ಕೆಲಸ ಬಿಟ್ಟು ಮಂಗನ ಜೊತೆ ಆಟ: ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರು ನರ್ಸ್‌ಗಳ ಅಮಾನತು

ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಂಗಗಳ ಜೊತೆ ಆಟವಾಡುತ್ತಾ ರೀಲ್ಸ್‌ ಮಾಡುತ್ತಿದ್ದ 6 ದಾದಿಯರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ. ದಾದಿಯರ ರೀಲ್ಸ್‌ ವೈರಲ್‌ ಆದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. 

left work playing with monkey uttar pradesh health department suspends six nurses who working in the maternity ward akb

ಬಹ್ರೈಚ್(ಯುಪಿ): ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಂಗಗಳ ಜೊತೆ ಆಟವಾಡುತ್ತಾ ರೀಲ್ಸ್‌ ಮಾಡುತ್ತಿದ್ದ 6 ದಾದಿಯರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ. ದಾದಿಯರ ರೀಲ್ಸ್‌ ವೈರಲ್‌ ಆದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಬಹ್ರೈಚ್‌ನ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಪ್ರಸೂತಿ ವಿಭಾಗಕ್ಕೆ ನಿಯೋಜನೆಗೊಂಡಿದ್ದ ನರ್ಸ್‌ಗಳು ಸಮವಸ್ತ್ರ ಧರಿಸಿಕೊಂಡು ಮಂಗನ ಮರಿ ಜೊತೆ ಆಡುತ್ತಿದ್ದ ವಿಡಿಯೋ ವೈರಲ್‌ ಆದ ಬಳಿಕ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವ ಜೊತೆಗೆ ತನಿಖೆಗಾಗಿ ಐದು ವೈದ್ಯರ ಸಮಿತಿಯನ್ನು ರಚಿಸಲಾಗಿದೆ.

ಆಸ್ಪತ್ರೆಯ ಚೇರ್ ಮೇಲೆ ಕುಳಿತುಕೊಂಡು ಆರು ಎಪ್ರಾನ್ ಧರಿಸಿದ್ದ ಆರು ಜನ ನರ್ಸ್‌ಗಳು ಪುಟಾಣಿ ಕೋತಿ ಮರಿಯೊಂದಿಗೆ ಆಟವಾಡುತ್ತಿದ್ದರು. ಇವರೆಲ್ಲರೂ ಸ್ಟಾಪ್ ನರ್ಸ್‌ಗಳಾಗಿದ್ದು, ಪ್ರಸೂತಿ ವಿಭಾಗಕ್ಕೆ ಇವರನ್ನು ಕರ್ತವಕ್ಕೆ ನಿಯೋಜಿಸಲಾಗಿತ್ತು ಎಂದು ಮಹಾರಿಷಿ ಬಾಲರ್ಕ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಮೇಲುಸ್ತುವಾರಿ ಅಧಿಕಾರಿ ಡಾಕ್ಟರ್ ಎಂಎಂ ತ್ರಿಪಾಠಿ ಹೇಳಿದ್ದಾರೆ. ಮಹಾರಾಜ ಸುಹೇಲ್‌ದೇವ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನ ಅಡಿಯಲ್ಲಿ ಮಹಾರಿಷಿ ಬಾಲರ್ಕ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ. ಅಮಾನತುಗೊಂಡ ದಾದಿಯರನ್ನು ಅಂಜಲಿ, ಕಿರಣ್ ಸಿಂಗ್, ಅಂಚಲ್ ಶುಕ್ಲಾ, ಪ್ರಿಯಾ ರಿಚರ್ಡ್, ಪೂನಂ ಪಾಂಡೆ, ಸಂಧ್ಯಾ ಸಿಂಗ್ ಎಂದು ಗುರುತಿಸಲಾಗಿದೆ. 

 

ಪೂಜಾ ಸಾಮಗ್ರಿ ಮಾರಾಟ ಮಾಡದಂತೆ ಮುಸ್ಲಿಮರಿಗೆ ನಿಷೇಧ ಹೇರಲು ವಿಎಚ್‌ಪಿ ಆಗ್ರಹ

ನವದೆಹಲಿ: ಮುಸ್ಲಿಮರು ತಮ್ಮ ಗುರುತನ್ನು ಮರೆಮಾಚಿಕೊಂಡು ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರುವುದರಿಂದ ಹಿಂದೂಗಳ ನಂಬಿಕೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪರಿಷತ್ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ರಾ, ಕೇದಾರನಾಥದಂತಹ ಹಿಂದೂಗಳ ಯಾತ್ರಾ ಸ್ಥಳಗಳಲ್ಲಿ ಮುಸ್ಲಿಮರು ಪ್ರಸಾದ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಮಾರುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಕಾನೂನಿನ ಪ್ರಕಾರ ಇದಕ್ಕೆ ಯಾವುದೇ ಆಕ್ಷೇಪಣೆ ಇಲ್ಲವಾದರೂ ಕೆಲ ಕಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಪಾನೀಯ ಹಾಗು ತಿನಿಸುಗಳಲ್ಲಿ ಉಗುಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios