Asianet Suvarna News Asianet Suvarna News

ಒಂದೇ ಚಿತೆಯಲ್ಲಿ ಕುಟುಂಬದ 10 ಮಂದಿಯ ಅಂತ್ಯಸಂಸ್ಕಾರ, ಬದುಕುಳಿದಿದ್ದು ಕೇವಲ ಒಬ್ಬ ಮಗಳು!

* ರಾಜಸ್ಥಾನದಲ್ಲಿ ಭೀಕರ ಅಪಘಾತ

* ಒಂದೇ ಕುಟುಂಬದ 10 ಮಂದಿ ಸೇರಿ ಒಟ್ಟು 11 ಸಾವು

* ಸುಮರ್ ಕುಟುಂಬದಲ್ಲಿ ಬದುಕುಳಿದಿದ್ದು ಈಗ ಒಬ್ಬಳೇ ಮಗಳು 

11 of a family killed in an accident in Rajasthan President and PM mourn tragedy pod
Author
Banaganapalli, First Published Apr 20, 2022, 1:53 PM IST

ಜೈಪುರ(ಏ.20): ರಾಜಸ್ಥಾನದ ಜುಂಜುನು ಎಂಬಲ್ಲಿ ಮಂಗಳವಾರ ಸ್ನಾನ ಮುಗಿಸಿ ವಾಪಸಾಗುತ್ತಿದ್ದಾಗ ಅವಘಡಕ್ಕೆ ಬಲಿಯಾದ ಕುಟುಂಬದ 10 ಮಂದಿಯನ್ನು ಒಟ್ಟಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಖೇತ್ರಿ ಪಟ್ಟಣದ ಬರಾವು ಗ್ರಾಮದ ಒಂದೇ ಕುಟುಂಬದ 10 ಮಂದಿಯ ಶವಸಂಸ್ಕಾರದ ಚಿತಾಗಾರ ಸಿದ್ಧಗೊಂಡಾಗ ಎಲ್ಲರ ಮನದಲ್ಲೂ ದುಃಖ ಮನೆ ಮಾಡಿದೆ. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಯಾವ ಮನೆಯಲ್ಲೂ ಒಲೆ ಉರಿಯಲಿಲ್ಲ. ಇದಕ್ಕೂ ಮುನ್ನ ಎಲ್ಲರ ಮೃತದೇಹ ಗ್ರಾಮ ತಲುಪಿದಾಗ ಇಡೀ ಗ್ರಾಮದಲ್ಲಿ ಭಾವಾವೇಶದ ಅಲೆ ಎದ್ದಿತ್ತು, ಗೋಳಾಟ, ಕಿರುಚಾಟ ಇಡೀ ಗ್ರಾಮವನ್ನು ಆವರಿಸಿತ್ತು.

ಒಂದೇ ಬಾರಿ ಹತ್ತು ಮಂದಿಯ ಅಂತ್ಯಸಂಸ್ಕಾರ

ಹತ್ತು ಸದಸ್ಯರ ಶವ ಒಂದೇ ಬಾರಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಾಗ, ಕುಟುಂಬ ಸದಸ್ಯರನ್ನು ನಿಭಾಯಿಸುವುದು ಕಷ್ಟಕರವಾಯಿತು. ಜಿಲ್ಲಾಧಿಕಾರಿ ಲಕ್ಷ್ಮಣ್ ಸಿಂಗ್ ಕುಡಿ, ಎಸ್ಪಿ ಪ್ರದೀಪ್ ಮೋಹನ್ ಶರ್ಮಾ, ಮುಖ್ಯಮಂತ್ರಿಗಳ ಸಲಹೆಗಾರ ಡಾ.ಜಿತೇಂದ್ರ ಸಿಂಗ್, ಪ್ರಾಂಶುಪಾಲರಾದ ಮನೀಶಾ ಗುರ್ಜಾರ್, ಉಪವಿಭಾಗಾಧಿಕಾರಿ ಜೈಸಿಂಗ್, ಉಪವಿಭಾಗಾಧಿಕಾರಿ ರಾಜೇಶ್ ಕಸಾನ, ತಹಸೀಲ್ದಾರ್ ವಿವೇಕ್ ಕಟಾರಿಯಾ ಸೇರಿದಂತೆ ಹತ್ತಾರು ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು. 

ಸುಮರ್ ಕುಟುಂಬದಲ್ಲಿ ಬದುಕುಳಿದಿದ್ದು ಈಗ ಒಬ್ಬಳೇ ಮಗಳು 

ಅಪಘಾತದಲ್ಲಿ ಗಿರ್ಧಾರಿ ಲಾಲ್ ಅವರ ಮಗ ಸುಮೇರ್ ಅವರ ಇಡೀ ಕುಟುಂಬ ನಾಶವಾಯಿದೆ. ಸುಮೇರ್, ಅವರ ಪತ್ನಿ ರಾಜಬಾಲಾ, ಇಬ್ಬರು ಮಕ್ಕಳಾದ ಕರ್ಮವೀರ್ ಮತ್ತು ರಾಹುಲ್ ಅವರ ಸಾವನ್ನಪ್ಪಿದ್ದು, ಈಗ ಮಗಳು ದೀಪಿಕಾ ಮನೆಯಲ್ಲಿ ಉಳಿದಿದ್ದಾರೆ. ಅಪಘಾತದ ನಂತರ ಆಕೆ ಪ್ರಜ್ಞಾಹೀನಳಾಗಿದ್ದಳು. ಅಂತಿಮ ವರ್ಷ ಓದುತ್ತಿರುವ ದೀಪಿಕಾ ಪರೀಕ್ಷೆಯ ಕಾರಣ ಲೋಹಗರ್ಲ್‌ಗೆ ಹೋಗಿರಲಿಲ್ಲ.

ರಾಷ್ಟ್ರಪತಿ ಸಂತಾಪ, ಪಿಎಂಒ ಆರ್ಥಿಕ ನೆರವು

ರಾಷ್ಟ್ರಪತಿ ರಾಮನಾಥ್ ಕೋವಿದ್ ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 'ಜುಂಜುನುವಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಸುದ್ದಿ ತಿಳಿದು ನನಗೆ ಅತೀವ ದುಃಖವಾಗಿದೆ. ಈ ಅಪಘಾತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಘಟನೆಯನ್ನು ದುರಂತ ಎಂದು ಬಣ್ಣಿಸಿರುವ ಪ್ರಧಾನಿ ಕಾರ್ಯಾಲಯ ಕೂಡ ಆರ್ಥಿಕ ನೆರವು ನೀಡಲು ಮುಂದಾಗಿದೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಿದೆ ಎಂದು ಪಿಎಂಒ ಟ್ವೀಟ್ ಮಾಡಿದೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಟ್ವೀಟ್ ಮಾಡಿದ್ದಾರೆ. ಜಿಲ್ಲಾಡಳಿತವು ಮೃತರ ಮುಂದಿನ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀಡಲಿದೆ.

ಟ್ರ್ಯಾಕ್ಟರ್ ಡಿಕ್ಕಿ: 11 ಮಂದಿ ಸಾವು

ಕೃಷ್ಣನಗರದಲ್ಲಿ ಗಿರ್ಧಾರಿ ಲಾಲ್ ಯಾದವ್ ನಿಧನರಾದ 15 ದಿನಗಳ ನಂತರ, ಕುಟುಂಬವು ಅಸ್ಥಿ ವಿಸರ್ಜನೆ ಮತ್ತು ಸ್ನಾನಕ್ಕಾಗಿ ಲೋಹಗಲ್‌ಗೆ ಹೋಗಿದೆ ಎಂಬಬುವುದು ಉಲ್ಲೇಖನೀಯ. ಅಲ್ಲಿಂದ ಹಿಂತಿರುಗುತ್ತಿದ್ದಾಗ ಗುಡಗೌಡಜಿ ಬಳಿ ಕುಟುಂಬ ಸದಸ್ಯರಿದ್ದ ಪಿಕಪ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 10 ಮಂದಿ ಒಂದೇ ಕುಟುಂಬಕ್ಕೆ ಸೇರಿದವರು. ಹಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos
Follow Us:
Download App:
  • android
  • ios