ರೆಟ್ರೋ ವಾಕಿಂಗ್ ಅಥವಾ ರಿವರ್ಸ್ ವಾಕಿಂಗ್ ಮಾಡಿ ತೂಕ ಇಳಿಸಿಕೊಳ್ಳಬಹುದಾ?
ನಿಮ್ಮ ಎಲ್ಲಾ ವಾಕಿಂಗ್ ಮತ್ತು ಜಾಗಿಂಗ್ ಜೊತೆಗೇ ರಿವರ್ಸ್ ವಾಕಿಂಗ್ ಅನ್ನು ನಿಮ್ಮ ದೈನಂದಿನ ದಿನಚರಿಯ ಜೊತೆಗೆ ಜೋಡಿಸಿಕೊಂಡು ನೋಡಿ. ಇದರ ಪ್ರಯೋಜನ ಕಂಡು ನೀವೇ ದಂಗಾಗುತ್ತೀರಿ!
ಹಿಂದುಹಿಂದಕ್ಕೆ ನಡೆಯಲು ಎಂದಾದರೂ ಪ್ರಯತ್ನಿಸಿದ್ದೀರಾ? ನಮ್ಮಲ್ಲಿ ಅನೇಕರಿಗೆ, ಇದು ಸಿಲ್ಲಿ ಅಥವಾ ನಿಷ್ಪ್ರಯೋಜಕವೆಂದು ತೋರಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ತುಂಬಾ ಒಳ್ಳೆಯದು ಎಂಬುದು ನಿಮಗೆ ಗೊತ್ತೆ? ನಿಮ್ಮ ಎಲ್ಲಾ ವಾಕಿಂಗ್ ಮತ್ತು ಜಾಗಿಂಗ್ ಜೊತೆಗೇ ರಿವರ್ಸ್ ವಾಕಿಂಗ್ ಅನ್ನು ನಿಮ್ಮ ದೈನಂದಿನ ದಿನಚರಿಯ ಜೊತೆಗೆ ಜೋಡಿಸಿಕೊಂಡು ನೋಡಿ. ಸರಳವಾದ 10-20 ನಿಮಿಷಗಳ ಹಿಂದಕ್ಕೆ ನಡೆಯುವಿಕೆ ಅಥವಾ ರಿವರ್ಸ್ ವಾಕಿಂಗ್ ಪ್ರತಿದಿನ ಅಥವಾ ವಾರದಲ್ಲಿ ಕೆಲವು ಬಾರಿ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹವು ಹಂಬಲಿಸುವ ವ್ಯಾಯಾಮದ ವೈವಿಧ್ಯತೆಯನ್ನು ನಿಮಗೆ ಒದಗಿಸುತ್ತದೆ.
ರಿವರ್ಸ್ ವಾಕಿಂಗ್, ಇದನ್ನು ರೆಟ್ರೊ-ವಾಕಿಂಗ್ ಎಂದೂ ಕರೆಯುತ್ತಾರೆ; ಇದು ಚೀನಾದಿಂದ ಬಂದಿದೆ. ಮತ್ತು ಇದರ ಆರೋಗ್ಯ ಮತ್ತು ಮಾನಸಿಕ ಅನುಕೂಲಗಳಿಗಾಗಿ ಅಲ್ಲಿ ಜನಪ್ರಿಯವಾಗಿದೆ. ಅಲ್ಲಿ ಜನ ತಮ್ಮ ನಡಿಗೆ ಮತ್ತು ಕೆಳ ಪಾದಗಳಲ್ಲಿ ಚಲನಶೀಲತೆಯನ್ನು ಸುಧಾರಿಸಲು, ಮೊಣಕಾಲು, ಪೃಷ್ಠ ಮತ್ತು ಪಾದದ ವ್ಯಾಪ್ತಿಯ ಚಲನೆಯನ್ನು ಸುಧಾರಿಸಲು ಮತ್ತು ಶಕ್ತಿಯನ್ನು ಬೆಳೆಸಲು ಸಹಾಯ ಮಾಡಲು ರಿವರ್ಸ್ ವಾಕಿಂಗ್ ಬಳಸುತ್ತಾರೆ.
ಇದು ಹೇಗೆ ಪ್ರಯೋಜನಕಾರಿ?
ಹಿಂದಕ್ಕೆ ನಡೆಯುವುದರಿಂದ ನಿಮ್ಮ ದೇಹದ ಮೇಲೆ ನೀವು ಪ್ರಯೋಗಿಸುವ ಬಲವು ಹೆಚ್ಚಾಗಿರುತ್ತದೆ. ಹೊಸ ಮತ್ತು ಪರಿಚಯವಿಲ್ಲದ ವ್ಯಾಯಾಮಕ್ಕೆ ಹೊಂದಿಕೊಳ್ಳಲು ನಿಮ್ಮ ದೇಹಕ್ಕೆ ನೀವು ಸವಾಲು ಮಾಡುತ್ತಿದ್ದೀರಿ. ಹೀಗಾಗಿ ಇದು ನಿಮ್ಮ ದೈಹಿಕ ಸಾಮರ್ಥ್ಯವನ್ನು ಸುಧಾರಿಸುವುದು ಮತ್ತು ಹೆಚ್ಚಿಸುವುದು. ಹಿಂದಕ್ಕೆ ನಡೆಯುವುದು ವಾಸ್ತವವಾಗಿ ವಿಭಿನ್ನವಾದ ರೀತಿಯಲ್ಲಿ ಸ್ನಾಯುಗಳನ್ನು ತೊಡಗಿಸುತ್ತದೆ. ಇದು ವಿಭಿನ್ನವಾಗಿ ಯೋಚಿಸಲು ಮತ್ತು ಕಾರ್ಯನಿರ್ವಹಿಸಲು ನಿಮ್ಮ ಮನಸ್ಸಿಗೆ ಸವಾಲು ಹಾಕುತ್ತದೆ. ನಿಮ್ಮ ಕಾಲಿನ ಸಹಿಷ್ಣುತೆ ಮತ್ತು ಏರೋಬಿಕ್ ಸಾಮರ್ಥ್ಯವನ್ನು ಹೆಚ್ಚು ವೇಗವಾಗಿ ಸುಧಾರಿಸಲು ಸಹಾಯ ಮಾಡುತ್ತದೆ.
ಇನ್ನೂ ಕೆಲವು ಪ್ರಯೋಜನಗಳು
ಹಿಮ್ಮುಖವಾಗಿ ನಡೆಯುವುದರಿಂದ ನಿಮ್ಮ ಹೃದಯ ಹೆಚ್ಚಿನ ವೇಗದಿಂದ ಪಂಪ್ ಮಾಡುತ್ತದೆ. ಮೆದುಳು ಸೇರಿದಂತೆ ಸ್ನಾಯುಗಳು ಮತ್ತು ಅಂಗಗಳಿಗೆ ಹೆಚ್ಚು ರಕ್ತ ಮತ್ತು ಆಮ್ಲಜನಕವನ್ನು ಪ್ರಸಾರ ಮಾಡುತ್ತದೆ. ಇದು ದೇಹದ ಅರಿವಿನ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ದೇಹದ ಸಮನ್ವಯ ಮತ್ತು ಚಲನೆಯನ್ನು ಹೆಚ್ಚಿಸುತ್ತದೆ. ಕಡಿಮೆ ಬಳಸಿದ ಕಾಲಿನ ಸ್ನಾಯುಗಳಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳು ಮತ್ತು ಹೃದಯದ ರಿದಂಗೆ ಇದು ಪ್ರಯೋಜನಕಾರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ನಿಮ್ಮ ಸಾಮಾನ್ಯ ಫಾರ್ವರ್ಡ್ ವಾಕಿಂಗ್‌ಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
ಸ್ನಾನ ಮಾಡುವಾಗ ಈ ಭಾಗ ಸ್ವಚ್ಛಗೊಳಿಸಲು ಮರೆಯದಿರಿ, ಇಲ್ಲಾಂದ್ರೆ ಕಾಯಿಲೆ ಕಾಡೋದು ಗ್ಯಾರಂಟಿ!
ರೆಟ್ರೊ-ವಾಕಿಂಗ್ ಬಗ್ಗೆ ನಡೆದ ಹೆಚ್ಚಿನ ಅಧ್ಯಯನಗಳು, ಹಿಂದಕ್ಕೆ ನಡೆಯುವುದು ನಿಮ್ಮಲ್ಲಿನ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ! ಹಿಮ್ಮುಖವಾಗಿ ಚಲಿಸುವುದರಿಂದ ನಿಮ್ಮ ಹೃದಯವು ಮುಂದಕ್ಕೆ ಚಲಿಸುವುದಕ್ಕಿಂತ ವೇಗವಾಗಿ ಪಂಪ್ ಆಗುತ್ತದೆ. ಅಂದರೆ ನೀವು ಕಾರ್ಡಿಯೋ ಫಿಕ್ಸ್, ಮೆಟಾಬಾಲಿಸಮ್ ಬೂಸ್ಟ್ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತೀರಿ. ಪ್ರತಿ ನಿಮಿಷಕ್ಕೆ ಸುಮಾರು 40% ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತೀರಿ.
ಜರ್ನಲ್ ಆಫ್ ಬಯೋಮೆಕಾನಿಕ್ಸ್ ಈ ಬಗ್ಗೆ ಒಂದು ಸಂಶೋಧನೆ (Reserarch) ನಡೆಸಿದೆ. ಮುಂದಿನ ನಡಿಗೆ ಅಥವಾ ಓಟಕ್ಕೆ ಹೋಲಿಸಿದರೆ ಹಿಮ್ಮುಖ ನಡಿಗೆ (Back Walk) ಅಥವಾ ಓಟವು ಮುಂಭಾಗದ ಮೊಣಕಾಲಿನ ನೋವನ್ನು (Knee Pain) ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು, ಹಿನ್ನಡೆ ಓಟ ಮತ್ತು ನಡಿಗೆಯ ಸಂಯೋಜನೆಯು ಹೃದಯ ರಕ್ತನಾಳದ ಫಿಟ್‌ನೆಸ್ (Heart Vessel Fitness) ಅನ್ನು ಸುಧಾರಿಸುತ್ತದೆ ಮತ್ತು ದೇಹದ ಸಂಯೋಜನೆಯನ್ನು ಬದಲಾಯಿಸಬಹುದು ಎಂದು ಕಂಡುಹಿಡಿದಿದೆ.
ಅಂದಹಾಗೆ, ನೀವು ಹಿಂದಹಿಂದಕ್ಕೆ ನಡೆಯಬಲ್ಲಿರಿ. ಆದರೆ ಕಾಂಗರೂಗಳು, ಎಮುಗಳು ಮತ್ತು ಪೆಂಗ್ವಿನ್‌ಗಳು ಹಿಂದಕ್ಕೆ ನಡೆಯಲಾರವು!
ಹೊಸ ವರ್ಷ ಮೊಬೈಲ್ ಬಳಕೆ ಕಡಿಮೆ ಮಾಡಿ... ಇಲ್ಲಾಂದ್ರೆ ಕಾಡುತ್ತೆ ಈ ಸಮಸ್ಯೆ!