನಿಗದಿಪಡಿಸಲಾಗಿತ್ತು. ಆದರೆ 63,061 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.
2018ರಲ್ಲಿ 21,300 ಜನರು ಪೊಲೀಸ್ ಭದ್ರತೆ ಪಡೆದಿದ್ದರು. ಆದರೆ 2019ರಲ್ಲಿ 19,467ಕ್ಕೆ ಇದರ ಸಂಖ್ಯೆ ಇಳಿದಿದೆ. ಇದೇ ವೇಳೆ, ಕರ್ನಾಟಕದಲ್ಲಿ 2018ರಲ್ಲಿ 647 ಜನರು ಪೊಲೀಸ್ ಭದ್ರತೆ ಪಡೆದಿದ್ದರೆ 2019ರಲ್ಲಿ ಇವರ ಸಂಖ್ಯೆ 721ಕ್ಕೆ ಹೆಚ್ಚಿತ್ತು.
ಹಿಂದು ದೇಗುಲಕ್ಕೆ ಪಾಕಿಸ್ತಾನದಲ್ಲಿ ಬೆಂಕಿ: 30 ದುರುಳರು ಅರೆಸ್ಟ್
2019ರಲ್ಲಿ ಬಂಗಾಳದಲ್ಲಿ ದೇಶದಲ್ಲೇ ಅತಿ ಹೆಚ್ಚು 3,142 ಜನರು ಪೊಲೀಸ್ ಭದ್ರತೆ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಪಂಜಾಬ್ (2,594), ಬಿಹಾರ (2,347) ಹಾಗೂ ಜಮ್ಮು-ಕಾಶ್ಮೀರ (1,184) ಇವೆ. 2018ರಲ್ಲಿ ಬಿಹಾರ (4,677) ಮೊದಲ ಸ್ಥಾನಿಯಾಗಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 1, 2021, 12:39 PM IST