Asianet Suvarna News Asianet Suvarna News

ಸ್ವಾತಂತ್ರ್ಯೋತ್ಸವದ ನಾಟಕ ರಿಹರ್ಸಲ್: ಭಗತ್‌ ಸಿಂಗ್ ನೇಣಿಗೆ ಹಾಕುವ ಸೀನ್‌ನಲ್ಲಿ ಆಕಸ್ಮಿಕ ಆತ್ಮಹತ್ಯೆ

  • ಭಗತ್ ಸಿಂಗ್ ನೇಣಿಗೆ ಹಾಕುವ ಸೀನ್ ಅಭ್ಯಾಸ ಮಾಡಿದ ಬಾಲಕ
  • ತಿಳಿಯದೇ ನೇಣಿಗೆ ಶರಣಾದ 10 ವರ್ಷದ ವಿದ್ಯಾರ್ಥಿ
10 year old mistakenly hangs self while enacting Bhagat Singhs execution in UP dpl
Author
Bangalore, First Published Jul 31, 2021, 4:50 PM IST
  • Facebook
  • Twitter
  • Whatsapp

ಬಡೌನ್(ಜು.31): ಸ್ವಾತಂತ್ರ್ಯೋತ್ಸವ ಸಮೀಪಿಸಿದೆ. ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಮಕ್ಕಳ ಕಾರ್ಯಕ್ರಮ, ಸ್ಪರ್ಧೆ, ಆಚರಣೆಯ ತಯಾರಿ ನಡೆಯುತ್ತಿದೆ. ಈ ಸಂದರ್ಭ ಉತ್ತರ ಪ್ರದೇಶದ ಹಳ್ಳಿಯೊಂದಲ್ಲಿ ಬಾಲಕ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕುವ ದೃಶ್ಯ ಅಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದ್ದ ನಾಟಕಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನನ್ನು ನೇಣಿಗೇರಿಸುವ ದೃಶ್ಯವನ್ನು 10 ವರ್ಷದ ಬಾಲಕ ಉತ್ತರ ಪ್ರದೇಶದ ಬಡೌನ್ ಹಳ್ಳಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಶನಿವಾರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಘಟನೆ ನಡೆದ ತಕ್ಷಣ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡದೆ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಕುನ್ವರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬತ್ ಗ್ರಾಮದ ನಿವಾಸಿಯಾದ ಭೂರೆ ಸಿಂಗ್ ಅವರ ಪುತ್ರ ಶಿವಂ ಇತರ ಮಕ್ಕಳೊಂದಿಗೆ ನಾಟಕದ ಅಭ್ಯಾಸ ಮಾಡುತ್ತಿದ್ದ.

ಸೂಟ್‌ಕೇಸಲ್ಲಿ ಸೊಸೆ, ಬ್ಯಾಗ್‌ನಲ್ಲಿ ಅಳಿಯನ ದೇಹವಿಟ್ಟು ತಿಂಗಳುಗಟ್ಟಲೆ ಸುತ್ತಿದ್ಲು

ಭಗತ್ ಸಿಂಗ್ ನನ್ನು ಗಲ್ಲಿಗೇರಿಸುವ ದೃಶ್ಯವನ್ನು ಪುನಃ ಪ್ರದರ್ಶಿಸುವಾಗ ಶಿವಂ ಆತನ ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿದ್ದಾನೆ. ಆದರೆ ಅವನು ನಿಂತಿದ್ದ ಸ್ಟೂಲ್ ಜಾರಿಹೋಗಿತು ಎಂದು ಸ್ಥಳೀಯರು ಹೇಳಿದ್ದಾರೆ.

ಇತರ ಮಕ್ಕಳು ಗಾಬರಿಗೊಂಡರು ಮತ್ತು ಸಹಾಯಕ್ಕಾಗಿ ಕಿರುಚಿಕೊಂಡಿದ್ದರು. ನಂತರ ಕೆಲವು ಸ್ಥಳೀಯ ನಿವಾಸಿಗಳು ಅಲ್ಲಿಗೆ ಆಗಮಿಸಿದರು.  ಕುಣಿಕೆ ಕತ್ತರಿಸಿದ ನಂತರ ಶಿವಂ ಅವರನ್ನು ಕೆಳಕ್ಕೆ ಕರೆತರಲಾಗಿತ್ತು. ಆದರೆ ಅವರು ಆ ವೇಳೆಗೆ ಮೃತಪಟ್ಟಿದ್ದರು ಎಂದು ಜನ ತಿಳಿಸಿದ್ದಾರೆ.

ಕುನ್‌ರಗಾಂವ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ನೇತೃತ್ವದ ತಂಡವನ್ನು ಶುಕ್ರವಾರ ಗ್ರಾಮಕ್ಕೆ ಕಳುಹಿಸಲಾಗಿದೆ. ಆದರೆ ಹುಡುಗ ಹೇಗೆ ಸಾವನ್ನಪ್ಪಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ ಎಂದು ಎಸ್‌ಎಸ್‌ಪಿ ಬದೌನ್, ಸಂಕಲ್ಪ್ ಶರ್ಮಾ ಹೇಳಿದ್ದಾರೆ.

Follow Us:
Download App:
  • android
  • ios