ಹೆರಿಗೆ ನಂತ್ರ ಯೋನಿಗೆ ಬರುತ್ತೆ ಈ ಅಂಗ, ಕುಳಿತುಕೊಳ್ಳೋದು ಸಹ ಕಷ್ಟ
ಯೋನಿ ಭಾರವಾದಂತೆ, ಅದ್ರೊಳಗೆ ಏನೋ ಇದೆ ಎನ್ನುವ ಅನುಭವವಾದ್ರೆ, ಮೂತ್ರ ವಿಸರ್ಜನೆ ಕಷ್ಟವಾಗ್ತಿದೆ ಎಂದಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ. ಇದು ಸಣ್ಣ ಸಮಸ್ಯೆ ಎನ್ನಿಸಿದ್ರೂ ಆರಾಮದಾಯಕ ಜೀವನಕ್ಕೆ ಕಿರಿಕಿರಿಯಾಗ್ಬಹುದು. ಇದಕ್ಕೆ ಕಾರಣವೇನು/ ಪರಿಹಾರವೇನು ಎಂಬುದನ್ನು ತಿಳಿಯಿರಿ.
ಮಹಿಳೆಯ ದೇಹದಲ್ಲಿ ಪ್ರತಿ ಹಂತದಲ್ಲೂ ಸಾಕಷ್ಟು ಬದಲಾವಣೆಗಳು ಆಗ್ತಿರುತ್ತವೆ. ಮುಟ್ಟು ಆರಂಭದ ದಿನಗಳಲ್ಲಿ, ಮದುವೆ ನಂತ್ರ, ಹೆರಿಗೆಯಾದ್ಮೇಲೆ, ಮುಟ್ಟು ನಿಂತಾಗ ಹೀಗೆ ಎಲ್ಲ ಸಮಯದಲ್ಲಿ ಆಕೆಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಇದ್ರ ಜೊತೆಗೆ ಅಂಗಾಂಗಳು ವಯಸ್ಸಾದಂತೆ ದುರ್ಬಲವಾಗ್ತಾ ಹೋಗುತ್ತವೆ. ವಯಸ್ಸು ಹೆಚ್ಚಾಗ್ತಿದ್ದಂತೆ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಹೆರಿಗೆ ನಂತ್ರ ಮಹಿಳೆ ದೇಹದಲ್ಲಿ ಕೆಲ ಸೂಕ್ಷ್ಮ ಬದಲಾವಣೆಯಾಗುತ್ತದೆ. ಅದ್ರಲ್ಲಿ ಗರ್ಭಾಶಯ ಹಿಗ್ಗುವಿಕೆ ಕೂಡ ಒಂದು.
ಪೆಲ್ವಿಕ್ (Pelvic) ಸ್ನಾಯುಗಳು ಮತ್ತು ಅಂಗಾಂಶಗಳು ದುರ್ಬಲಗೊಂಡಾಗ ಅದನ್ನು ಗರ್ಭಾಶಯ (Uterus) ದ ಹಿಗ್ಗುವಿಕೆ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಮಹಿಳೆ ಈ ಗರ್ಭಾಶಯದ ಹಿಗ್ಗುವಿಕೆ ಬಗ್ಗೆ ತಿಳಿದಿರಬೇಕಾಗುತ್ತದೆ. ಇದ್ರಲ್ಲಿ ಸೊಂಟದ ಅಸ್ಥಿರಜ್ಜುಗಳು ಮತ್ತು ಸ್ನಾಯು (Muscle) ಗಳು ಗರ್ಭಾಶಯವನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತವೆ. ಆಗ ಗರ್ಭಾಶಯವು ಯೋನಿಯೊಳಗೆ ಬೆಳೆಯಲು ಶುರುವಾಗುತ್ತದೆ. ನಾವಿಂದು ಗರ್ಭಾಶಯದ ಹಿಗ್ಗುವಿಕೆ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
Relationship Tips: ವಿವಾಹಿತ ಪುರುಷ ಪ್ರೊಪೋಸ್ ಮಾಡ್ತಿದ್ದಾನಾ? ಹೇಗೆ “ನೋ’ ಅನ್ನೋದು?
ಯಾರಿಗೆ ಹೆಚ್ಚು ಕಾಡುತ್ತೆ ಗರ್ಭಾಶಯದ ಹಿಗ್ಗುವಿಕೆ : ಒಂದಕ್ಕಿಂತ ಹೆಚ್ಚು ನಾರ್ಮಲ್ ಡಿಲೆವರಿ (Delivery ) ಆದ ಮಹಿಳೆಯರಿಗೆ ಈ ಸಮಸ್ಯೆ ಕಾಡುತ್ತದೆ. ಋತುಬಂಧದ ನಂತರ ಗರ್ಭಾಶಯದ ಹಿಗ್ಗುವಿಕೆ ಸಾಮಾನ್ಯವಾಗಿದೆ. ಸೌಮ್ಯವಾದ ಪ್ರೋಲ್ಯಾಪ್ಸ್ ಪ್ರಕರಣಗಳಿಗೆ ಚಿಕಿತ್ಸೆಯ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು. ಆದ್ರೆ ಇದು ನಿತ್ಯದ ಕೆಲಸಕ್ಕೆ ಸ್ವಲ್ಪ ಅಡ್ಡಿಯುಂಟು ಮಾಡುತ್ತದೆ. ಆಗ ಚಿಕಿತ್ಸೆ ನಿಮ್ಮ ನೆರವಿಗೆ ಬರುತ್ತದೆ.
ಗರ್ಭಾಶಯ ಹಿಗ್ಗುವಿಕೆ ಲಕ್ಷಣಗಳು : ಹೆರಿಗೆ ನಂತ್ರ ನಿಮಗೆ ಗರ್ಭಾಶಯ ಹಿಗ್ಗುವಿಕೆ ಸಮಸ್ಯೆ ಕಾಡುತ್ತದೆ. ಸೌಮ್ಯ ಸಮಸ್ಯೆಯಲ್ಲಿ ಯಾವುದೇ ರೋಗಲಕ್ಷಣ ಕಾಣುವುದಿಲ್ಲ. ಸಮಸ್ಯೆ ಮಧ್ಯಮದಿಂದ ತೀವ್ರವಾಗಿದ್ದರೆ ಯೋನಿ (Vagina) ಉಬ್ಬಿದ ಭಾವನೆಯುಂಟಾಗುತ್ತದೆ. ಪೆಲ್ವಿಕ್ ನಲ್ಲಿ ಭಾರವಾದ ಅನುಭವವಾಗುತ್ತದೆ. ಮೂತ್ರ ವಿಸರ್ಜನೆಗೆ ಹೋದ ನಂತರವೂ ಮೂತ್ರಕೋಶ ಪೂರ್ತಿ ಖಾಲಿಯಾದ ಅನುಭವವಾಗುವುದಿಲ್ಲ. ಮೂತ್ರ ವಿಸರ್ಜನೆಯನ್ನು ನಿಲ್ಲಿಸಲು ತೊಂದರೆಯೆನ್ನಿಸುತ್ತದೆ. ಇದಲ್ಲದೆ ಮಲ ವಿಸರ್ಜನೆ ವೇಳೆಯೂ ತೊಂದರೆಯಾಗುತ್ತದೆ. ಸಣ್ಣ ಚೆಂಡಿನ ಮೇಲೆ ಕುಳಿತಂತ ಅನುಭವವಾಗುತ್ತದೆ. ಯೋನಿಯ ಅಂಗಾಂಶವನ್ನು ಬಟ್ಟೆಯಿಂದ ಮುಚ್ಚಿದಂತೆ ಭಾಸವಾಗುತ್ತದೆ. ಪೆಲ್ವಿಕ್ ಪ್ರದೇಶದಲ್ಲಿ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಂಭೋಗಕ್ಕೆ ಸಂಬಂಧಿಸಿದ ಕೆಲ ಸಮಸ್ಯೆ ಎದುರಾಗುತ್ತದೆ.
ಗರ್ಭಾಶಯದ ಹಿಗ್ಗುವಿಕೆಗೆ ಕಾರಣವೇನು? : ಪೆಲ್ವಿಕ್ ಪ್ರದೇಶದ ಸ್ನಾಯುಗಳು ಮತ್ತು ಅವುಗಳ ಪೋಷಕ ಅಂಗಾಂಶಗಳು ದುರ್ಬಲಗೊಳ್ಳುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹಾಗೆಯೇ ನಾರ್ಮಲ್ ಡಿಲೆವರಿಯಿಂದಲೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊದಲ ಹೆರಿಗೆ ವಯಸ್ಸಾದ್ಮೇಲೆ ಆಗಿದ್ರೆ, ಮಗುವಿನ (Baby) ಗಾತ್ರ ದೊಡ್ಡದಿದ್ದರೆ, ಮಲಬದ್ಧತೆ ಸಮಸ್ಯೆಯಿದ್ರೆ, ದೀರ್ಘಕಾಲದಿಂದ ಕೆಮ್ಮಿದ್ದರೆ, ಭಾರವಾದ ವಸ್ತುಗಳನ್ನು ಆಗಾಗ ಎತ್ತುತ್ತಿದ್ದರೆ ಗರ್ಭಾಶಯ ಹಿಗ್ಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
Break Up: ಹೃದಯದ ಮೇಲೂ ಬೀರುತ್ತೆ ಗಂಭೀರ ಪರಿಣಾಮ
ಗರ್ಭಾಶಯದ ಹಿಗ್ಗುವಿಕೆಯಿಂದ ರಕ್ಷಣೆ ಹೇಗೆ? : ಗರ್ಭಾಶಯದ ಹಿಗ್ಗುವಿಕೆ ದೊಡ್ಡ ಸಮಸ್ಯೆ ಅಲ್ಲದಿದ್ರೂ ಇದ್ರಿಂದ ನಿತ್ಯದ ಕೆಲಸಕ್ಕೆ ಕಿರಿಕಿರಿಯಾಗುತ್ತದೆ. ಹಾಗಾಗಿ ಅದು ಬರದಂತೆ ತಡೆಯುವುದು ಬಹಳ ಮುಖ್ಯ. ಒಂದಕ್ಕಿಂತ ಹೆಚ್ಚು ನಾರ್ಮಲ್ ಡಿಲೆವರಿಯಾದವರು ಅಥವಾ ಗರ್ಭಾಶಯ ಹಿಗ್ಗುವಿಕೆ ಲಕ್ಷಣ ಕಾಣಿಸಿಕೊಳ್ತಿದೆ ಎನ್ನುವವರು ಎಚ್ಚರಿಕೆವಹಿಸಬೇಕು. ನಿತ್ಯ ಮಲಬದ್ಧತೆ ಸಮಸ್ಯೆ ಹೊಂದಿರುವವರು ಮೊದಲು ಅದನ್ನು ತಡೆಯಬೇಕು. ನೀವು ಮಲಬದ್ಧತೆಗೆ ಚಿಕಿತ್ಸೆ ಪಡೆಯಬಹುದು. ಸಾಕಷ್ಟು ನೀರು ಮತ್ತು ದ್ರವ ಪದಾರ್ಥ ಸೇವನೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ತರಕಾರಿ, ಬೀನ್ಸ್ ಮತ್ತು ಧಾನ್ಯಗಳನ್ನು ತಿನ್ನಬೇಕು. ಭಾರವಾದ ವಸ್ತುಗಳನ್ನು ಬೇಕಾಬಿಟ್ಟಿ ಎತ್ತಿದ್ರೆ ಸಮಸ್ಯೆಯಾಗುತ್ತದೆ. ಭಾರವಾದ ವಸ್ತುಗಳನ್ನು ಎತ್ತುವುದು ಅನಿವಾರ್ಯ ಎನ್ನುವವರು ಅದನ್ನು ಸರಿಯಾಗಿ ಮೇಲಕ್ಕೆತ್ತಬೇಕು. ವಸ್ತುಗಳನ್ನು ಎತ್ತುವಾಗ ನಿಮ್ಮ ಬೆನ್ನನ್ನು ಬಳಸುವ ಬದಲು ನಿಮ್ಮ ಕಾಲುಗಳನ್ನು ಬಳಸಬೇಕು.