ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವೂ ದೊಡ್ಡದಲ್ಲ: ಬಸನಗೌಡ ಪಾಟೀಲ ಯತ್ನಾಳ
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ, ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 14ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು.
ವಿಜಯಪುರ (ಆಗಸ್ಟ್ 14) : ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ, ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 14ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ(MLA Basanagowda Patil Yatnal) ಅವರು ಮಾತನಾಡಿ, ನಮ್ಮದೇಶಕ್ಕೆ ನರೇಂದ್ರ ಮೋದಿಜಿ(Narendra Modi)ಯವರು ಪ್ರಧಾನ ಮಂತ್ರಿಗಳಾಗಿರುವುದು ನಮ್ಮೆಲ್ಲರ
ಸುದೈವವಾಗಿದೆ. ಭಾರತ ದೇಶದ ಅಭಿವೃದ್ಧಿಯ ಮಾದರಿಯು ಈಗ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಹರ್ ಘರ್ ತಿರಂಗಾ: ಮಸೀದಿ ಮೇಲೂ ಹಾರಿದ ರಾಷ್ಟ್ರಧ್ವಜ
ರಾಷ್ಟ್ರಧ್ವಜಕ್ಕಿಂತ ಕೇಸರಿ ಧ್ವಜ ದೊಡ್ಡದಲ್ಲ: ದೇಶಕ್ಕಾಗಿ ಅನೇಕ ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ದೇಶಾಭಿಮಾನ ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದ ಶಾಸಕರು, ರಾಷ್ಟ್ರಧ್ವಜ(National Flag) ನಮ್ಮ ದೇಶಕ್ಕೆ ಶ್ರೇಷ್ಠವಾಗಿದೆ. ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವು ದೊಡ್ಡದಲ್ಲ ಎಂದು ತಿಳಿಸಿದರು. ಹರ್ ಘರ್ ತಿರಂಗಾ(Har Ghar Tiranga) ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಗಳ ಮೇಲೆ ರಾಷ್ಟ್ರ ಧ್ವಜ ಕಂಡು ಸಂತೋಷವಾಯಿತು ಎಂದರು.
ನಮ್ಮ ಮೇಲಿನ ದಬ್ಬಾಳಿಕೆ ಯುವ ಜನರು ಅರಿಯಲಿ: ಒಂದು ಕಾಲದಲ್ಲಿ ಭಾರತ ಬರೀ ಭೌಗೋಳಿಕವಾಗಿ ವಿಭಜನೆಯಾಗಲಿಲ್ಲ; ಕೋಟ್ಯಂತರ ಜನರ ರಕ್ತ ಹರಿಯಿತು. ನಮ್ಮ ದೇಶದ ಮೇಲೆ ಹೇಗೆ ದಬ್ಬಾಳಿಕೆಯಾಯಿತು ಎಂಬುದರ ಬಗ್ಗೆ ಇಂದಿನ ಯುವಪೀಳಿಗೆಯು ಅರಿಯಬೇಕು. ದೇಶಾಭಿಮಾನ ಎಂದು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ(DC Dr.Vijaya Mahantesh) ದಾನಮ್ಮನವರ ಅವರು ಮಾತನಾಡಿ, ಒಡೆದು ಆಳುವ ನೀತಿ ಅನ್ವಯ ಬ್ರಿಟಿಷರು ನಮ್ಮ ದೇಶದಲ್ಲಿನ ಜನರ ಭಾವನೆಗಳನ್ನು ಒಡೆದರು. ಆ ಕಾಲದಲ್ಲಿ ದೇಶವು ಭೌಗೋಳಿಕವಾಗಿ ವಿಭಜನೆಯಾಗುವುದರ ಜೊತೆಗೆ ಜನರು ಸಹ ವಿಭಜನೆ ಆಗುವಂತಹ ದುಸ್ಸಾಹಸ ಘಟಿಸಿತು. ಈ ಘಟನೆಯಿಂದಾಗಿ ಒಂದು ಭಾಗದ ಜನರು ಮತ್ತೊಂದೆಡೆ ಸ್ಥಳಾಂತರವಾಗಬೇಕಾದ ಸ್ಥಿತಿ ಬಂದಿತು. ಇದು ಯುದ್ಧದಕ್ಕಿಂತ ಘೋರ ನೋವಿನ ಸಂಗತಿಯಾಗಿದೆ. ದೇಶ ವಿಭಜನೆಯ ಈ ಹಿಂಸಾ ಕೃತ್ಯದಲ್ಲಿ 5 ರಿಂದ 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ತಿಳಿಸಿದರು.
ಸಿದ್ರಾಮೋತ್ಸವ ನಿವೃತ್ತಿ ಉತ್ಸವ: ಬಸವನಗೌಡ ಪಾಟೀಲ್ ಯತ್ನಾಳ್
ಮಹಾತ್ಮರ ತ್ಯಾಗದ ಪರಿಚಯವಾಗಲಿ: ಮಹಾತ್ಮರ ತ್ಯಾಗ ಸ್ಮರಣೆಗಾಗಿ, ಮಹಾನ್ ನಾಯಕರ ದೇಶಪ್ರೇಮವನ್ನು ಇವತ್ತಿನ ಯುವಪೀಳಿಗೆಗೆ ಪರಿಚಯಿಸಬೇಕು ಎಂದು
ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿಯವರು ತಿಳಿಸಿದಂತೆ ದೇಶದೆಲ್ಲೆಡೆ ಈ ದಿನಾಚರಣೆ ನಡೆಯುತ್ತಿದೆ. ಉಪನಿಷತ್ತಿನಲ್ಲಿ ಹೇಳಿದ ಶಾಂತಿಮಂತ್ರವನ್ನು ನಾವುಗಳು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಎಸ್ಪಿ ಹೆಚ್ ಡಿ ಆನಂದಕುಮಾರ್ ಮಾತು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ ಅವರು ಮಾತನಾಡಿ, ನಮ್ಮ ಯುವಪೀಳಿಗೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ದೇಶ ವಿಭಜನೆಯ ಸಂದರ್ಭದಲ್ಲಿ ಎಷ್ಟು ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಎಷ್ಟು ಜನ ನೋವುಂಡಿದ್ದಾರೆ ಅನ್ನುವರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾನ್ಯ ಪ್ರಧಾನಮಂತ್ರಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದು ತಿಳಿಸಿದರು.
ಪ್ರಧಾನಿ ಸೂಚನೆ ಮೇರೆಗೆ ಕಾರ್ಯಕ್ರಮ ; ಪಾಲಿಕೆ ಆಯುಕ್ತ: ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಯಾವ ರೀತಿಯ ಅಹಿತಕರ ಘಟನೆಗಳು ಸಂಭವಿಸಿವೆ ಅನ್ನುವುದರ ಬಗ್ಗೆ, ಮಹಾತ್ಮರು ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಬಗ್ಗೆ ಜನತೆಗೆ ತಿಳಿಸಲು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಇಂತಹ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಸ್ವಾಗತಿಸಿದರು.
ಸಮಾರಂಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಯಲ್ಲಮ್ಮ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮನಗೌಡ ಕನ್ನೋಳ್ಳಿ, ರಾಜಶೇಖರ ದೈವಾಡೆ ಹಾಗೂ ಇತರರು ಇದ್ದರು.