ಕೊರೋನಾತಂಕ ನಡುವೆ ರೋಗಿಗಳನ್ನು ಬಲಿ ತೆಗೆದುಕೊಂಡ ಅಗ್ನಿ ಅವಘಡ| ಆಸ್ಪತ್ರೆಯಲ್ಲಿ ಬೆಂಕಿ ಹತ್ತು ಮಂದಿ ಸಜೀವ ದಹನ| ಆಸ್ಪತ್ರೆ ಸೀಲ್ ಮಾಡಿದ ಸರ್ಕಾರ
ಹೈದರಾಬಾದ್(ಆ.09): ಆಂಧ್ರ ಪ್ರದೇಶದ ವಿಜಯವಾಡದ ಹೋಟೆಲ್ ಒಂದರಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೋಟೆಲ್ ಕಾರ್ಪೋರೇಟ್ ಆಸ್ಪತ್ರೆಯೊಂದು ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಬಳಸುತ್ತಿತ್ತು.
ಇನ್ನು ಲಭ್ಯವಾದ ಮಾಹಿತಿ ಅನ್ವಯ ಈ ದುರಂತದಲ್ಲಿ ಹತ್ತು ಮಂದಿ ಮೃತಪಟ್ಟಿದ್ದು, 20 ಮಂದಿಯನ್ನು ಸುರಕ್ಷಿತವಾಗಿ ಹೊರ ಕರೆ ತರಲಾಗಿದೆ. ಗಾಯಾಉಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಆರ್ಥಿಕ ಸಹಾಯವನ್ನೂ ಘೋಷಿಸಲಾಗಿದೆ.
"
ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್ ಅಮೋನಿಯಂ ನೈಟ್ರೇಟ್!
ಇನ್ನು ಸುರಕ್ಷಿತವಾಗಿ ಹೊರತೆಗೆಯಲಾದ 200 ಮಂದಿಯಲ್ಲಿ 2-3 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನು ಇಲ್ಲಿ ಚಿಕಿತ್ಸೆ ನಿಡುತ್ತಿದ್ದ ಆಸ್ಪತ್ರೆಯನ್ನು ಸದ್ಯ ಸರ್ಕಾರ ಸೀಲ್ ಮಾಡಿದೆ.
ಕೆಲ ದಿನದ ಹಿಂದಷ್ಟೇ ಗುಜರಾತ್‌ನಲ್ಲೂ ಇಂತಹುದೇ ಘಟನೆ ನಡೆದಿತ್ತು. ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡು ಎಂಟು ಮಂದಿ ಸಜೀವ ದಹನಗೊಂಡಿದ್ದರು.
