Asianet Suvarna News Asianet Suvarna News

ಕರ್ನಾಟಕದಲ್ಲಿ ಮೊದಲ ಬಾರಿಗೆ ಒಬ್ಬನೇ ವ್ಯಕ್ತಿಗೆ ಎರಡು ಬಾರಿ ಹೃದಯ ಕಸಿ ಚಿಕಿತ್ಸೆ..!

ದೇಶದಲ್ಲಿ ಎರಡನೇ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಹೃದಯ ಕಸಿ ( ಮರು ಕಸಿ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದ ಆಸ್ಟರ್‌ ಹಾಸ್ಟಿಟಲ್‌ 

Second Time Heart Transplant Treatment for A person in Karnataka grg
Author
First Published Jun 20, 2024, 5:53 AM IST | Last Updated Jun 20, 2024, 5:53 AM IST

ಬೆಂಗಳೂರು(ಜೂ.20):  ದೇಶದಲ್ಲಿ ಎರಡನೇ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಹೃದಯ ಕಸಿ (ಮರು ಕಸಿ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಟರ್‌ ಹಾಸ್ಟಿಟಲ್‌ ತಿಳಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್‌ನ ಲೀಡ್‌ ಕನ್ಸಲ್ಟೆಂಂಟ್‌ ಪ್ರೊ. ಡಾ. ನಾಗಮಲೇಶ್‌ ಯು.ಎಂ., ‘ 32 ವರ್ಷದ ಎಂಜಿನಿಯರ್‌ಗೆ ಆಸ್ಟರ್‌ ಹಾಸ್ಪಿಟಲ್‌ನಲ್ಲಿ ಆರು ತಿಂಗಳ ಹಿಂದೆ ಹೃದಯ ಮರುಕಸಿ ಮಾಡಲಾಗಿದೆ. ಪ್ರಸ್ತುತ ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾರೆ’ ಎಂದರು.

ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ

‘ಹಿಗ್ಗಿದ ಕಾರ್ಡಿಯೋಮಿಪತಿ ಮತ್ತು ಹೃದಯದ ವೈಫಲ್ಯದಿಂದ ಈ ಹಿಂದೆ 2016ರಲ್ಲಿ ಮೊದಲ ಬಾರಿ ಹೃದಯ ಕಸಿಗೆ ಒಳಗಾಗಿದ್ದರು. 2018ರಲ್ಲಿ ವಿವಾಹವಾಗಿದ್ದ ಅವರ ಆರೋಗ್ಯ 2020ರಲ್ಲಿ ಕೋವಿಡ್‌ ಸೋಂಕು ತಗುಲಿದ್ದರೂ ಗುಣಮುಖರಾಗಿದ್ದರು. ಆದರೆ 2021ರಲ್ಲಿ ಕಾರ್ಡಿಯಾಕ್‌ ಅಲೋಗ್ರಾಫ್ಟ್‌ ವಾಸ್ಕುಲೋಪತಿ, ಕಸಿ ಮಾಡಿದ ಹೃದಯದಲ್ಲಿನ ಅಪಧಮನಿಗಳ ಕಿರಿದಾಗುವಿಕೆ, ಬೈವೆಂಟ್ರಿಕ್ಯುಲರ್‌ ಸಮಸ್ಯೆ ಉಂಟಾಯಿತು. ಇದಕ್ಕೆ ಹೃದಯದ ಮರು ಕಸಿ ಅಗತ್ಯವಿತ್ತು’ ಎಂದು ಹೇಳಿದರು. ಡಾ. ದಿವಾಕರ್‌ ಭಟ್‌ ಮಾತನಾಡಿದರು.

Latest Videos
Follow Us:
Download App:
  • android
  • ios