Asianet Suvarna News Asianet Suvarna News

ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾದ 21 ವರ್ಷದ ಯುವಕ!

ರಾಜಸ್ಥಾನ ನ್ಯಾಯಾಂಗ ಸೇವೆ ಪರೀಕ್ಷೆ ಪಾಸಾದ 21 ವರ್ಷದ ಯುವಕ| ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಮಯಾಂಕ್ ಪ್ರತಾಪ್ ಸಿಂಗ್ ಪಾತ್ರ| 2018ರ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಯಾಂಕ್| 2014ರಲ್ಲಿ ರಾಜಸ್ಥಾನ ವಿವಿಯಲ್ಲಿ LLB ಕೋರ್ಸ್ ಸೇರಿದ್ದ ಮಯಾಂಕ್| 

Meet Mayank Pratap Singh From Jaipur India Youngest Judge
Author
Bengaluru, First Published Nov 22, 2019, 2:22 PM IST

ಜೈಪುರ್(ನ.22): ರಾಜಸ್ಥಾನ ನ್ಯಾಯಾಂಗ ಸೇವೆ ಪರೀಕ್ಷೆ ಪಾಸಾಗುವ ಮೂಲಕ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್, ದೇಶದ ಅತ್ಯಂತ ಕಿರಿಯ ನ್ಯಾಯಮೂರ್ತಿಯಾಗಿ ದಾಖಲೆ ಬರೆದಿದ್ದಾರೆ.

ಜೈಪುರ್ ಮೂಲದ ಮಯಾಂಕ್ ಪ್ರತಾಪ್ 2018ರ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೇವಲ 21 ವರ್ಷದ ವಯೋಮಾನದ ಮಯಾಂಕ್ ಇದೀಗ ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2014ರಲ್ಲಿ ರಾಜಸ್ಥಾನ ವಿವಿಯಲ್ಲಿ ಐದು ವರ್ಷದ LLB ಕೋರ್ಸ್’ಗೆ ಸೇರಿದ ಮಯಾಂಕ್, ಪ್ರಸ್ತುತ ವರ್ಷದಲ್ಲಿ ಶಿಕ್ಷಣ ಪೂರ್ಣಗೊಳಿಸಿರುವುದು ವಿಶೇಷ.

ಈ ಮೊದಲು ನ್ಯಾಯಮೂರ್ತಿ ಪರೀಕ್ಷೆಗಾಗಿ 23 ವರ್ಷ ವಯೋಮಾನದ ಮಾನದಂಡವಿತ್ತು. ಆದರೆ ಇದೇ ವರ್ಷ ರಾಜಸ್ಥಾನ ಹೈಕೋರ್ಟ್ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಿ ಆದೇಶ ಹೊರಡಿಸಿತ್ತು.

ಇನ್ನು ನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ಮಯಾಂಕ್, ತಮ್ಮ ಶಿಕ್ಷಣಕ್ಕೆ ಸಹಕಾರ ನೀಡಿದ ಪೋಷಕರು, ಶಿಕ್ಷಕರು ಹಾಗೂ ಗೆಳೆಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

Follow Us:
Download App:
  • android
  • ios