ಕೋಲಾರ (ಫೆ.14) :  ಆಂಧ್ರದ ಕರ್ನೂಲ್ ಜಿಲ್ಲೆಯ ವೆಲ್ಡೂರ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 14 ಮಂದಿ ಮೃತಪಟ್ಟಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ 44 ರ ಮದರ್ಪುರಂ ಫ್ಲೈಓವರ್ ನಲ್ಲಿ ಟಿಟಿ ವಾಹನ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಈ ಅವಘಡವಾಗಿದೆ.

ಬೆಳ್ಳಂಬೆಳಗ್ಗೆ ಅಜ್ಮೀರ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಟಿಟಿ ವಾಹನದಲ್ಲಿ ಒಟ್ಟು 18 ಜನರು ಪ್ರಯಾಣ ಮಾಡುತ್ತಿದ್ದರು. 

ಆತ್ಮಹತ್ಯೆಗೆ ಯತ್ನ: ತಾಯಿ ಪಾರು, 9 ತಿಂಗಳ ಹಸುಗೂಸು ನೀರುಪಾಲು .

ಈ ಎಲ್ಲರೂ ಕೂಡ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ಸೇರಿದವರು ಎಂದು ಗುರುತಿಸಲಾಗಿದೆ. 8 ಮಹಿಳೆ,5 ಪುರುಷರು ಹಾಗೂ ಒರ್ವ ಬಾಲಕ ಸ್ಥದಲ್ಲಿ ಸಾವಿಗೀಡಾಗಿದ್ದು,  ನಾಲ್ವರು ಮಕ್ಕಳು ಈ ಅಪಘಾತದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. 

  4 ಬಾಲಕರು ಗಂಭೀರವಾಗಿದ್ದು ಕನೂರ್ಲ್ ಅಸ್ಪತ್ರೆಗೆ ದಾಖಲಿಸಲಾಗಿದೆ.