ಸೆ.10ನ್ನು ವಿಶ್ವ ಆತ್ಮಹತ್ಯೆ ತಡೆ ದಿನವಾಗಿ ಆಚರಿಸಲಾಗುತ್ತದೆ. ಆತ್ಮಹತ್ಯೆಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಅದನ್ನು ತಡೆಯಲು ಏನು ಮಾಡಬಹುದು ಎಂಬ ಬಗ್ಗೆ ನಿಮ್ಹಾನ್ಸ್‌ನ ತಜ್ಞ ಮನೋವೈದ್ಯರು ತಿಳಿಸಿದ್ದಾರೆ. 

ಡಾ. ಸರಸ್ವತಿ ತೇನಗಿ, ಮನೋವೈದ್ಯರು, ಡಿಮ್ಹಾನ್ಸ್‌, ಧಾರವಾಡ
ಡಾ. ವಿಜಯ ಹರ್ಬಿಶೆಟ್ಟರ, ಮನೋವೈದ್ಯರು, ನಿಮ್ಹಾನ್ಸ್‌, ಬೆಂಗಳೂರು

ರಾಷ್ಟ್ರೀಯ ಅಪರಾಧ ದಾಖಲೆಯ ಪ್ರಕಾರ, 2021ರಲ್ಲಿ ಕರ್ನಾಟಕದಲ್ಲಿ 13,056 ಆತ್ಮಹತ್ಯೆಗಳು ಘಟಿಸಿವೆ. ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.66ರಷ್ಟು ಮಂದಿ 18 ರಿಂದ 45 ವರ್ಷ ವಯೋಮಿತಿಯವರು. ಕೌಟುಂಬಿಕ ಸಮಸ್ಯೆಗಳು, ದೀರ್ಘ ಕಾಲದ ಕಾಯಿಲೆಗಳು, ಪ್ರೇಮ ವೈಫಲ್ಯತೆ, ಪರೀಕ್ಷೆಯಲ್ಲಿ ವಿಫಲತೆ, ಅತಿಯಾದ ಮದ್ಯಪಾನ ಸೇವನೆ ಅಥವಾ ಶೋಷಣೆಗೊಳಗಾಗಿ ಇರುವುದು ಆತ್ಯಹತ್ಯೆಗೆ ಪ್ರಮುಖ ಕಾರಣಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿವರ್ಷ ಸೆಪ್ಟೆಂಬರ್‌ 10ನೇ ದಿನಾಂಕವನ್ನು 'ವಿಶ್ವ ಆತ್ಮಹತ್ಯೆ ತಡೆ ದಿನ'(world suicide prevention day)ವನ್ನಾಗಿ ಮೀಸಲಿಡಲಾಗಿದೆ. 'ಕ್ರಮಗಳ ಮೂಲಕ ಜೀವನದ ಮೇಲೆ ವಿಶ್ವಾಸ ಮೂಡಿಸುವುದು' ಎಂಬುದು ಈ ವರ್ಷದ ಘೋಷಣಾ ವಾಕ್ಯ. ಈ ವರ್ಷದ ಘೋಷಣಾ ವಾಕ್ಯದ ಪ್ರಕಾರ ಸಮಸ್ಯೆಗಳಿಗೆ ಆತ್ಮಹತ್ಯೆ ಎಂಬ ಪರಿಹಾರವನ್ನು ಬಿಟ್ಟು ಪರ್ಯಾಯ ಪರಿಹಾರಗಳನ್ನು ಹುಡುಕಬೇಕು ಎಂಬುದಾಗಿದೆ.

ನಡವಳಿಕೆಯಲ್ಲಿ ಬದಲಾವಣೆ, ಮನಸ್ಸಿನ ಭಾವನೆಗಳಲ್ಲಿ ಏರುಪೇರು, ಸಣ್ಣಪುಟ್ಟವಿಷಯಕ್ಕೂ ಮುನಿಸಿಕೊಳ್ಳುವುದು, ಒಂಟಿತನ(loneliness), ಬೇಸರ, ಸಾವು ಅಥವಾ ಸಾಯುವುದಾಗಿ ಮಾತನಾಡುವುದು, ಎಲ್ಲ ಬಿಟ್ಟು ದೂರ ಹೋಗಿಬಿಡುತ್ತೇನೆ ಎನ್ನುವುದು, ಭವಿಷ್ಯದ ಬಗ್ಗೆ ನಕಾರಾತ್ಮಕತೆ, ನನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂದುಕೊಳ್ಳುವುದು, ದೀರ್ಘಕಾಲದ ಕಾಯಿಲೆಗಳು(illness), ದೀರ್ಘಕಾಲದ ಮಾನಸಿಕ ಒತ್ತಡ, ಅಸಹಾಯಕತೆ, ನನ್ನ ಸಮಸ್ಯೆಗೆ ಪರಿಹಾರವಿಲ್ಲ ಎಂದುಕೊಳ್ಳುವುದು ಮುಂತಾದ ಬದಲಾವಣೆ ಯಾರಲ್ಲೇ ಕಂಡರೂ ತಮ್ಮೆಲ್ಲ ಕೆಲಸಕಾರ್ಯವನ್ನು ಬಿಟ್ಟು ಅಂತಹ ವ್ಯಕ್ತಿಯನ್ನು ಸ್ವಲ್ಪ ಹೊತ್ತು ಮಾತನಾಡಿಸಿ, ಅವರ ಮನಸ್ಥಿತಿಗೆ ಏನು ಕಾರಣ ಎಂದು ತಿಳಿಯಲು ಪ್ರಯತ್ನಿಸಬೇಕು.

ಮಹಿಳೆಯರೇ ಗರ್ಭ ನಿರೋಧಕ ಮಾತ್ರೆ ಸೇವಿಸ್ತೀರಾ , ಸ್ತನ ಹಿಗ್ಗುವಿಕೆ ಸಮಸ್ಯೆನೂ ಕಾಡ್ಬೋದು ಎಚ್ಚರ..!

ಕೆಲವು ಕಾರಣಗಳು(reasons)
ಮಾನಸಿಕ ಕಾಯಿಲೆಗಳು- ಖಿನ್ನತೆ, ಮಾದಕವಸ್ತು ವ್ಯಸನ, ಸ್ಕಿಜೊಫ್ರೀನಿಯ, ವ್ಯಕ್ತಿತ್ವ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಆತ್ಮಹತ್ಯೆಯ ಆಪಾಯ ಹೆಚ್ಚು. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 90ರಷ್ಟು ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಆತ್ಮಹತ್ಯೆ ತಪ್ಪಿಸಲು ಮಾನಸಿಕ ಕಾಯಿಲೆಗಳಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಬೇಕು.

ಕೌಟುಂಬಿಕ ಹಿನ್ನೆಲೆ- ಕುಟುಂಬದಲ್ಲಿ ಈಗಾಗಲೇ ಅಕಾಲಿಕ ಮತ್ತು ಉದ್ದೇಶಪೂರ್ವಕವಾಗಿ ಸಾವಿಗೆ ಶರಣಾದವರಿದ್ದರೆ ಅಂತಹ ಕುಟುಂಬದಲ್ಲಿ ಸ್ವಯಂಹಾನಿ ನಡವಳಿಕೆ ಹೆಚ್ಚಾಗಿ ಕಂಡುಬರುತ್ತದೆ.

ವೈದ್ಯಕೀಯ ಕಾಯಿಲೆಗಳು ಮತ್ತು ನೋವು- ಬಹಳ ವರ್ಷಗಳಿಂದ ಕಾಯಿಲೆಗಳಿಂದ ಬಳಲುತ್ತಿದ್ದರೆ ಅಡ್ಡ ಪರಿಣಾಮಗಳಿಂದ ಜೀವನದಲ್ಲಿ ಜಿಗುಪ್ಸೆ ಆಗಿ ಬದುಕು ಬೇಡ ಅನಿಸಬಹುದು.

ಮಾಧ್ಯಮ ವರದಿಗೆ ನೈತಿಕತೆ ಅಗತ್ಯ
ಆತ್ಮಹತ್ಯೆ ಸೋಂಕಿನ ರೀತಿಯ ಪ್ರಭಾವ- ಆತ್ಮಹತ್ಯೆಯಲ್ಲಿ ಅನುಕರಣೆ ಮಾಡುವ ನಡವಳಿಕೆಯು ಸಾಮಾನ್ಯ ಮಾಧ್ಯಮದಲ್ಲಿ ಬಂದ ಸುದ್ದಿಗಳಿಂದ ಹೆಚ್ಚು ಅಥವಾ ಕಡಿಮೆಯಾಗಬಹುದು. ಸುದ್ದಿ ಪದೇ ಪದೇ ಪುನಾರವರ್ತನೆಯಾಗುವುದು, ದೃಶ್ಯ ಮಾಧ್ಯಮದಲ್ಲಿ ಭಾವೋದ್ರೇಕಗೊಳಿಸುವ ರೀತಿಯಲ್ಲಿ ತೋರಿಸುವುದು, ಆತ್ಮಹತ್ಯೆಯ ವಿಧಾನಗಳ ಬಗ್ಗೆ ವಿವರಣೆ ನೀಡುವುದು... ಇವುಗಳಿಂದ ಪ್ರಕರಣಗಳು ಹೆಚ್ಚಾಗಬಹುದು. ಇದಕ್ಕೆ ವರ್ಧರ್‌ ಎಫೆಕ್ಟ್ ಎನ್ನುತ್ತಾರೆ. ಇದೇ ರೀತಿ ಮಾಧ್ಯಮಗಳಲ್ಲಿ ಆತ್ಮಹತ್ಯೆ ಪ್ರಕರಣವನ್ನು ಚರ್ಚಿಸಿ ಆತ್ಮಹತ್ಯೆ ಗಡಿಯಲ್ಲಿರುವ ವ್ಯಕ್ತಿಯು ಸಕಾರಾತ್ಮಕ ಪರ್ಯಾಯ ದಾರಿಗಳನ್ನು ಹುಡುಕಿ ತನ್ನ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಿಳಿಸಿ ತೋರಿಸಿದರೆ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುವ ಸಂಭವವಿದೆ. ಇದಕ್ಕೆ ಪಾಪಾಜಿನೋ ಎಫೆಕ್ಟ್ ಎನ್ನುತ್ತಾರೆ. ಆದ್ದರಿಂದ ಮಾಧ್ಯಮದ ವರದಿಗಳ ಪ್ರತಿಕ್ರಿಯೆ ಬಹಳ ಮುಖ್ಯವಾಗಿರುತ್ತದೆ.

Parenting Tips: ಅಪ್ಪ ಅಮ್ಮ ಆದ್ಮೇಲೂ ಲವ್ವು ಕಡಿಮೆ ಆಗಬಾರದು ಅಂದರೆ ಹೀಗೆ ಮಾಡಿ!

ಆತ್ಮಹತ್ಯೆಯನ್ನು ತಪ್ಪಿಸಲು ಪ್ರಚೋದನೆ, ಕೋಪವನ್ನು ನಿಯಂತ್ರಿಸುವ ಕೌಶಲ್ಯಗಳನ್ನು ಕಲಿಸುವುದು, ಚೇತರಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ತುಂಬ ಮುಖ್ಯ.

ಸಮಸ್ಯೆಯನ್ನು ಅಹಿಂಸಾತ್ಮಕವಾಗಿ ಸೂಕ್ಷ್ಮತೆಯಿಂದ ಬಗೆಹರಿಸುವ ಕೌಶಲ್ಯಗಳನ್ನು ಕಲಿಸಬೇಕಾಗಿದೆ. ಆತ್ಮಹತ್ಯೆ ಮತ್ತು ಮಾನಸಿಕ ರೋಗಗಳ ನಡುವೆ ನಿಕಟವಾದ ಸಂಬಂಧವಿರುವುದರಿಂದ ಆತ್ಮಹತ್ಯಾ ತಡೆಯುವ ಕಾರ್ಯಕ್ರಮದಲ್ಲಿ ಮಾನಸಿಕ ರೋಗ ತಜ್ಞರ ಪಾತ್ರ ಪ್ರಮುಖವಾಗಿದೆ. ಜನಸಾಮಾನ್ಯರು ಮಾನಸಿಕ ರೋಗದ ಲಕ್ಷಣಗಳನ್ನು ಗುರುತಿಸಲು ಇದರ ಬಗ್ಗೆ ಹೆಚ್ಚಿನ ಅರಿವಿನ ಅಗತ್ಯವಿದೆ.

ಮಾರಣಾಂತಿಕ ವಿಧಾನಗಳು ಸುಲಭವಾಗಿ ಕೈಗೆಟುಕುವುದು- ಗ್ರಾಮೀಣ ಭಾಗಗಳಲ್ಲಿ ಕೀಟನಾಶಕಗಳು ಸುಲಭವಾಗಿ ಲಭ್ಯವಾಗುವುದರಿಂದ ಅದನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆ ಹೆಚ್ಚು.

ಜೈವಿಕ ಕಾರಣಗಳು- ಜೀನ್‌ಗಳು, ಮಿದುಳಿನ ರಚನೆ, ಕೆಲವು ರಾಸಾಯನಿಕಗಳ ಏರುಪೇರು ಮುಂತಾದವುಗಳು ಆತ್ಮಹತ್ಯೆಯಿಂದ ಮರಣ ಹೊಂದಿದವರಲ್ಲಿ ಮತ್ತು ಇತರ ಕಾರಣಗಳಿಂದ ಮರಣ ಹೊಂದಿದವರಲ್ಲೂ ಭಿನ್ನವಾಗಿರುತ್ತದೆ.