ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ 15300 ಕೋಟಿ ನೆರವು: ಇದು ಯುಪಿಎ ಸರ್ಕಾರದಲ್ಲಿ ನೀಡಿದ್ದಕ್ಕಿಂತ ಹೆಚ್ಚು!
'ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸೇರಿದಂತೆ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಏನೂ ಕೊಟ್ಟಿಲ್ಲ. ಎಲ್ಲ ಬಿಜೆಪಿ ಬೆಂಬಲಿಗ ಪಕ್ಷಗಳ ಆಡಳಿತ ಇರುವ ರಾಜ್ಯಗ ಗಳಿಗೆ (ಆಂಧ್ರಪ್ರದೇಶ, ಬಿಹಾರ) ನೀಡಲಾಗಿದೆ' ಎಂಬ ಆರೋಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ನವದೆಹಲಿ (ಜು.28): 'ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸೇರಿದಂತೆ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಏನೂ ಕೊಟ್ಟಿಲ್ಲ. ಎಲ್ಲ ಬಿಜೆಪಿ ಬೆಂಬಲಿಗ ಪಕ್ಷಗಳ ಆಡಳಿತ ಇರುವ ರಾಜ್ಯಗ ಗಳಿಗೆ (ಆಂಧ್ರಪ್ರದೇಶ, ಬಿಹಾರ) ನೀಡಲಾಗಿದೆ' ಎಂಬ ಆರೋಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ 15 ಸಾವಿರ ಕೋಟಿ ರು. ಅನುದಾನ ಘೋಷಿಸಲಾಗಿದ್ದು, 45 ಸಾವಿರ ಕೋಟಿ ರು. ತೆರಿಗೆ ಹಂಚಿಕೆ ಮಾಡಲಾಗಿದೆ ಎಂದು ಅದು ಅಂಕಿ-ಅಂಶ ಬಿಡುಗಡೆ ಮಾಡಿದೆ. ಈ ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಎನ್‌ಡಿಎ ಸರ್ಕಾರದಿಂದ ಅಧಿಕ ಪ್ರಯೋಜನಗಳು ರಾಜ್ಯಕ್ಕೆ ಲಭಿಸಿವೆ ಎಂದು ಅದು ಸ್ಪಷ್ಟನೆ ನೀಡಿದೆ.
ಅಲ್ಲದೆ, 'ಬಜೆಟ್‌ನಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಕೆಲವು ರಾಜ್ಯಗಳ ಹೆಸರು ಪ್ರಸ್ತಾಪಿಸಲಾಗುತ್ತದೆ. ಹಾಗಂತ ಉಳಿದ ರಾಜ್ಯಗಳನ್ನು ನಿರ್ಲಕ್ಷಿಸಿದ್ದೇವೆ ಎಂದಲ್ಲ. ಹೆಸರು ಪ್ರಸ್ತಾಪಿಸದೇ ಇದ್ದರೂ ಕೇಂದ್ರೀಯ ಯೋಜನೆಗಳಿಂದ ಎಲ್ಲ ರಾಜ್ಯಗಳಿಗೆ ಪ್ರಯೋಜನ ಲಭಿಸಿರುತ್ತದೆ' ಎಂದು ಅದು ಸ್ಪಷ್ಟಪಡಿಸಿದೆ. 2009-10ರ ಯುಪಿಎ ಮಧ್ಯಂತರ ಬಜೆಟ್ ನಲ್ಲಿ ಕೇವಲ2ರಾಜ್ಯಗಳಹೆಸರುಪ್ರಸ್ತಾಪವಾಗಿತ್ತು. ತಮಿಳುನಾಡು ಬಜೆಟ್‌ನ 38 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ ಹೆಸರೇ ಇಲ್ಲ. ಹಾಗಂತ ಉಳಿದ ರಾಜ್ಯ / ಜಿಲ್ಲೆಗಳಿಗೆ ಸರ್ಕಾರ ಏನೂ ಕೊಟ್ಟಿಲ್ಲ ಎನ್ನಲಾಗು ತ್ತದೆಯೇ?' ಎಂದು ಅದು ಪ್ರಶ್ನಿಸಿದೆ.
ಮಹಾರಾಷ್ಟ್ರ ಮಳೆ: ರಾಜ್ಯದ 4 ಜಿಲ್ಲೆಗಳಲ್ಲಿ ಅಲರ್ಟ್, ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ!
ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಡುಗೆ ಏನು?: 2024-25ನೇಬಜೆಟ್‌ನಲ್ಲಿ ತೆರಿಗೆ ಹಂಚಿಕೆ ರೂಪದಲ್ಲಿ ಕರ್ನಾಟಕಕ್ಕೆ 45,485.80 ಕೋಟಿ ರು. ತೆಗೆದಿರಿಸಿದೆ. ಅಲ್ಲದೆ, 2024- 25ನೇ ಸಾಲಲ್ಲಿ 15,299.7 ಕೋಟಿ ರು. ಕರ್ನಾಟಕಕ್ಕೆ ಅನುದಾನವಾಗಿ ಸಿಗಲಿದೆ.
ಯುಪಿಎ ಸರ್ಕಾರಕ್ಕಿಂತ ಅಧಿಕ ಅನುದಾನ: 2004-2014 ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 81,791 ಕೋಟಿ ರು. ತೆರಿಗೆ ಹಂಚಿಕೆ ಲಭಿಸಿತ್ತು. ಆದರೆ ಅದು 2024ರಿಂದ 2024ರ ಮೋದಿ ಅವಧಿಯಲ್ಲಿ 2,95,818 ಕೋಟಿ ರು.ಗೆ ಏರಿದೆ. ಇದು ಯುಪಿಎಗಿಂತ ಶೇ.261ರಷ್ಟು ಅಧಿಕ. ಇನ್ನು ಅನುದಾನ ರೂಪದಲ್ಲಿ 2004- 2014 ಯುಪಿಎ ಸರ್ಕಾರ 60,779 ಕೋಟಿ ರು.ಗಳನು 2014-2024ರವರೆಗಿನ ನೀಡಿತ್ತು. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ 2,36,955 ಕೋಟಿ ರು. ನೀಡಲಾಗಿದೆ. ಇದು ಶೇ.290ರಷ್ಟು ಅಧಿಕ. ಅಲ್ಲದೆ ಬಂಡವಾಳ ಹೂಡಿಕೆಯಲ್ಲಿ ನೀತಿ ಆಯೋಗದ ಶಿಫಾರಸಿಗಿಂತ ಅಧಿಕ ಅನುದಾನ ವನ್ನು ಕರ್ನಾಟಕಕ್ಕೆಕೆಂದ್ರನೀಡಿದೆ. 2020-21 ರಲ್ಲಿ 305 ಕೋಟಿ ರು. ಇದ್ದ ಬಂಡವಾಳ ಹೂಡಿಕೆ, 2024-25ರಲ್ಲಿ 2006 ಕೋಟಿ ರು.ಗೆ ಏರಿದೆ. ಒಟ್ಟು 5 ಹಣಕಾಸು ವರ್ಷದಲ್ಲಿ 10,041 ಕೋಟಿ ರು. ಬಂಡವಾಳ ಹೂಡಿಕೆಯನ್ನು ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಮಾಡಿದೆ.
ರೈಲ್ವೆಗೆ ಬಂಪರ್ ಅನುದಾನ: 2009-14ರ 5 ವರ್ಷ ಅವಧಿಯಲ್ಲಿ ಯುಪಿಎ ಸರ್ಕಾರ ಕರ್ನಾಟಕಕ್ಕೆ ಕೇವಲ 835 ಕೋಟಿ ರು. ರೈಲ್ವೆ ಅನುದಾನ ನೀಡಿತ್ತು. ಆದರೆ 2023-24ರಲ್ಲಿ 7561 ಕೋಟಿ ರು. ಹಾಗೂ 2024-25ರಲ್ಲಿ 7559 ಕೋಟಿ ರು. ನೀಡಲಾಗಿದೆ. ಇದು ಶೇ.805ರಷ್ಟು ಅಧಿಕ ಎಂದು ಎನ್‌ಡಿಎ ಸರ್ಕಾರ ಹೇಳಿದೆ. ಕರ್ನಾಟಕದ 59 ರೈಲು ನಿಲ್ದಾಣಗಳನ್ನು ಅಮೃತ ರೈಲು ನಿಲ್ದಾಣಗಳೆಂದು ಅಭಿವೃ ದಿಪಡಿಸುವ ಘೋಷಣೆ ಮಾಡಲಾಗಿದೆ. 7 ವಂದೇಭಾರತ್ ಸೇರಿ ವಿವಿಧ ಹೊಸ ರೈಲು ಗಳನ್ನು ಈ ಹಿಂದೆಯೇ ಘೋಷಿಸಲಾಗಿದೆ
ಎಂದು ಸರ್ಕಾರ ಹೇಳಿದೆ.
ಮೂಲಸೌಕರ್ಯ ಯೋಜನೆಗಳು: ಈ ಬಜೆಟ್‌ನಲ್ಲಿ ಅಲ್ಲದಿದ್ದರೂ ಕಳೆದ ಹಲವು ವರ್ಷ ಗಳಿಂದ ಮೋದಿ ಸರ್ಕಾರವು ಕರ್ನಾಟಕದಲ್ಲಿ ಹೊಸ ಏರ್‌ಪೋರ್ಟ್, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕಾ ಕಾರಿಡಾರ್, ಉದ್ಯಮ ವಲಯ ಸ್ಥಾಪನೆ, ಬೆಂಗಳೂರು ಮೆಟ್ರೋ ಹೊಸ ಮಾರ್ಗ ಹೀಗೆ ಅನೇಕ ಮೂಲಸೌಕರ್ಯ ಕೊಡುಗೆಗಳನ್ನು ನೀಡುತ್ತಲೇ ಇದೆ ಎಂದು ತಿಳಿಸಲಾಗಿದೆ.
ನಾನು ಕಂಡ ಅತ್ಯಂತ ಭ್ರಷ್ಟ ಸರ್ಕಾರವಿದು: ಸಂಸದ ರಮೇಶ ಜಿಗಜಿಣಗಿ
ರೈಲ್ವೆಗೆ 805% ಅಧಿಕ ನೆರವು!: 2009-14ರ ನಡುವಿನ 5 ವರ್ಷ ಅವಧಿಯಲ್ಲಿ ಯುಪಿಎ ಸರ್ಕಾರ ಕರ್ನಾಟಕಕ್ಕೆ ಕೇವಲ 835 ಕೋಟಿ ರು. ರೈಲ್ವೆ ಅನುದಾನ ನೀಡಿತ್ತು. ಆದರೆ 2023-24ರಲ್ಲಿ 7561 ಕೋಟಿ ರು. ಹಾಗೂ 2024-25ರಲ್ಲಿ 7559 ಕೋಟಿ ರು. ನೀಡಲಾಗಿದೆ. ಇದು ಯುಪಿಎನ 5 ವರ್ಷದ ಅವಧಿಗೆ ಹೋಲಿಸಿದರೆ ಶೇ.805ರಷ್ಟು ಅಧಿಕ ಎಂದು ಎನ್‌ಡಿಎ ಸರ್ಕಾರ ಹೇಳಿದೆ. ಕರ್ನಾಟಕದ 59 ರೈಲು ನಿಲ್ದಾಣಗಳನ್ನು ಅಮೃತ ರೈಲು ನಿಲ್ದಾಣಗಳೆಂದು ಘೋಷಣೆ ಅಭಿವೃದ್ಧಿಪಡಿಸುವ ಮಾಡಲಾಗಿದೆ. 7 ವಂದೇ ಭಾರತ್ ಸೇರಿ ವಿವಿಧ ಹೊಸ ರೈಲುಗಳನ್ನು ಈ ಹಿಂದೆಯೇ ಘೋಷಿಸಲಾಗಿದೆ ಎಂದು ತಿಳಿಸಿದೆ.