ಹೈದರಾಬಾದ್(ಮೇ.18): ಕೊರೋನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಅತೀ ಅವಶ್ಯಕ. ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ ಎಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಹೀಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ, ನಿಯಮ ಪಾಲಿಸದೇ ನಿಶ್ಚಿತಾರ್ಥ ಮಾಡಿದ ಕುಟುಂಬ ಇದೀಗ ಕೊರೋನಾ ವೈರಸ್ ಸಂಕಷ್ಟಕ್ಕೆ ಗುರಿಯಾಗಿದೆ.  

ದೇಶದ ಅಧ್ಯಕ್ಷರ ಮೀಟಿಂಗ್‌ನಲ್ಲೇ ಬೆತ್ತಲೆ ಸ್ನಾನ, ಇವ್ನ ಮನೆ ಹಾಳಾಗ!

ಹೈದರಾಬಾದ್‌ನ ಪುರನಪುಲ್ ಪ್ರದೇಶದಲ್ಲಿ ಕುಟುಂಬವೊಂದು ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿದೆ. ಕದ್ದು ಮುಚ್ಚಿ ಮಾಡಿದ ಎಂಗೇಜ್ಮೆಂಟ್‌ನಲ್ಲಿ ಕುಟುಂಬ  ಸದಸ್ಯರು, ನೆರೆಮನೆಯವರು, ಆಪ್ತರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ನಿಶ್ಚಿತಾರ್ಥದ ಮರುದಿನ ಹುಡಿಗಯ ತಂದೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

ಕೋವಿಡ್ 19: ಈ ವಿಪತ್ತಿಗೆ ಯಾರು ಕಾರಣ? ಪರಿಹಾರವೇನು?.

ಅತ್ತ ಹುಡುಗಿಯ ಕುಟುಂಬ ಸದಸ್ಯರು ಅನಾರೋಗ್ಯದಿಂದ ಅಸ್ಪತ್ರೆ ಸೇರಿದ್ದಾರೆ. ಪರೀಕ್ಷೆ ನಡೆಸಿದಾಗ ಕೊರೋನಾ ವೈರಸ್ ಇರುವುದು ಖಚಿತವಾಗಿದೆ.  ಇದರಿಂದ ಅಧಿಕಾರಿಗಳ ತಂಡ ಮೂಲಕ ಹುಡುಕಲು ಮುಂದಾದಾಗ ನಿಶ್ಚಿತಾರ್ಥದ ಮಾಹಿತಿ ಬಹಿರಂಗವಾಗಿದೆ. ಹೀಗೆ 40 ಮಂದಿಯನ್ನು ಪರೀಕ್ಷೆ ನಡೆಸಿದಾಗ 15 ಮಂದಿಗೆ ಕೊರೋನಾ ವೈರಸ್ ಇರುವುದು ಖಚಿತಗೊಂಡಿದೆ. ಇದೀಗ ಕೊರೋನಾ ವೈರಸ್ ದೃಢಪಟ್ಟ ವ್ಯಕ್ತಿಗಳನ್ನು ಐಸೋಲೇಶನ್ ವಾರ್ಡ್‌ಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಿಶ್ಚಿತಾರ್ಥ್ ಮಾಡಿದ ಕೇಸ್ ದಾಖಲಾಗಿದೆ. ಕುಟುಂಬ ಸದಸ್ಯರಲ್ಲಿ ಓರ್ವ ಬ್ಯಾಂಕ್ ಉದ್ಯೋಗಿಯಾಗಿದ್ದು ಈತನಿಂದ ಕೊರೋನಾ ಇಡೀ ಕುಟುಂಬಕ್ಕೆ ಹರಡಿದೆ. ಅತ್ತ ಬ್ಯಾಂಕ್ ನೌಕರರನ್ನು ಪರೀಕ್ಷೆ ಮಾಡಲಾಗಿದೆ. ಇದೀಗ ವರದಿಗಾಗಿ ಕಾಯುತ್ತಿದ್ದಾರೆ.