ತಿರುವನಂತಪುರ[ನ.22]:: ಇಂದಿನ ಯುವಕರಿಗೆ ಓದು ಬರಹ ಎಂದರೆ ಅಲರ್ಜಿ. ಆದರೆ, ಇಲ್ಲೊಬ್ಬ 105 ವರ್ಷದ ಅಜ್ಜಿಯ ಅಕ್ಷರದ ಹಸಿವು ಕಂಡರೆ ಬೆರಗು ಮೂಡಿಸುತ್ತದೆ.

ಕೇರಳದ ಕೊಲ್ಲಂನ ಭಾಗೀರಥಿ ಅಮ್ಮ ಎಂಬ ಹಿರಿಯಜ್ಜಿ ರಾಜ್ಯ ಸಾಕ್ಷರತಾ ಮಿಷನ್‌ನ 4ನೇ ತರಗತಿಗೆ ಸಮಾನವಾದ ಪರೀಕ್ಷೆ ಬರೆದಿದ್ದಾರೆ. ಮೂರು ದಿನದಲ್ಲಿ ಗಣಿತ, ಪರಿಸರ ವಿಜ್ಞಾನ, ಮಲೆಯಾಳಂ ಭಾಷೆಯ ಪರೀಕ್ಷೆ ಬರೆದಿದ್ದಾರಂತೆ.ಬರೆಯಲು ಇವರಿಗೆ ಸ್ವಲ್ಪ ಕಷ್ಟವಾದ್ದರಿಂದ ಮಗಳ ಸಹಾಯದಿಂದ ಪರೀಕ್ಷೆ ಎದುರಿಸಿದ್ದಾರೆ.

ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾದ 21 ವರ್ಷದ ಯುವಕ!

ಭಾಗೀರಥಿ ಅಮ್ಮ ಅವರು ಕುಟುಂಬ ನಿರ್ವಹಣೆ ಹಿನ್ನೆಲೆ, ತಮ್ಮ 9ನೇ ವಯಸ್ಸಿನಲ್ಲಿ ಶಿಕ್ಷಣದಿಂದ ವಿಮುಖವಾಗಿದ್ದರು. ಆದರೆ, ಶಿಕ್ಷಣ ಪಡೆಯುವ ತುಡಿತ ಅವರಿಂದ ದೂರವಾಗಿರಲಿಲ್ಲ. ಇದೀಗ ನಾಲ್ಕನೇ ತರಗತಿಗೆ ಸಮಾನವಾದ ಪರೀಕ್ಷೆ ಬರೆದು ರಾಜ್ಯ ಸಾಕ್ಷರತಾ ಮಿಷನ್‌ ಅಭಿಯಾನದಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಹಿರಿಯ ವ್ಯಕ್ತಿ ಎಂದು ಹೆಸರಾಗಿದ್ದಾರೆ.