ದರ್ಪಕ್ಕೇನು ಹೇಳೋಣ, 100 ರೂ. ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿಪುಡಿ
ಮುಗ್ಧ ವ್ಯಾಪಾರಿಯ ಮೇಲೆ ಅಧಿಕಾರಿಗಳ ದರ್ಪ/ ಹಿಂದೆ ಮುಂದೆ ನೋಡದೆ ಮೊಟ್ಟೆ ವಾಹನ ಜಖಂ/ ನೂರು ರೂ. ಲಂಚ ಕೊಡದಿದ್ದಕ್ಕೆ ಗಾಡಿ ಧ್ವಂಸ/ ಅಧಿಕಾರಿಗಳ ಕ್ರಮಕ್ಕೆ ಖಂಡನೆ
ಇಂದೋರ್(ಜು.25) ನೂರು ರೂ. ಲಂಚ ಕೊಟ್ಟಿಲ್ಲ ಎಂಬ ಕಾರಣಕ್ಕೆ 4 ವರ್ಷದ ಹುಡುಗನ ತಳ್ಳು ಗಾಡಿಯನ್ನು ಕೆಳಕ್ಕೆ ಕೆಡಗಿದ ಅಧಿಕಾರಿಗಳು ಎಲ್ಲ ಮೊಟ್ಟೆ ಒಡೆದು ಹಾಕಿದ್ದಾರೆ.
ರಸ್ತೆ ಪಕ್ಕದಿಂದ ನಿನ್ನ ತಳ್ಳುವ ಗಾಡಿ ತೆಗಿ ಎಂದು ಪೊಲೀಸರು ಹೇಳಿದ್ದಾರೆ. ಹಾಗೆ ಬಿಡಬೇಕು ಎಂದರೆ ನೂರು ರೂ. ಲಂಚ ತಾ ಎಂದಿದ್ದಾರೆ. ಹುಡುಗ ಕೊಡಲು ಒಪ್ಪದಿದ್ದಾಗ ಹಿಂದೆ ಮುಂದೆ ನೋಡದೆ ಗಾಡಿಯನ್ನು ಬಿಸಾಡಿದ್ದು ಮೊಟ್ಟೆ ನಾಶವಾಗಿದೆ.
ರಾಯಭಾಗ ತಹಶೀಲ್ದಾರ್ ಮೇಲೆ ಶಾಶಕ ಧುರ್ಯೋಧನ ದರ್ಪ್
ಕೊರೋನಾ ಕಾರಣದಿಂದ ಮೊದಲೆ ವ್ಯಾಪಾರ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಡೀ ಕುಟುಂಬದ ಜವಾಬ್ದಾರಿ ಹುಡುಗನ ಮೇಲಿದ್ದು ಆತನ ಮೇಲೆ ಅಧಿಕಾರಿಗಳು ದರ್ಪ ತೋರಿದ್ದಾರೆ.
ಹೊಟ್ಟೆ ಪಾಡಿಗಾಗಿ ಮೊಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಹುಡುಗನ ಮೇಲೆ ದೌರ್ಜನ್ಯವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸಲಾಗಿದೆ.