Asianet Suvarna News Asianet Suvarna News

13 ನಗರಗಳಲ್ಲಿ ದೇಶದ ಶೇ.66ರಷ್ಟು ಸೋಂಕು, ಸಾವು!

13 ನಗರಗಳಲ್ಲಿ ದೇಶದ 2/3 ಸೋಂಕು, ಸಾವು!| ಮುಂಬೈ, ದೆಹಲಿ, ಅಹಮದಾಬಾದ್‌ಗಳು ಹೆಚ್ಚು ತತ್ತರ| ಕರ್ನಾಟಕ, ಪಂಜಾಬ್‌ನ ನಗರಗಳಲ್ಲಿ ಸೋಂಕು ಕಡಿಮೆ

13 urban cities account for 66 percent of of India Coronavirus cases and deaths
Author
Bangaan, First Published May 5, 2020, 8:29 AM IST

ನವದೆಹಲಿ(ಮೇ.05): ಮಹಾಮಾರಿ ಕೊರೋನಾ ವೈರಸ್‌ ದೇಶದ ಮಹಾನಗರಗಳನ್ನೇ ಹೆಚ್ಚಾಗಿ ಬಾಧಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ದೇಶದಲ್ಲಿ ಈವರೆಗೆ ಪತ್ತೆಯಾಗಿರುವ ಕೊರೋನಾ ವೈರಸ್‌ ಸೋಂಕಿತರು ಹಾಗೂ ಸಾವಿಗೀಡಾದವರಲ್ಲಿ 3ನೇ 2ರಷ್ಟುಮಂದಿ 13 ನಗರಗಳಿಗೆ ಸೇರಿದವರಾಗಿದ್ದಾರೆ ಎಂಬ ಮಾಹಿತಿ ಬಯಲಾಗಿದೆ.

900 ಹೊಸ ಮದ್ಯದಂಗಡಿ ತೆರೆಯಲು ನಿರ್ಧಾರ!

ದೇಶದ 13 ನಗರಗಳಲ್ಲಿ ತಲಾ 500ಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ. ಆ ಪೈಕಿ ಮುಂಬೈ, ದೆಹಲಿ ಹಾಗೂ ಅಹಮದಾಬಾದ್‌ ನಗರಗಳು ಕೊರೋನಾ ವೈರಸ್‌ನಿಂದ ತೀವ್ರ ರೀತಿಯಲ್ಲಿ ತತ್ತರಿಸಿಹೋಗಿವೆ. ದೇಶದ ಒಟ್ಟು ಸೋಂಕಿತರಲ್ಲಿ ಶೇ.66 ಮಂದಿ ಹಾಗೂ ಮೃತರಲ್ಲಿ ಶೇ.70ರಷ್ಟುಜನರು 13 ನಗರಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೆಲವು ರಾಜ್ಯಗಳಲ್ಲಿ ಅಲ್ಲಿನ ಪ್ರಮುಖ ನಗರಗಳಲ್ಲೇ ಶೇ.90ರಷ್ಟುಪ್ರಕರಣಗಳು ವರದಿಯಾಗಿವೆ. ದೆಹಲಿ, ಪಶ್ಚಿಮ ಬಂಗಾಳ, ಗುಜರಾತ್‌, ಮಹಾರಾಷ್ಟ್ರದಲ್ಲಿ ಈ ರೀತಿ ಆಗಿದೆ. ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶದಲ್ಲಿನ ಮಹಾನಗರಗಳಲ್ಲಿ ಶೇ.50ಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಆದರೆ ಕರ್ನಾಟಕ, ಪಂಜಾಬ್‌, ಬಿಹಾರ, ಜಾರ್ಖಂಡದಲ್ಲಿ ಪತ್ತೆಯಾಗಿರುವ ಸೋಂಕುಗಳಿಗೆ ಮಹಾನಗರಗಳ ಪಾಲು ಶೇ.30ಕ್ಕಿಂತ ಕಡಿಮೆ ಇದೆ ಎಂದು ಹೇಳಿವೆ.

Follow Us:
Download App:
  • android
  • ios