Asianet Suvarna News Asianet Suvarna News

ಆಲ್ಕೋಹಾಲ್ ಜೊತೆ ಸ್ನ್ಯಾಕ್ಸ್ ಯಾಕೆ ತಿನ್ನೋದು?

ಆಲ್ಕೋಹಾಲ್ ಸೇವನೆ ಮಾಡೋದೇ ಅಪಾಯಕಾರಿ. ಹಾಗಿರುವಾಗ ಅದನ್ನು ತಪ್ಪಾಗಿ ಸೇವನೆ ಮಾಡಿದ್ರೆ ಮತ್ತಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಕುಡಿತ ಕಲಿತೋನಿಗೆ ಕುಡಿಯೋ ವಿಧಾನ ಗೊತ್ತಿರದಿದ್ದರೆ ಹೇಗೆ ಹೇಳಿ?
 

Why We Need To Eat While Having Alcohol
Author
First Published Dec 15, 2022, 3:29 PM IST

ವೀಕೆಂಡ್ ಬರ್ತಿದ್ದಂತೆ ಜನರು ಪಾರ್ಟಿ ಪ್ಲಾನ್ ಮಾಡ್ತಾರೆ. ಪಾರ್ಟಿ ಅಂದ್ರೆ ಆಲ್ಕೋಹಾಲ್ ಇರ್ಲೇಬೇಕು. ಆಲ್ಕೋಹಾಲ್ ಸೇವನೆ ಮಾಡಿ ನಂತ್ರ ಮೋಜು ಮಾಡೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೊಸ ವರ್ಷ ಹತ್ತಿರ ಬರ್ತಿರುವ ಈ ಸಮಯದಲ್ಲಿ ನ್ಯೂ ಇಯರ್ ವೆಲ್ ಕಂ ಮಾಡೋಕೆ ಎಲ್ಲಿ ಪಾರ್ಟಿ ಮಾಡೋದು ಅಂತಾ ಜನರು ಈಗ್ಲೇ ಯೋಚನೆ ಮಾಡ್ತಿದ್ದಾರೆ. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಆಲ್ಕೋಹಾಲ್ ಮೆದುಳು, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಅಥವಾ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ಜನರು ಆಲ್ಕೋಹಾಲ (Alcohol) ನ್ನು ಹಲವು ವಿಧಗಳಲ್ಲಿ ಸೇವಿಸುತ್ತಾರೆ. ಜನರ ಮೇಲೆ ಅದರ ಪರಿಣಾಮ ಕೂಡ ವಿಭಿನ್ನವಾಗಿರುತ್ತದೆ. ತೂಕ, ಲಿಂಗ, ವಯಸ್ಸು, ಚಯಾಪಚಯ ಶಕ್ತಿ ಹಾಗೂ ಆಲ್ಕೋಹಾಲ್ ಪ್ರಕಾರ ಇವೆಲ್ಲದರ ಆಧಾರದ ಮೇಲೆ ದೇಹ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಖಾಲಿ ಹೊಟ್ಟೆ (Stomach) ಯಲ್ಲಿ ಆಲ್ಕೋಹಾಲ್ ಸೇವಿಸಿದರೆ ಅದರ ಪರಿಣಾಮ  ಹೆಚ್ಚು ವೇಗವಾಗಿರುತ್ತದೆ. ಇದರಿಂದಾಗಿ ತಲೆ (Head) ಸುತ್ತುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮದ್ಯ ಸೇವನೆ ಮಾಡುವ ಮುನ್ನ ಮದ್ಯವನ್ನು ಹೇಗೆ ಸೇವನೆ ಮಾಡ್ಬೇಕು ಎಂಬುದು ಜನರಿಗೆ ತಿಳಿದಿರಬೇಕು. ಯಾಕೆಂದ್ರೆ ತಪ್ಪಾದ ಕ್ರಮ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.

ಹಾಗಲಕಾಯಿಯೊಂದಿಗೆ ಈ ಆಹಾರಗಳನ್ನು ತಪ್ಪಿಯೂ ತಿನ್ನಬೇಡಿ!

ಆಲ್ಕೋಹಾಲ್ ಸೇವನೆ ಮಾಡುವಾಗ ಉಪ್ಪಿನಕಾಯಿ (Pickle), ಕರಿದ ಆಹಾರಗಳು, ಖಾರದ ಆಹಾರವನ್ನು ಜನರು ತಿನ್ನಲು ಇಷ್ಟಪಡ್ತಾರೆ. ಅದು ಏನಕ್ಕೆ ಎಂಬುದನ್ನು ನಾವಿಂದು ಹೇಳ್ತೆವೆ. ಆಹಾರ ನಮ್ಮ ದೇಹ ಆಲ್ಕೋಹಾಲ್ ಹೀರಿಕೊಳ್ಳುವ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಹೊಟ್ಟೆ ತುಂಬಿದ್ದರೆ ಆಗ ನಮ್ಮ ದೇಹ ಆಲ್ಕೋಹಾಲ್ ಹೀರಿಕೊಳ್ಳುವ ಪ್ರಮಾಣ ಶೇಕಡಾ 75ರಷ್ಟಿರುತ್ತದೆ.  ಆಲ್ಕೋಹಾಲ್ ಜೊತೆ ನೀವು ಆಹಾರ ಸೇವನೆ ಮಾಡುತ್ತಿದ್ದೀರಿ ಎಂದಾದ್ರೆ ನಿಮ್ಮ ದೇಹ ಆಲ್ಕೋಹಾಲನ್ನು ಬೇಗ ಹೀರಿಕೊಳ್ಳುವುದಿಲ್ಲ. ನಿಧಾನವಾಗಿ ಹೀರಲ್ಪಡುವ ಕಾರಣ ಅದ್ರ ಪರಿಣಾಮ ಕಡಿಮೆಯಾಗುತ್ತದೆ. ಅದೇ ನೀವು ಖಾಲಿ ಹೊಟ್ಟೆಯಲ್ಲಿ ಅತಿಯಾದ ಮದ್ಯ ಸೇವನೆ ಮಾಡಿದ್ರೆ ಅದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಹೊಟ್ಟೆಯಿಂದ ಮೆದುಳಿನವರೆಗೆ ಎಲ್ಲ ಅಂಗದ ಮೇಲೆ ಪ್ರಭಾವ ಬೀರುತ್ತದೆ. ನೀವು ಖಾಲಿ ಹೊಟ್ಟೆಯಲ್ಲಿ ಮದ್ಯ ಸೇವನೆ ಮಾಡ್ತಿದ್ದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮದ್ಯ ತೆಗೆದುಕೊಳ್ಳಬೇಕು. 

ಆಲ್ಕೋಹಾಲ್ ಬೇಕೇಬೇಕು ಎನ್ನುವವರು ಅದ್ರ ಜೊತೆ ಸೈಡ್ಸ್ ತಿನ್ನಬೇಕು. ಹಾಗಂತ ಹೆಚ್ಚು ಮಸಾಲೆಯುಕ್ತ ಹಾಗೂ ಎಣ್ಣೆ ಪದಾರ್ಥವನ್ನು ಕೂಡ ತಿನ್ನಬಾರದು. ತುಂಬಿದ ಹೊಟ್ಟೆಯಲ್ಲಿ ನೀವು ಆಲ್ಕೋಹಾಲ್ ಸೇವನೆ ಮಾಡ್ತೀರಿ ಎಂದಾದ್ರೆ ಮದ್ಯಪಾನ ಮಾಡುವ ಒಂದು ಗಂಟೆ ಮೊದಲು ಊಟ ಮುಗಿಸಿರಿ. ಖಾಲಿಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ಯಾವಾಗ್ಲೂ ಅಪಾಯಕಾರಿ. ಒಂದ್ವೇಳೆ ನಿಮಗೆ ತಲೆಸುತ್ತು, ವಾಂತಿ, ವಾಕರಿಕೆ ಬರ್ತಿದ್ದರೆ ತಕ್ಷಣ ಸೇವನೆ ನಿಲ್ಲಿಸಿ.

ನೀವು ಒಂದೇ ಸಮನೆ ಮದ್ಯಪಾನ ಮಾಡಬೇಡಿ. ನಿಧಾನವಾಗಿ ಆಲ್ಕೋಹಾಲ್ ಸೇವನೆ ಮಾಡಿ. ಅದ್ರ ಮಧ್ಯೆ ಮಧ್ಯೆ ಸ್ಯ್ಯಾಕ್ಸ್ ತಿನ್ನುತ್ತಿರಿ. ಇದ್ರಿಂದ ಹೊಟ್ಟೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆಲ್ಕೋಹಾಲ್ ಹೀರಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ. 

Winter Foods: ಬಟಾಣಿ ಬೇಕಾಬಿಟ್ಟಿ ತಿಂದ್ರೆ, ಮೂತ್ರಪಿಂಡದ ಸಮಸ್ಯೆ ಕಾಡುತ್ತೆ

ಆಲ್ಕೋಹಾಲ್ ಹೀಗೆ ಹೀರುತ್ತದೆ ನಮ್ಮ ದೇಹ : ನೀವು ಆಲ್ಕೋಹಾಲ್ ಸೇವನೆ ಮಾಡ್ತಿದ್ದಂತೆ ಬಾಯಿ ನಂತ್ರ ಆಲ್ಕೋಹಾಲ್ ರಕ್ತನಾಳಗಳಿಗೆ ಸಿಗುತ್ತದೆ. ಹೊಟ್ಟೆಯನ್ನು ತಲುಪುವ ಹೊತ್ತಿಗೆ ಶೇಕಡಾ 20 ರಷ್ಟು ರಕ್ತದಲ್ಲಿ ಹೀರಲ್ಪಡುತ್ತದೆ. ಸಣ್ಣ ಕರುಳನ್ನು ತಲುಪುವ ಹೊತ್ತಿಗೆ ಶೇಕಡಾ 75 ರಿಂದ 85 ರಷ್ಟು ದೇಹ ಹೀರಲ್ಪಡುತ್ತದೆ. ಯಕೃತ್ತಿಗೆ ಹೋಗುವವರೆಗೆ ಆಲ್ಕೋಹಾಲ್ ನಿಮ್ಮ ಸಂಪೂರ್ಣ ದೇಹ ಸೇರಿರುತ್ತದೆ. ಆಲ್ಕೋಹಾಲ್ ಸೇವಿಸಿದ 5-10 ನಿಮಿಷಗಳಲ್ಲಿ ಅದು ಮೆದುಳಿಗೆ ತಲುಪಲು ಪ್ರಾರಂಭವಾಗುತ್ತದೆ. ಆಗ ಆಲ್ಕೋಹಾಲ್ ನಿಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತದೆ.  
 

Follow Us:
Download App:
  • android
  • ios