ದುಬೈ COP28 ಶೃಂಗಸಭೆ ವೇದಿಕೆಗೆ ಇದ್ದಕ್ಕಿದ್ದಂತೆ ನುಗ್ಗಿದ ಭಾರತದ ಬಾಲಕಿ: ಕಾರಣ ಇಲ್ಲಿದೆ..
ಈ ಪ್ರತಿಭಟನೆಯ ನಂತರ ಅವರು ನನ್ನನ್ನು 30 ನಿಮಿಷಗಳ ಕಾಲ ವಶಕ್ಕೆ ಪಡೆದಿದ್ದರು. ನನ್ನ ಏಕೈಕ ಅಪರಾಧ - ಇಂದಿನ ಹವಾಮಾನ ಬಿಕ್ಕಟ್ಟಿನ ಪ್ರಮುಖ ಕಾರಣವಾದ ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ತೆಗೆದುಹಾಕಲು ಕೇಳಿದ್ದು. ಈಗ ಅವರು COP28 ನಿಂದ ನನ್ನನ್ನು ಹೊರಕ್ಕೆ ಕಳಿಸಿದ್ದಾರೆ ಎಂದೂ ಹೇಳಿಕೊಂಡಿದ್ದಾಳೆ.
ದುಬೈ (ಡಿಸೆಂಬರ್ 12, 2023): ದುಬೈನಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ 2023 (COP28) ನಡೆಯುತ್ತಿದ್ದು, ಇಂದು ಕೊನೆಯ ದಿನವಾಗಿದೆ. ಆದರೆ, ಈ ಶೃಂಗಸಭೆಯ ವೇಳೆ ಭಾರತದ ಮಣಿಪುರ ಮೂಲದ 12 ವರ್ಷದ ಹವಾಮಾನ ಕಾರ್ಯಕರ್ತೆ ವೇದಿಕೆಗೆ ನುಗ್ಗಿ ಕೆಲ ಕಾಲ ಸಂಚಲನ ಸೃಷ್ಟಿ ಮಾಡಿದ್ದಾಳೆ.
ಮಣಿಪುರದ 12 ವರ್ಷದ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಪಳೆಯುಳಿಕೆ ಇಂಧನಗಳನ್ನು ಕೊನೆಗೊಳಿಸಿ. ನಮ್ಮ ಗ್ರಹ ಮತ್ತು ನಮ್ಮ ಭವಿಷ್ಯವನ್ನು ಉಳಿಸಿ ಎಂಬ ಫಲಕ ಹಿಡಿದುಕೊಂಡು ವೇದಿಕೆಯ ಮೇಲೆ ಹೋಗಿ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾಳೆ. ವೇದಿಕೆಯ ಮೇಲೆ ಧಾವಿಸಿದ ನಂತರ ಒಂದು ಸಣ್ಣ ಭಾಷಣವನ್ನು ಮಾಡಿದ ಬಾಲಕಿ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ವಿರೋಧಿಸಿದಳು. ಅದಕ್ಕಾಗಿ ಅವಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಕೊಂಡಿದ್ದು, ಬಳಿಕ, ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಲಾಗಿದೆ.
ಇದನ್ನು ಓದಿ: ಅಭಿವೃದ್ಧಿ - ಪರಿಸರ ಸಮತೋಲನಕ್ಕೆ ಜಗತ್ತಿಗೇ ಭಾರತ ಮಾದರಿ: ಮೋದಿ; ಗ್ರೀನ್ ಕ್ರೆಡಿಟ್ ಪ್ರಸ್ತಾಪಿಸಿದ ಪ್ರಧಾನಿ
ಬಳಿಕ, COP28 ಡೈರೆಕ್ಟರ್-ಜನರಲ್ ರಾಯಭಾರಿ ಮಜಿದ್ ಅಲ್ ಸುವೈದಿ ಬಾಲಕಿಯ ಉತ್ಸಾಹವನ್ನು ಮೆಚ್ಚಿದ್ದು, ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರೇಕ್ಷಕರಿಗೆ ಮತ್ತೊಂದು ಸುತ್ತಿನ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹಿಸಲು ಮನವಿ ಮಾಡಿಕೊಂಡರು.
ಆದರೆ, ಈ ಘಟನೆ ಬಗ್ಗೆ ಮಣಿಪುರದ ಕಾರ್ಯಕರ್ತೆ ಎಕ್ಸ್ (ಈ ಹಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದು, ಈ ಪ್ರತಿಭಟನೆಯ ನಂತರ ಅವರು ನನ್ನನ್ನು 30 ನಿಮಿಷಗಳ ಕಾಲ ವಶಕ್ಕೆ ಪಡೆದಿದ್ದರು. ನನ್ನ ಏಕೈಕ ಅಪರಾಧ - ಇಂದಿನ ಹವಾಮಾನ ಬಿಕ್ಕಟ್ಟಿನ ಪ್ರಮುಖ ಕಾರಣವಾದ ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ತೆಗೆದುಹಾಕಲು ಕೇಳಿದ್ದು. ಈಗ ಅವರು COP28 ನಿಂದ ನನ್ನನ್ನು ಹೊರಕ್ಕೆ ಕಳಿಸಿದ್ದಾರೆ ಎಂದೂ ಹೇಳಿಕೊಂಡಿದ್ದಾಳೆ.
Breaking: 2028 ರಲ್ಲಿ COP33 ಹವಾಮಾನ ಶೃಂಗಸಭೆ ಆಯೋಜನೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ ಪ್ರಸ್ತಾಪ
ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ, ‘ಪಳೆಯುಳಿಕೆ ಇಂಧನಗಳ ವಿರುದ್ಧ ಪ್ರತಿಭಟಿಸುವುದಕ್ಕಾಗಿ ನನ್ನ ಬ್ಯಾಡ್ಜ್ ಅನ್ನು ಸೀಜ್ ಮಾಡಲು ಕಾರಣವೇನು? ನೀವು ನಿಜವಾಗಿಯೂ ಪಳೆಯುಳಿಕೆ ಇಂಧನಗಳ ವಿರುದ್ಧ ನಿಂತಿದ್ದರೆ, ನೀವು ನನ್ನನ್ನು ಬೆಂಬಲಿಸಬೇಕು ಮತ್ತು ನೀವು ತಕ್ಷಣ ನನ್ನ ಬ್ಯಾಡ್ಜ್‌ಗಳನ್ನು ಬಿಡುಗಡೆ ಮಾಡಬೇಕು. ಇದು ವಿಶ್ವಸಂಸ್ಥೆ ತತ್ವಕ್ಕೆ ವಿರುದ್ಧವಾದ ವಿಶ್ವಸಂಸ್ಥೆಯ ಆವರಣದಲ್ಲಿ ಮಕ್ಕಳ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮತ್ತು ದುರುಪಯೋಗ. ಹಾಗೂ ವಿಶ್ವಸಂಸ್ಥೆಯಲ್ಲಿ ನನ್ನ ಧ್ವನಿ ಎತ್ತುವ ಹಕ್ಕು ನನಗಿದೆ’ ಎಂದೂ ಬರೆದುಕೊಂಡಿದ್ದಾಳೆ.
ಪಳೆಯುಳಿಕೆ ಇಂಧನಗಳನ್ನು ಹಂತ ಹಂತವಾಗಿ ನಿಲ್ಲಿಸುವುದು COP28 ನಲ್ಲಿ ನಡೆಯುತ್ತಿರುವ ಚರ್ಚೆಯಾಗಿದ್ದು, ಸಮಸ್ಯೆಯನ್ನು ಪರಿಹರಿಸಲು ಸುಮಾರು 200 ದೇಶಗಳು ಭಾಗಿಯಾಗಿವೆ. 190 ರಾಷ್ಟ್ರಗಳ ಸುಮಾರು 60,000 ಪ್ರತಿನಿಧಿಗಳು ದುಬೈನಲ್ಲಿ ಈ ವರ್ಷದ ಹವಾಮಾನ ಶೃಂಗಸಭೆಯ ಭಾಗವಾಗಿದ್ದಾರೆ. 12 ವರ್ಷದ ಬಾಲಕಿ ಟಿಮೋರ್ ಲೆಸ್ಟಿ ವಿಶೇಷ ಪ್ರತಿನಿಧಿ.