Asianet Suvarna News Asianet Suvarna News

ಮಾನಸಿಕ ಆರೋಗ್ಯದ ಕುರಿತು ಭಾರತೀಯ ಮೂಲದ ಖ್ಯಾತ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್‌ ಮೂರ್ತಿ ಜಾಗೃತಿ

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ 'ವಿಶ್ವ ಪ್ರವಾಸ' ವನ್ನು ಅಮೆರಿಕದ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ವನ್ನು ಬೆಂಗಳೂರಿನಲ್ಲಿ ಅಂತ್ಯಗೊಳಿಸಿದರು.

World Mental Health Day 2024 US surgeon general dr vivek murthy discussed the impacts of mental health on youth with students rav
Author
First Published Oct 13, 2024, 5:48 PM IST | Last Updated Oct 13, 2024, 5:47 PM IST

World Mental Health Day 2024: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ 'ವಿಶ್ವ ಪ್ರವಾಸ' ವನ್ನು ಅಮೆರಿಕದ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ವನ್ನು ಬೆಂಗಳೂರಿನಲ್ಲಿ ಅಂತ್ಯಗೊಳಿಸಿದರು.

 ವಿಶ್ವ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಡಾ. ವಿವೇಕ್‌ ಮೂರ್ತಿ ಅವರು ಈ ವಾರ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ಭೇಟಿ ನೀಡಿದರು. ಅಮೇರಿಕದ ಅತ್ಯುನ್ನತ ವೈದ್ಯರಾಗಿರುವ ಡಾ. ಮೂರ್ತಿ ಅವರು ಸಾರ್ವಜನಿಕ ಆರೋಗ್ಯದ ರಕ್ಷಣೆ ಮತ್ತು ಅದನ್ನು ಪ್ರೋತ್ಸಾಹಿಸುವ ಹೊಣೆ ಹೊತ್ತಿದ್ದಾರೆ. ಈ ಹುದ್ದೆಗೇರಿದ ಮೊತ್ತ ಮೊದಲ ಭಾರತೀಯ ಮೂಲದ ಅಮೇರಿಕನ್‌ ಎಂಬ ಹೆಗ್ಗಳಿಕೆಯೂ ಇವರದ್ದು. ಇವರ ತಂದೆ ತಾಯಿ ಕರ್ನಾಟಕದವರು.  ವಿಶ್ವ ಎದುರಿಸುತ್ತಿರುವ ಮಾನಸಿಕ ಆರೋಗ್ಯ ಮತ್ತು ಒಂಟಿತನದ ಬಿಕ್ಕಟ್ಟಿನ ಬಗ್ಗೆ ಅರಿವು ಮೂಡಿಸುವುದು ಅವರ ವಿಶ್ವ ಪ್ರವಾಸದ ಪ್ರಮುಖ ಆದ್ಯತೆಯಾಗಿತ್ತು.

World Mental Health Day: ಆತಂಕ, ಒತ್ತಡ ಜೀವನಕ್ಕೆ ಸುದರ್ಶನ ಕ್ರಿಯೆ ಪರಿಹಾರ, ರವಿಶಂಕರ ಗುರೂಜಿ

ಬೆಂಗಳೂರಿನಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾತನಾಡಿದ ಡಾ. ಮೂರ್ತಿ ಅವರು, ನನ್ನ ಪೂರ್ವಜರ ನಾಡು, ನನ್ನ ತಂದೆ ತಾಯಿಯರು ಬಾಲ್ಯದಲ್ಲೇ ನನ್ನಲ್ಲಿ ಬಿತ್ತಿದ ಅನೇಕ ಮೌಲ್ಯಗಳ ತವರಾದ ಭಾರತಕ್ಕೆ ಬರುವ ಅವಕಾಶದೊರೆತಿದ್ದಕ್ಕೆ ಆಭಾರಿಯಾಗಿದ್ದೇನೆ.  ಸಂಬಂಧಗಳ ಪ್ರಾಮುಖ್ಯತೆ, ಸಮುದಾಯದ ಭಾಗವಾಗಿರುವುದರಿಂದ ದೊರೆಯುವ ಬಲ, ಸೇವೆ ಸಲ್ಲಿಸುವುದರಿಂದ ದೊರಕುವ ಆಳವಾದ ತೃಪ್ತಿಯನ್ನು ಅವರು ನನಗೆ ಕಲಿಸಿಕೊಟ್ಟರು ಎಂದು ಸ್ಮರಿಸಿದರು.
 
ಆರೋಗ್ಯ ವಲಯದಲ್ಲಿ ಅಮೆರಿಕ ಮತ್ತು ಭಾರತ ವಿಶೇಷವಾದ ಸುದೀರ್ಘ ಪಾಲುದಾರಿಕೆಯನ್ನು ಹೊಂದಿವೆ.  ಮಾನಸಿಕ ಸ್ವಾಸ್ಥ್ಯದ ಬಗ್ಗೆ ಕಲಿಯಲು ಮತ್ತು ಆ ಬಗ್ಗೆ ಮಾತನಾಡಲು ಭಾರತಕ್ಕೆ ಬಂದಿದ್ದೇನೆ, ಎರಡೂ ದೇಶಗಳಿಗೆ ಇಲ್ಲಿ ಹಲವು ಅಗತ್ಯಗಳು ಮತ್ತು ಕೂಡಿ ಕಲಿಯುವ ಅವಕಾಶಗಳಿವೆ. ಮಾನಸಿಕ ಆರೋಗ್ಯದ ಬಗ್ಗೆ ಇರುವ ಕಳಂಕವನ್ನು ನಿವಾರಿಸಲು ಅಸಾಧಾರಣ ಕೆಲಸ ಮಾಡುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ.  ಮಾನಸಿಕ ಆರೋಗ್ಯ ಶುಷ್ರೂಷೆ ಸೇವೆ, ಮಾನಸಿಕ ಆರೋಗ್ಯ ಬಿಕ್ಕಟ್ಟು ನಿವಾರಣೆ ಕೆಲಸದಲ್ಲಿ ತೊಡಗಿರುವವರು, ಹಾಗೂ ನೆರವು ಕೇಳುವುದು ಅವಮಾನವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ನಾವೆಲ್ಲಾ ಜತೆಯಾಗಿ ಕೆಲಸಮಾಡುವುದು ಅಗತ್ಯವಾಗಿದೆ. ವಿಶ್ವ ಮಾನಸಿಕ ಆರೋಗ್ಯ ದಿನವು ನಮಗೆ ಪರಸ್ಪರ ಕಲಿಯುವುದು ಮತ್ತು ಈ ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವುದು ಸಾಧ್ಯ ಎಂಬುದನ್ನು ನೆನಪಿಸುವ ಸಾಧನವಾಗಿದೆ," ಎಂದು ಯುಎಸ್‌. ಸರ್ಜನ್‌ ಜನರಲ್‌ ಡಾ. ವಿವೇಕ್‌ ಮೂರ್ತಿ ಹೇಳಿದರು. 

'ಅಮೆರಿಕದ ಟಾಪ್‌ ಡಾಕ್ಟರ್‌ ಯು.ಎಸ್‌. ಸರ್ಜನ್‌ ಜನರಲ್‌ ಡಾ. ವಿವೇಕ್‌ ಮೂರ್ತಿ ಅವರು ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯದ ಕುರಿತು ಗಮನಹರಿಸಬೇಕಾದ ತುರ್ತು ಅಗತ್ಯ, ಎಲ್ಲರಿಗೂ ಅದೇಕೆ ಬೇಕು, ಮತ್ತು ಈ ವಿಷಯದಲ್ಲಿ ಸ್ನೇಹಿತರ ದಂಡು ಕಟ್ಟಲು, ಸಮುದಾಯವನ್ನು ಒಟ್ಟುಗೂಡಿಸಲು, ಭರವಸೆ ಮತ್ತು ಬೆಂಬಲ ಒಟ್ಟುಗೂಡಿಸಲು ಅರ್ಥಪೂರ್ಣ ಸಂಬಂಧಗಳು ಹಾಗೂ ಸಾಮಾಜಿಕ ಸಂಪರ್ಕಗಳು ನೆರವು ನೀಡುತ್ತವೆ ಎಂಬುದರ ಕುರಿತು ಮಾತನಾಡುತ್ತಿರುವುದು ಸಂತಸ ತಂದಿದೆ ಎಂದು ಯು.ಎಸ. ಕಾನ್ಸಲ್‌ ಜನರಲ್‌ ಚೆನ್ನೈ ಕ್ರಿಸ್‌ ಹಾಡ್ಜಸ್‌ ಹೇಳಿದರು. 

ಈ ಪ್ರವಾಸದಲ್ಲಿ, ಡಾ. ಮೂರ್ತಿ ಮಾರಿವಾಲಾ ಆರೋಗ್ಯ ಉಪಕ್ರಮದಲ್ಲಿ ನೇರವಾಗಿ ಯುವಜನರೊಂದಿಗೆ ಭೇಟಿಯಾಗಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಿದರು; ನಿತಾ ಮುಖೇಶ್ ಅಂಬಾನಿ ಜೂನಿಯರ್ ಸ್ಕೂಲ್‌, ಅಮೆರಿಕನ್ ಸ್ಕೂಲ್‌ ಮುಂಬೈ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಒಂಟಿತನ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜಾಲತಾಣಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು; ಮತ್ತು ಜಯದೇವ ಹೃದ್ರೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಅವರು ಸಾಮಾಜಿಕ ಒಂಟಿತನ (ಸೋಷಿಯಲ್‌ ಐಸೋಲೇಷನ್‌) ಸಮಸ್ಯೆಯನ್ನು ಪರಿಹರಿಸಲು ನೂರಾ ಹೆಲ್ತ್‌ ಅಭಿವೃದ್ಧಿ ಪಡಿಸಿರುವ ಕುಟುಂಬ-ಕೇಂದ್ರಿತ ಕಾರ್ಯಕ್ರಮದ ಮಾದರಿಯನ್ನು ವೀಕ್ಷಿಸಿದರು. ಈ ಕಾರ್ಯಕ್ರಮವು ಆರೈಕೆದಾರರು ತಮ್ಮ ಪ್ರಿಯ ವ್ಯಕ್ತಿಗಳಿಗೆ ಉತ್ತಮ ಸೇವೆ ನೀಡಲು ಅಗತ್ಯವಾದ ಮೂಲ, ಆದರೆ ಪ್ರಮುಖ ಕೌಶಲಗಳನ್ನು ಕಲಿಸಿಕೊಡುತ್ತದೆ.

ಪ್ಲಾಸ್ಟಿಕ್‌ನಲ್ಲಿರೋ ಆಹಾರ ಜಾಸ್ತಿ ಸೇವಿಸ್ತೀರಾ? ನಿಮ್ಮ ಆ ಶಕ್ತಿ ಹೋದಂತೆಯೇ ಲೆಕ್ಕ!

ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಸಂಪರ್ಕ ಆಯೋಗದ ಸಹ-ಅಧ್ಯಕ್ಷರಾದ, ಅವರು ಮಾನಸಿಕ ಆರೋಗ್ಯದ ಅನುಭವಗಳನ್ನು ತಿಳಿಯಲು ವಿವಿಧ ದೇಶಗಳಿಗೆ ಪ್ರವಾಸ ಮಾಡಿದರು.  ಈ ಮೂಲಕ ಪ್ರಪಂಚದ ಎಲ್ಲರೂ ಈ ಬಿಕ್ಕಟ್ಟನ್ನುಒಂದು ಸಮುದಾಯವಾಗಿ ಎದುರಿಸುವುದು ಹೇಗೆ ಸಾಧ್ಯ ಎಂಬುದನ್ನು ಕಂಡುಕೊಳ್ಳಲು ಯತ್ನಿಸಿದರು. 

ನಮ್ಮ ಒಂಟಿತನ ಸಾಂಕ್ರಾಮಿಕತೆಯ ಬಗ್ಗೆ ಮತ್ತು ಸಾಮಾಜಿಕ ಜಾಲತಾಣಗಳು ಮತ್ತು ಯುವಕರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಸರ್ಜನ್‌ ಜನರಲ್‌ ಅವರ ಸಲಹಾ ಪತ್ರವನ್ನು ಪ್ರಕಟಿಸಿದರು.

Latest Videos
Follow Us:
Download App:
  • android
  • ios