ಲಸ್ಸಿ ಕುಡಿದ ಗ್ರಾಮಸ್ಥರು ಅಸ್ವಸ್ಥ | ಮಕ್ಕಳು ಸೇರಿದಂತೆ ಕನಿಷ್ಠ 100 ಜನರಿಗೆ ಅನಾರೋಗ್ಯ
ಒಡಿಶಾ(ಮೇ.02): ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಶುಕ್ರವಾರ ಲಸ್ಸಿ ಸೇವಿಸಿದ ನಂತರ ಮಕ್ಕಳು ಸೇರಿದಂತೆ ಕನಿಷ್ಠ 100 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಕಂಗೇರಿಯ ಪಾಡಿಯಾ ಬ್ಲಾಕ್‌ನಡಿಯಲ್ಲಿರುವ ಕುರ್ತಿ ಗ್ರಾಮದ ಜನರು ಕುರ್ತಿ ಟೋಪಿ (ಜಾತ್ರೆ) ಗೆ ಹೋಗಿದ್ದರು. ಆದರೆ, ಮನೆಗೆ ಮರಳಿದ ನಂತರ ಅವರಲ್ಲಿ ಹೆಚ್ಚಿನವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಹಾಗಯೆಏ ವಾಂತಿ ಮಾಡಲು ಪ್ರಾರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ಇನ್ಫೆಕ್ಷನ್: ಈ ಎರಡು ತರಕಾರಿಗಳ ರಸ ಕುಡಿದು ಜಾದೂ ನೋಡಿ
ಅವರಲ್ಲಿ ಸುಮಾರು 60 ಮಂದಿ ಮಧ್ಯರಾತ್ರಿಯ ಹೊತ್ತಿಗೆ ಗಂಭೀರವಾಗಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಲಸ್ಸಿ ಮಾರಾಟಗಾರನು ಅದನ್ನು ಕಲುಷಿತಗೊಳಿಸಿದ ಪಾನೀಯದಲ್ಲಿ ತಯಾರಿಸಿದ್ದಾನೋ ಅಥವಾ ಏನನ್ನಾದರೂ ಬೆರೆಸಿದ್ದಾನೆ ಎಂದು ಮಲ್ಕಂಗಿರಿ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಪ್ರಫುಲ್ಲಾ ನಂದ ಹೇಳಿದ್ದಾರೆ. ನಾವು ಪಾನೀಯದ ಮಾದರಿಯನ್ನು ಪರೀಕ್ಷೆಗಳಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಸಿಡಿಎಂಒ ಮಾಹಿತಿ ಪಡೆದ ನಂತರ, ವೈದ್ಯಕೀಯ ತಂಡವು ಪ್ರದೇಶವನ್ನು ತಲುಪಿ ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಂಡಿತು. ಗಂಭೀರ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಗ್ನಿಶಾಮಕ ಸೇವಾ ತಂಡವನ್ನು ಸಹ ಸೇವೆಗೆ ಒತ್ತಾಯಿಸಲಾಗಿದೆ.
ಹೆಚ್ಚಿನ ರೋಗಿಗಳ ಸ್ಥಿತಿ ಈಗ ಸ್ಥಿರವಾಗಿದೆ. ಅವರನ್ನು ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಯಿತು ಎಂದು ವೈದ್ಯರೊಬ್ಬರು ಹೇಳಿದರು.
