Asianet Suvarna News Asianet Suvarna News

19ರ ಮೈತ್ರಿ ದೇಶದ ಅತಿ ಕಿರಿಯ ವಾಣಿಜ್ಯ ಪೈಲಟ್‌!

*  18 ತಿಂಗಳ ತರಬೇತಿ 11 ತಿಂಗಳಿನಲ್ಲೇ ಪೂರ್ಣ

* 19ರ ಮೈತ್ರಿ ದೇಶದ ಅತಿ ಕಿರಿಯ ವಾಣಿಜ್ಯ ಪೈಲಟ್‌!

19 Year Old Maitri Patel A Farmer Daughter From Surat Became India Youngest Commercial Pilot pod
Author
Bangalore, First Published Sep 15, 2021, 7:55 AM IST

ಸೂರತ್‌(se.15): ವಿಮಾನದ ಪೈಲಟ್‌ ಆಗಬೇಕು ಎನ್ನುವುದು ಅದೆಷ್ಟೋ ಜನರ ಕನಸು. ಗುಜರಾತಿನ ಸೂರತ್‌ ಮೂಲದ ಬಾಲಕಿಯೊಬ್ಬಳು 19ನೇ ವರ್ಷಕ್ಕೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾಳೆ. ರೈತನ ಮಗಳಾಗಿರುವ ಮೈತ್ರಿ ಪಟೇಲ್‌, ಭಾರತದ ಅತಿ ಕಿರಿಯ ವಾಣಿಜ್ಯ ವಿಮಾನ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದಲ್ಲಿ 18 ತಿಂಗಳ ಪೈಲಟ್‌ ತರಬೇತಿ ಯೋಜನೆಯನ್ನು ಕೇವಲ 11 ತಿಂಗಳಿನಲ್ಲೇ ಪೂರ್ಣಗೊಳಿಸಿರುವ ಮೈತ್ರಿ ಪಟೇಲ್‌, ಭಾರತದಲ್ಲಿ ಪೈಲಟ್‌ ಲೈಸೆನ್ಸ್‌ ಪಡೆಯಲು ಮತ್ತೊಮ್ಮೆ ತರಬೇತಿಗೆ ಒಳಗಾಗಬೇಕಿದೆ. ತದ ನಂತರದಲ್ಲಿ ಬೋಯಿಂಗ್‌ ಪ್ರಯಾಣಿಕ ವಿಮಾನದ ಪೈಲಟ್‌ ಆಗುವ ಅರ್ಹತೆ ಪಡೆಯಲಿದ್ದಾರೆ.

ಕಷ್ಟದಲ್ಲೂ ಮಗಳನ್ನು ಓದಿಸಿದ ತಂದೆ:

ಪೈಲಟ್‌ ಆಗಬೇಕು ಎಂಬುದು ಮೈತ್ರಿಯ ಬಾಲ್ಯದ ಕನಸಾಗಿತ್ತು. ಸೂರತ್‌ನ ಮೆತಾಸ್‌ ಅಡ್ವೆನಿಸ್ಟ್‌ ಸ್ಕೂಲ್‌ನಲ್ಲಿ 12ನೇ ತರಗತಿ ಮುಗಿಸಿದ ಬಳಿಕ ಆಕೆ ಅಮೆರಿಕದಲ್ಲಿ ಪೈಲಟ್‌ ತರಬೇತಿ ಯೋಜನೆಗೆ ಸೇರ್ಪಡೆ ಆಗಲು ಬಯಸಿದ್ದಳು. ತಂದೆ ಕಾಂತಿಲಾಲ್‌ ಪಟೇಲ್‌ ಬಡತನದ ಮಧ್ಯೆಯೂ ಮಗಳು ಅಮೆರಿಕದಲ್ಲಿ ಪೈಲಟ್‌ ತರಬೇತಿ ಕೊಡಿಸಿದ್ದರು. ಮಗಳ ಕನಸನ್ನು ಈಡೇರಿಸಲು ತಮ್ಮ ಹೊಲವನ್ನು ಮಾರಾಟ ಮಾಡಿ ಹಣವನ್ನು ಹೊಂದಿಸಿದ್ದರು.

ಇದೀಗ ವಿಮಾನದ ತರಬೇತಿ ಮುಗಿಸಿ ಮೈತ್ರಿ ಪಟೇಲ್‌ ಭಾರತಕ್ಕೆ ಮರಳಿದ್ದಾರೆ. 18 ತಿಂಗಳ ಪೈಲಟ್‌ ತರಬೇತಿಯನ್ನು ಕೇವಲ 11 ತಿಂಗಳಿನಲ್ಲಿಯೇ ಪೂರ್ಣಗೊಳಿರುವ ಮೈತ್ರಿ ವಾಣಿಜ್ಯಿಕ ವಿಮಾನವೊಂದರ ಪೈಲಟ್‌ ಲೈಸೆನ್ಸ್‌ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೋಯಿಗ್‌ ವಿಮಾನವನ್ನು ಹಾರಿಸುವ ತರಬೇತಿಯನ್ನು ಪಡೆಯಲಿದ್ದಾರೆ.

Follow Us:
Download App:
  • android
  • ios