Asianet Suvarna News Asianet Suvarna News

ಹೆಚ್ಚುತ್ತಿರೋ ಕೊರೋನಾ ಮಧ್ಯೆ ಯುಪಿಯಲ್ಲಿ 14 ವೈದ್ಯರ ರಾಜೀನಾಮೆ

  • ಕೊರೋನಾ ಎರಡನೇ ಅಲೆಯ ಭೀಕರತೆ ಮಧ್ಯೆ ರಾಜೀನಾಮೆ ಕೊಟ್ಟ ವೈದ್ಯರು
  • ಉತ್ತರ ಪ್ರದೇಶದಲ್ಲಿ 14 ವೈದ್ಯರು ರಾಜೀನಾಮೆ
14 doctors in UP resign over misbehaviour mental harassment by admin officers dpl
Author
Bangalore, First Published May 13, 2021, 4:11 PM IST

ಲಕ್ನೋ(ಮೇ.13): ಉತ್ತರ ಪ್ರದೇಶದ ಉನ್ನಾವೊದ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ವೈದ್ಯರು ರಾಜೀನಾಮೆ ಕೊಟ್ಟಿದ್ದಾರೆ.

ಆಡಳಿತ ಅಧಿಕಾರಿಗಳ ಅವ್ಯವಹಾರ ಮತ್ತು ಮಾನಸಿಕ ಕಿರುಕುಳ ಆರೋಪದ ಮೇಲೆ ಕೊರೋನಾ ಹೆಚ್ಚಳದ ಮಧ್ಯೆಯೂ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜೀನಾಮೆ ಕುರಿತು ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಯುವವರೆಗೂ ತಮ್ಮ ಕೊರೋನಾ ಸಂಬಂಧಿತ ಕೆಲಸಗಳಿಗೆ ತೊಂದರೆಯಾಗುವುದಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಆಕ್ಸಿಜನ್, ಲಸಿಕೆ, ಔಷಧ ಜೊತೆ ಪಿಎಂ ಮೋದಿಯೂ ಮಾಯ: ರಾಹುಲ್ ವ್ಯಂಗ್ಯ!

ಇಲ್ಲಿನ ಸಿಎಚ್‌ಸಿ ಮತ್ತು ಪಿಎಚ್‌ಸಿಗಳ ಉಸ್ತುವಾರಿ ಹೊಂದಿರುವ ಹದಿನಾಲ್ಕು ವೈದ್ಯರು ಬುಧವಾರ ಸಂಜೆ ಸಿಎಮ್‌ಒ ಕಚೇರಿಯಲ್ಲಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರಗಳ ಪ್ರತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ), ಮಹಾನಿರ್ದೇಶಕರು (ಆರೋಗ್ಯ) ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ನಾವು ಪ್ರಾಂತೀಯ ವೈದ್ಯಕೀಯ ಸೇವೆಗಳ (ಪಿಎಂಎಸ್) ಸಂಘದ ಬ್ಯಾನರ್ ಅಡಿಯಲ್ಲಿ ಹೋರಾಡುವುದಿಲ್ಲ. ಇದು ನಮ್ಮ ಹೋರಾಟ. ಕಳೆದ ಒಂದು ವರ್ಷದಿಂದ ನಾವು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ಸಂಪನ್ಮೂಲಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಡಿಎಂ ಮತ್ತು ಸಿಎಮ್ಒ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಸಹಕರಿಸುವ ಬದಲು , ಆಡಳಿತ ಅಧಿಕಾರಿಗಳು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಡಾ ಸಂಜೀವ್ ಆರೋಪಿಸಿದ್ದಾರೆ.

ಕೋವಿಡ್‌ನಿಂದ ಗುಣಮುಖರಾದವರಿಗೆ ಲಸಿಕೆ ಯಾವಾಗ? NTAGI ಮಹತ್ವದ ಸೂಚನೆ!

ನಮ್ಮ ಕೆಲಸವನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಮಟ್ಟದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಕ್ರೋಶಗೊಂಡ ವೈದ್ಯರು ತಮ್ಮ ಸಂಬಳವನ್ನೂ ಹಲವಾರು ಬಾರಿ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಆದರೆ, ಮುಖ್ಯ ವೈದ್ಯಾಧಿಕಾರಿ (ಸಿಎಮ್‌ಒ) ಅಶುತೋಷ್ ಕುಮಾರ್ ಎಲ್ಲಾ ಆರೋಪ ನಿರಾಕರಿಸಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಜೆ ಭೇಟಿಯಾದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.

Follow Us:
Download App:
  • android
  • ios