Water Bottles Expiry Date: ಕುಡಿಯುವ ನೀರಿಗೂ ಎಕ್ಸ್‌ಪಯರಿ ಡೇಟ್ ಇದ್ಯಾ..?

ಎಲ್ಲಾ ತಿಂಡಿಯ ಪ್ಯಾಕೆಟ್, ಸೋಪ್ ಇತರ ವಸ್ತುಗಳ ಮೇಲೆ ಎಕ್ಸ್‌ಪಯರಿ ಡೇಟ್ (Expiry Date) ಇರುವುದನ್ನು ನೋಡಿರಬಹುದು. ಈ ರೀತಿಯ ಪ್ಯಾಕೆಟ್‌ನಲ್ಲಿರುವ ತಿಂಡಿಗಳನ್ನು ತಿನ್ನುವುದು, ವಸ್ತುಗಳನ್ನು ಉಪಯೋಗಿಸುವುದು ಆರೋಗ್ಯ (Health)ಕ್ಕೆ ಹಾನಿಕರ ಎಂದು ಪರಿಗಣಿಸಲಾಗುತ್ತದೆ. ಆದರೆ ನೈಸರ್ಗಿಕವಾಗಿ ಭೂಮಿಯಿಂದ ಸಿಗುವ ಜೀವಜಲವಾದ ನೀರಿಗೂ ಎಕ್ಸ್‌ಪಯರಿ ಡೇಟ್ ಇದ್ಯಾ. ಅಥವಾ ವಾಟರ್ ಬಾಟಲ್‌ (Water Bottle)ಗಳಿಗೆ ಮಾತ್ರನಾ..? 

Real Reason Behind the Expiry  date of water Bottles

ಮಾನವರು ಕೃತಜ್ಞರಾಗಿರಬೇಕಾದ ನೈಸರ್ಗಿಕ ಸಂಪನ್ಮೂಲಗಳಲ್ಲಿ ನೀರು ಸಹ ಒಂದಾಗಿದೆ. ಸದ್ಯ, ಭೂಮಿಯ ಮೇಲೆ ತುಂಬಾ ನೀರು ಇದ್ದರೂ ಅದು ಶೀಘ್ರದಲ್ಲೇ ವಿರಳ ಸಂಪನ್ಮೂಲವಾಗಲಿದೆ. ಯಾಕೆಂದರೆ, ವಾಸ್ತವವೆಂದರೆ ಭೂಮಿಯಲ್ಲಿ ಶೇಕಡಾ 97ಕ್ಕಿಂತ ಹೆಚ್ಚು ನೀರು ಸಾಗರಗಳಿಂದ ಬರುತ್ತದೆ. ಆದರೆ, ಸಮುದ್ರದ ನೀರು ಕುಡಿಯಲು ಯೋಗ್ಯವಾಗಿಲ್ಲ. ಭೂಮಿಯ ಮೇಲಿನ ಶೇಕಡಾ 2.7ರಷ್ಟು ಶುದ್ಧ ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಆದರೆ ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಮಾಣವನ್ನು ಗಮನಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ.

ಭೂಮಿಯಲ್ಲಿರುವ ಪ್ರತಿಯೊಂದು ಜೀವಕ್ಕೂ ನೀರು ಅತ್ಯವಶ್ಯವಾಗಿದೆ. ಆಹಾರವಿಲ್ಲದೆ ಎರಡು-ಮೂರು ದಿನ ಇದ್ದರೂ ಇರಬಹುದು. ಆದರೆ ನೀರಿಲ್ಲದೆ ಜೀವ ಸಂಕುಲವಿಲ್ಲ. ಹೀಗಾಗಿ ಮನುಷ್ಯ ತಾನೆಲ್ಲಿಗೆ ಹೋದರೂ ನೀರನ್ನು ಕೊಂಡೊಯ್ಯುತ್ತಾನೆ. ನೀರು ಮನುಷ್ಯನ ಬಾಯಾರಿಕೆಯನ್ನು ನೀಗಿಸುತ್ತದೆ. ಜೀವಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಬಾವಿ, ಕೆರೆ, ಕೊಳಗಳು ನೀರಿನ ಮೂಲಗಳಾಗಿವೆ. ಆದರೆ ಸಿಟಿ ಲೈಫ್‌ನಲ್ಲಿ ಎಲ್ಲರೂ ಬಾಟಲಿ ನೀರನ್ನೇ ನೆಚ್ಚಿಕೊಂಡು ಬಿಟ್ಟಿದ್ದಾರೆ.

ಆದರೆ, ಬಾಟಲಿ ನೀರನ್ನು ಉಪಯೋಗಿಸುವ ಮುನ್ನ ನಿಮಗೆ ಗೊತ್ತಿರಲಿ ಈ ವಾಟರ್ ಬಾಟಲ್‌ಗಳಿಗೂ ಎಕ್ಸ್‌ಪಯರಿ ಡೇಟ್ ಇದೆ. ಅವಧಿ ಮೀರಿದ ಬಾಟಲ್‌ನಲ್ಲಿರುವ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?

ಎಕ್ಸ್‌ಪಯರಿ ಡೇಟ್ ಮುಗಿದ ಬಾಟಲ್‌ ನೀರು ಕುಡಿಯಲು ಸುರಕ್ಷಿತವೇ ?

ಪ್ರಯಾಣದ ಸಂದರ್ಭದಲ್ಲಿ ನೀರನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ನೀರಿನ ಬಾಟಲ್ ತೆಗೆದುಕೊಳ್ಳಲಾಗದ ಸಂದರ್ಭದಲ್ಲಿ ಹೆಚ್ಚಿನವರು ಅಂಗಡಿಗಳಿಂದ ವಾಟರ್ ಬಾಟಲ್ ಅನ್ನು ಖರೀದಿಸುತ್ತಾರೆ. ಆದರೆ, ನೀರಿನ ಬಾಟಲಿಗಳಿಗೆ ಎಕ್ಸ್‌ಪಯರಿ ಡೇಟ್ ಇರುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ. ವಾಟರ್ ಬಾಟಲ್‌ (Bottle)ನಲ್ಲಿ ಈ ಡೇಟ್ ಇರುವುದು ಎಲ್ಲರಿಗೂ ಆಶ್ಚರ್ಯವುಂಟು ಮಾಡುತ್ತದೆ. ನೀರಿಗೂ ಎಕ್ಸ್ ಪಯರಿ ಡೇಟ್ ಇದೆ. ಡೇಟ್ ಮುಗಿದ ನೀರು (Water) ಕುಡಿಯಲು ಸುರಕ್ಷಿತವಲ್ಲವೇ ಈ ಮೊದಲಾದ ಪ್ರಶ್ನೆ ಮೂಡುತ್ತದೆ.

ತಂಪಾದ ಸ್ಥಳದಲ್ಲಿ 6 ತಿಂಗಳವರೆಗೆ ಸಂಗ್ರಹಿಸಿದಾಗ ಕುಡಿಯುವ ನೀರನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ, ನೀರು ಕಾರ್ಬೋನೇಟೆಡ್ ಆಗಿರುವಾಗ, ಅನಿಲವು ನೀರಿನಿಂದ ನಿಧಾನವಾಗಿ ಹೊರಬರುವುದರಿಂದ ಅದರ ವಾಸನೆ (Smell)ಯು ಬರಲು ಆರಂಭವಾಗುವುದು. 

Salt Water : ಉಪ್ಪು ನೀರಿನ 5 ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಬಾಟಲ್ ನೀರು ಆರೋಗ್ಯಕರವೇ..?

ಪ್ಯಾಕ್ ಮಾಡಿದ ನೀರಿನ ವಿಷಯಕ್ಕೆ ಬಂದಾಗ, ಅದು ವಾಸ್ತವವಾಗಿ ಅವಧಿ ಮೀರಬಹುದಾಗಿದೆ. ಅದರ ಹಿಂದಿನ ಕಾರಣವೆಂದರೆ ಅದನ್ನು ಸಂಗ್ರಹಿಸಲಾದ ಪ್ಲಾಸ್ಟಿಕ್ ಬಾಟಲಿ. ಪ್ಯಾಕೇಜ್ ಮಾಡಿದ ಬಾಟಲಿಯು ಸೂರ್ಯನ ಬೆಳಕು ಅಥವಾ ಶಾಖವಿರುವ ಸ್ಥಳದಲ್ಲಿದ್ದಾಗ ಪ್ಲಾಸ್ಟಿಕ್ (Plastic) ಬಾಟಲಿಯಲ್ಲಿರುವ ಪಾಲಿಥೀನ್ ಟೆರೆಫಥ್ಲೇಟ್ ನೀರಿನಲ್ಲಿ ಸೋರಿಕೆಯಾಗಲು ಪ್ರಾರಂಭಿಸುತ್ತದೆ, ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ.

ಪ್ಯಾಕೇಜ್ ಮಾಡಿದ ನೀರಿನ ಅವಧಿ ಮುಗಿಯಲು ಇನ್ನೊಂದು ಕಾರಣವೆಂದರೆ, ಪ್ಯಾಕೇಜ್ ಮಾಡಿದ ನೀರನ್ನು ಮಾರಾಟ ಮಾಡುವ ಹೆಚ್ಚಿನ ಕಂಪನಿಗಳು, ಸೋಡಾಗಳು ಮತ್ತು ಇತರ ಪಾನೀಯಗಳನ್ನು ಪ್ಯಾಕೇಜಿಂಗ್ ಮಾಡಲು ಬಳಸಿದ ಯಂತ್ರೋಪಕರಣಗಳನ್ನೇ ಬಳಸುತ್ತವೆ ಅಂತಹ ಪ್ಯಾಕೇಜಿಂಗ್ ಎಕ್ಸ್‌ಪಯರಿ ಡೇಟ್ (Expiry Date) ಅನ್ನು ಹೊಂದಿದೆ.

ಅವಧಿ ಮೀರಿದ ನೀರಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

ಅವಧಿ ಮೀರಿದ ವಾಟರ್ ಬಾಟಲ್‌ನಿಂದ ನೀರು ಕುಡಿಯುವುದು ಹಲವು ಆರೋಗ್ಯ (Health) ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಸಂತಾನೋತ್ಪತ್ತಿ ಸಮಸ್ಯೆ, ನರವೈಜ್ಞಾನಿಕ ಸಮಸ್ಯೆ, ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸಬಹುದು.

Latest Videos
Follow Us:
Download App:
  • android
  • ios