ಮನುಷ್ಯ ಮುಗ್ಧನಾಗಿರುಷ್ಟೇ ಕೆಲವೊಮ್ಮೆ ಪೈಶಾಚಿಕವಾಗಿಯೂ ವರ್ತಿಸುತ್ತಾನೆ. ಇದನ್ನು ಸಾಬೀತುಪಡಿಸುವ ಘಟನೆ ಜಗತ್ತಿನಾದ್ಯಂತ ಆಗಾಗ ನಡೆಯುತ್ತಲೇ ಇರುತ್ತದೆ. ಈಕೆಯೊಬ್ಬಳು ಅಳಿಯ, ಸೊಸೆಯ ಶವ ಹಿಡಿದು ತಿಂಗಳುಗಟ್ಟಲೆ ಸುತ್ತಿದ್ದಾಳೆ.
ವಾಷಿಂಗ್ಟನ್(ಜು.31): ಜಗತ್ತಿನಾದ್ಯಂತ ಬೆಚ್ಚಿಬೀಳಿಸುವ ಬಹಳಷ್ಟು ಘಟನೆಗಳು ನಡೆಯುತ್ತಿದೆ. ಸಾಧಾರಣ ಸಾವು ಬಿಟ್ಟು ಕೊಲೆಯೆಂಬುದು ಪೈಶಾಚಿಕತೆಯ ತೀವ್ರತೆ ತಲುಪಿ ಜಗತ್ತೇ ಬೆಚ್ಚಿ ಬೀಳುವಂತೆ ಮಾಡುತ್ತದೆ. ಇಂತಹ ಘಟನೆಗಳ ಹಿಂದಿನ ಕಾರಣವೂ ವಿಚಿತ್ರವಾಗಿರುತ್ತದೆ. ಅಮೆರಿಕದ ಮಹಿಳೆಯೊಬ್ಬರು ತನ್ನ ಪುಟ್ಟ ಸೊಸೆ ಹಾಗೂ ಅಳಿಯನನ್ನು ಕೊಂದು ಸೂಟ್‌ಕೇಸ್ ಹಾಗೂ ಬ್ಯಾಗ್‌ನಲ್ಲಿ ತುಂಬಿ ತಿಂಗಳುಗಟ್ಟಲೆ ಸುತ್ತಿದ್ದಾರೆ.
ಇದೇನು ಎಂದು ಅಚ್ಚರಿಯಾದರೂ ಇದು ಅಮೆರಿಕದಲ್ಲಿ ನಡೆದ ನಿಜ ಘಟನೆ. ಸೂಟ್‌ಕೇಸ್ ಹಾಗೂ ಬ್ಯಾಗ್‌ನ ಒಳಗೆ ಮೃತದೇಹಗಳನ್ನು ನೋಡಿದವರು ಭೀಕರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಅಮೆರಿಕದ ಮಹಿಳೆ ತನ್ನ ಕಾರಿನ ಟ್ರಂಕ್‌ನಲ್ಲಿ ಇಬ್ಬರು ಚಿಕ್ಕ ಮಕ್ಕಳ ದೇಹಗಳೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಇಬ್ಬರು ಮಕ್ಕಳು ಆಕೆಯ ಸೋದರಳಿಯ ಮತ್ತು ಸೊಸೆ ಎಂದು ವರದಿಯಾಗಿದೆ.
ನಿಕೋಲ್ ಜಾನ್ಸನ್ ಎಂಬ ಮಹಿಳೆ ಪೂರ್ವ ಕರಾವಳಿಯ ನಗರವಾದ ಬಾಲ್ಟಿಮೋರ್‌ಗೆ ಸೇರಿದವರು. ಈಗಾಗಲೇ ಆಕೆ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯವು ಏಳು ವರ್ಷದ ಹುಡುಗಿ ಮತ್ತು ಐದು ವರ್ಷದ ಹುಡುಗನ ಸಾವಿಗೆ ಕಾರಣವಾಗಿತ್ತು
ಕುಷ್ಟಗಿ: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನೇ ಕೊಂದ ಪಾಪಿ ಗಂಡ..!
ಮಹಿಳೆ ತನ್ನ ಸೊಸೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಟ್ರಂಕ್‌ನಲ್ಲಿ ಇಟ್ಟಿದ್ದಳು. ಕಳೆದ ವರ್ಷದ ಮೇ ತಿಂಗಳಿನಿಂದಲೂ ಕಾರನ್ನು ಸಾಮಾನ್ಯವಾಗಿ ಬಳಸುವುದನ್ನು ಮುಂದುವರಿಸಿದ್ದಳು. ಆಕೆ ತನ್ನ ಸೋದರಳಿಯನ ದೇಹವನ್ನು ಒಂದು ವರ್ಷದ ನಂತರ ಅವನ ಸಹೋದರಿಯ ಕೊಳೆತ ದೇಹದ ಪಕ್ಕದಲ್ಲಿ ಇಟ್ಟಿದ್ದಳು. ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದಳು ಎಂದು ಪತ್ರಿಕೆ ವರದಿ ಮಾಡಿದೆ.
ಆಕೆ ವೇಗವಾಗಿ ಕಾರು ಓಡಿಸಿದ್ದಕ್ಕಾಗಿ ಪೊಲೀಸರು ತಡೆದಾಗ ಮಹಿಳೆಯನ್ನು ಬಂಧಿಸಲಾಯಿತು. ಒಬ್ಬ ಅಧಿಕಾರಿಯು ಜಾನ್ಸನ್‌ಗೆ ವಾಹನವನ್ನು ಸೀಝ್ ಮಾಡುವುದಾಗಿ ಹೇಳಿದಾಗ ಪರವಾಗಿಲ್ಲ, ನಾನು ಐದು ದಿನಗಳಲ್ಲಿ ಇಲ್ಲಿಗೆ ಬರುವುದಿಲ್ಲ ಎಂದು ಉತ್ತರಿಸಿದ್ದಳು ಮಹಿಳೆ. ನೀವೆಲ್ಲರೂ ದೊಡ್ಡ ಸುದ್ದಿಯಲ್ಲಿ ನನ್ನನ್ನು ನೋಡಲಿದ್ದೀರಿ ಎಂದು ಪೊಲೀಸರಿಗೆ ಹೇಳಿದ್ದರು.
2019 ರಲ್ಲಿ ಆಕೆಯ ಸಹೋದರಿ ಇಬ್ಬರು ಮಕ್ಕಳನ್ನು ನಿಕೋಲ್ ಜಾನ್ಸನ್ ಅವರಲ್ಲಿ ಆರೈಕೆಗೆ ಬಿಟ್ಟಿದ್ದರು. ಜಾನ್ಸನ್ ತನ್ನ ಸೋದರ ಸೊಸೆಗೆ ಹಲವು ಬಾರಿ ಹೊಡೆದಿದ್ದನ್ನು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾಳೆ.
