ಸೋಂಕಿನ ಭಯಾನಾ? ಹೀಗ್ ಮಾಡಿದ್ರೆ ಹೆಲ್ದಿಯಾಗಿರುತ್ತೆ ವಜೈನಾ

ಆರೋಗ್ಯವಂತ ಯೋನಿಗಾಗಿ ಒಂದಿಷ್ಟು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದು ಮುಖ್ಯ. ಅವುಗಳೇನೆಂದು ಇಲ್ಲಿ ವಿವರಿಸಲಾಗಿದೆ. 

Tips To Keep Your Vagina Healthy and be away from infection

ಯೋನಿಯ ಕೆಲಸ ಒಂದೆರಡಲ್ಲ. ಸಂತಾನೋತ್ಪತ್ತಿ, ಲೈಂಗಿಕ ಕಾರ್ಯ, ಮುಟ್ಟಿನ ರಕ್ತ ಹರಿದು ಹೋಗಲು ಚಾನಲ್ ಆಗುವ ಜೊತೆಗೆ ಬ್ಯಾಕ್ಟೀರಿಯಾಗಳು ಗರ್ಭಕೋಶಕ್ಕೆ ಪ್ರವೇಶಿಸದಂತೆ ತಡೆಯುತ್ತವೆ. ಸುಮಾರು 8ರಿಂದ 10 ಸೆಂ.ಮೀ. ಉದ್ದದ ಎಲಾಸ್ಟಿಕ್ ಸ್ನಾಯು ಟ್ಯೂಬ್ ಆಗಿರುವ ಯೋನಿಯ ಆರೋಗ್ಯ ಕಾಪಾಡಿಕೊಳ್ಳುವತ್ತ ಮಹಿಳೆಯರು ಗಮನ ಹರಿಸಬೇಕು. 

ಆರೋಗ್ಯವಂತ ಯೋನಿಯಲ್ಲಿ ಲ್ಯಾಕ್ಟೋಬ್ಯಾಸಿಲಸ್ ಅಸಿಡೋಫೈಲಸ್ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ಲ್ಯಾಕ್ಟಿಕ್ ಆ್ಯಸಿಡ್ ಬಿಡುಗಡೆ ಮಾಡುತ್ತದೆ. ವೆಜೈನಾದ ಸಾಮಾನ್ಯ ಪಿಎಚ್ ಮಟ್ಟ 3.8ರಿಂದ 4.5 ಇರುವಂತೆ ಇದು ನೋಡಿಕೊಳ್ಳುತ್ತದೆ. ಹೀಗಿದ್ದಾಗ ಯಾವುದೇ ಸೋಂಕಿಲ್ಲದ ಆರೋಗ್ಯವಂತ ಯೋನಿ ಮಹಿಳೆಯದಾಗಿರುತ್ತದೆ. ಸಾಮಾನ್ಯವಾಗಿ ಯೋನಿಯು ತನ್ನ ಡಿಸ್ಚಾರ್ಜ್‌ಗಳ ಮೂಲಕ ಸ್ವಯಂ ಸ್ವಚ್ಛಗೊಳ್ಳುತ್ತಿರುತ್ತದೆ. ಆದರೆ, ಸೋಪ್ ಬಳಕೆ ಇತ್ಯಾದಿ ಕಾರಣಗಳಿಂದಾಗಿ ಯೋನಿಯ ಪಿಎಚ್ ಮಟ್ಟದಲ್ಲಿ ಏರುಪೇರಾಗುತ್ತದೆ. ಹಾಗಾದಾಗ ಬ್ಯಾಕ್ಟೀರಿಯಾಗಳು ಒಳಸೇರಿ ಸೋಂಕು, ಉರಿ, ಊತ, ನೋವು ಸೇರಿದಂತೆ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಯೋನಿಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್. 

ದೇಹ ಸಖ್ಯಕ್ಕಿಂತ ಸಂಬಂಧ ಕಾಪಾಡಲು ಇದು ಮುಖ್ಯ

ವಿನೆಗರ್ ಬಳಸಬೇಡಿ.
ಯೋನಿ ವಾಸನೆ ಬರುತ್ತಿದೆ ಎಂದೋ, ಸ್ವಚ್ಛಗೊಳಿಸಬೇಕೆಂದೋ ವಿನೆಗರ್, ಬೇಕಿಂಗ್ ಸೋಡಾ ಅಥವಾ ಐಯೋಡಿನ್ ವಾಟರ್ ಬಳಸುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ಇದರಿಂದ ವಜೈನಾದಲ್ಲಿರುವ ಹೆಲ್ದೀ ಬ್ಯಾಕ್ಟೀರಿಯಾ ನಷ್ಟವಾಗಿ ಸೋಂಕು ಸುಲಭವಾಗಿ ತಗಲುವಂತಾಗುತ್ತದೆ. ಇದಲ್ಲದೆ ಯಾವುದೇ ಪರಿಮಳ ಇರುವ ಉತ್ಪನ್ನಗಳನ್ನು, ವಜೈನಲ್ ಡಿಯೋಡ್ರಂಟ್ ಅಥವಾ ಆ್ಯಂಟಿಸೆಪ್ಟಿಕ್‌ಗಳನ್ನು ಬಳಸುವುದರಿಂದಲೂ ಯೋನಿಯಲ್ಲಿ ಕಿರಿಕಿರಿ ಉಂಟಾಗಬಹುದು.  ಪರಿಮಳರಹಿತವಾದ ಸೋಪ್ ಹಾಗೂ ನೀರು ಬಳಸಿ ಪ್ರತಿ ದಿನಕ್ಕೊಮ್ಮೆ ಸ್ವಚ್ಛಗೊಳಿಸುವುದು ಉತ್ತಮ ಅಭ್ಯಾಸ. 

Tips To Keep Your Vagina Healthy and be away from infection

ಸುರಕ್ಷಿತ ಸೆಕ್ಸ್ ಅಭ್ಯಸಿಸಿ
ಯೋನಿಯನ್ನು ಆರೋಗ್ಯವಾಗಿಡಲು ನೀವು ಮಾಡಬೇಕಾದ ಮತ್ತೊಂದು ಪ್ರಮುಖ ಕೆಲಸವೆಂದರೆ ಸೇಫ್ ಸೆಕ್ಸ್ ಅಭ್ಯಾಸ ಹೊಂದುವುದು.  ಕಾಂಡೋಮ್ ಬಳಕೆಯು ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ವಜೈನಾಕ್ಕೆ ರಕ್ಷಣೆ ಕೊಡುತ್ತದೆ. 

ಸಾಮಾನ್ಯವಾಗಿ ಸೆಕ್ಸ್‌ನಿಂದ ಮಹಿಳೆಯರಲ್ಲಿ ಮೂತ್ರನಾಳ ಸೋಂಕುಗಳು ಹೆಚ್ಚುತ್ತವೆ. ಇದನ್ನು ದೂರವಿಡಲು, ಬೆಚ್ಚಗಿನ ನೀರಿನಿಂದ ಸೆಕ್ಸ್‌ಗೆ ಮುನ್ನ ತೊಳೆದುಕೊಳ್ಳಿ ಹಾಗೂ ನಂತರದಲ್ಲಿ ಮೂತ್ರ ಪಾಸ್ ಮಾಡಿ. ಇದರಿಂದ ಯುರೆತ್ರಾಗೆ ಬ್ಯಾಕ್ಟೀರಿಯಾ ಹರಡುವುದು ತಡೆಯಬಹುದು. ಇನ್ನು ಲೂಬ್ರಿಕೆಂಟ್ಸ್ ಬಳಕೆ ಸಾಧ್ಯವಾದಷ್ಟು ತಗ್ಗಿಸಿ. 

ಪ್ರೊಬಯೋಟಿಕ್ಸ್ ಸೇವಿಸಿ
ಮೊಸರು, ಕೊಂಬುಚಾ, ಉಪ್ಪಿನಕಾಯಿಯಂಥ ಹುದುಗು ಬರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಪ್ರೊಬಯೋಟಿಕ್‌ಗಳು ವಜೈನಾದ ಪಿಎಚ್‌ ಮಟ್ಟ ನಿರ್ವಹಿಸಲು ಸಹಕಾರಿಯಾಗಿದ್ದು, ಇವು ಯೀಸ್ಟ್ ಇನ್ಪೆಕ್ಷನ್ ದೂರವಿಡುತ್ತವೆ. 

ನಾನು ಡುಮ್ಮಿ, ಏನೀವಾಗ? ಬಾಡಿ ಶೇಮ್ ಮಾಡೋರಿಗೆ ನಿತ್ಯಾ ಮೆನನ್ ಫುಲ್ ಕ್ ...

ಹಣ್ಣು ತರಕಾರಿಗಳ ಸೇವನೆ
ಡಯಟ್‌ನಲ್ಲಿ ಹಣ್ಣು ತರಕಾರಿಗಳನ್ನು ಹೆಚ್ಚಿಸಿ. ಅವುಗಳಲ್ಲಿ ಅಗತ್ಯ ಪೋಷಕಸತ್ವಗಳೆಲ್ಲ ಇರುವುದರಿಂದ ಅದು ವೆಜೈನಲ್ ಡ್ರೈನೆಸ್‌ ಕಡಿಮೆ ಮಾಡಿ ಇನ್ಫೆಕ್ಷನ್ ತಡೆಯಲು ಸಹಕರಿಸುತ್ತದೆ. 

ಮುಟ್ಟಿನ ದಿನಗಳ ಸ್ವಚ್ಛತೆ
ಮುಟ್ಟಿನ ದಿನಗಳಲ್ಲಿ ಯೋನಿಯ ಸ್ವಚ್ಛತೆಯತ್ತ ಹೆಚ್ಚಿನ ಗಮನ ವಹಿಸುವ ಅಗತ್ಯವಿದೆ. ಆಗ ಪದೇ ಪದೆ ಪ್ಯಾಡ್ ಬದಲಿಸಿ. ರಿಯುಸೇಬಲ್ ಪ್ಯಾಡ್ ಆಗಿದ್ದಲ್ಲಿ ಅವುಗಳನ್ನು ಬಹಳ ಸ್ವಚ್ಛವಾಗಿ ಒಗೆದು ಬಿಸಿಲಲ್ಲಿ ಒಣಗಿಸುವುದು ಮುಖ್ಯ. ಉಳಿದಂತೆ ಕಾಟನ್ ಒಳಬಟ್ಟೆಯನ್ನು ಬಳಸುವುದು ಒಳ್ಳೆಯದು. 

ಪದೇ ಪದೆ ಶೇವ್ ಬೇಡ
ಯೋನಿಯ ಹೊರಗಿರುವ ಕೂದಲು ಯೋನಿಯೊಳಗೆ ಬ್ಯಾಕ್ಟೀರಿಯಾಗಳು ಪ್ರವೇಶಿಸದಂತೆ ತಡೆಯುತ್ತಿರುತ್ತವೆ. ಜೊತೆಗೆ ಫ್ರಿಕ್ಷನ್ ಹಾಗೂ ಬೆವರನ್ನು ಕಡಿಮೆ ಮಾಡುತ್ತವೆ. ಅವನ್ನು ಪದೇ ಪದೆ ತೆಗೆಯುವುದರಿಂದ ಇನ್ಫೆಕ್ಷನ್ ಸುಲಭವಾಗಿ ಆಗುತ್ತದೆ. 

ಯೋನಿಚ್ಛೇದನದಿಂದ ಮೃತಪಟ್ಟ ಯುವತಿ: ಈಜಿಪ್ಟ್ ಅಲ್ಲೋಲ ಕಲ್ಲೋಲ

ಸರ್ವಿಕಲ್ ಸ್ಕ್ರೀನಿಂಗ್ ಪರೀಕ್ಷೆ
ಸರ್ವಿಕಲ್ ಸ್ಕ್ರೀನಿಂಗ್ ಪರೀಕ್ಷೆಯು ಮಹಿಳೆಯರಲ್ಲಿ ಸರ್ವಿಕಲ್ ಕ್ಯಾನ್ಸರ್ ಇದ್ದರೆ ಗುರುತಿಸುತ್ತದೆ. 60 ವರ್ಷ ಮೇಲ್ಪಟ್ಟ ಮಹಿಳೆಯರು ಎರಡು ವರ್ಷಗಳಿಗೊಮ್ಮೆ ಸರ್ವಿಕಲ್ ಸ್ಕ್ರೀನಿಂಗ್ ಮಾಡಿಸುತ್ತಿರಬೇಕು. ಇದಲ್ಲದೆಯೂ ಸಣ್ಣ ಪುಟ್ಟ ಇನ್ಫೆಕ್ಷನ್‌ಗಳಿಗೆ ಸ್ವತಃ ಚಿಕಿತ್ಸೆ ಮಾಡಿಕೊಳ್ಳುವ ಬದಲು ಸ್ತ್ರೀರೋಗ ತಜ್ಞರನ್ನು ಕಾಣುವ ಅಭ್ಯಾಸ ಇಟ್ಟುಕೊಳ್ಳಿ. 

Latest Videos
Follow Us:
Download App:
  • android
  • ios