Asianet Suvarna News Asianet Suvarna News

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಸ್ಪಷ್ಟಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ನಡುವೆಯೇ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

Karnataka first COVID-19 death confirmed  by  Health minister dinesh gundu rao gow
Author
First Published Dec 20, 2023, 11:38 AM IST

ಬೆಂಗಳೂರು (ಡಿ.20): ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ನಡುವೆಯೇ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿಸೆಂಬರ್‌ 15ರಂದು  ಈ ಸಾವಾಗಿದ್ದು,  ಡಿಸೆಂಬರ್ 14 ಮಲ್ಲಿಗೆ  ಆಸ್ಪತ್ರೆಗೆ ದಾಖಲಾಗಿದ್ರು ಕೊರೊನಾ ಜೊತೆಗೆ ಅವರಿಗೆ  ಹಾರ್ಟ್ ಮತ್ತು ಟಿಬಿ ಇನ್ಪೇಕ್ಷನ್ ಇತ್ತು ಇತರ ಆರೋಗ್ಯ ಸಮಸ್ಯೆಗಳು ಇತ್ತು ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವರ ಜೊತೆ ಸಭೆ ನಡೆಸಲಾಯ್ತು. ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ. JN1 ತಳಿ ಒಮೈಕ್ರಾನ್ ನಿನ ಉಪತಳಿ. ಈ ತಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಆಗಸ್ಟ್ ನಲ್ಲಿ ಮೊದಲು ಕಾಣಿಸಿಕೊಂಡಿತ್ತು. ಇದು ವೇಗವಾಗಿ ಹರಿಡಿತ್ತು. ಈ ತಳಿ ತುಂಬಾ ಹಾನಿಕರಿಕ ಅಲ್ಲ. ಸಾವಿನ ಪ್ರಮಾಣ ಕಡಿಮೆ. ಕೇಂದ್ರ ಇದ್ರ ಬಗ್ಗೆ ಅಂತಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಮುಂಜಾಗ್ರತಾ ಕ್ರಮ ಕೈಗೊಂಡರೆ ಉತ್ತಮ. ದೇಶದಲ್ಲಿ 20 ಕಡೆ ಈ ತಳಿ ಇರುವ ಬಗ್ಗೆ ಮಾಹಿತಿ ಇದೆ. ಗೋವಾ 18, ಕೇರಳ 1, ಮಹಾರಾಷ್ಟ್ರ 1 ಎಂದಿದ್ದಾರೆ.

ಕೋವಿಡ್‌ ಹೆಚ್ಚಳ ಹಿನ್ನೆಲೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್‌ ಹೊರಡಿಸಿದ ಕರ್ನಾಟಕ

ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್ ಆಗಿದೆ. 24 ಗಂಟೆಯಲ್ಲಿ1020 ಕ್ಕೂ ಹೆಚ್ಚು ಟೆಸ್ಡ್ ಆಗಿದೆ. ಟೆಸ್ಟ್ ಹೆಚ್ಚು ಮಾಡಲು ಸೂಚಿಸಲಾಗಿದೆ. ಪ್ರತಿ ದಿನ 5 ಸಾವಿರ ಟೆಸ್ಟ್ ಮಾಡಲು ಸೂಚಿಸಲಾಗಿದೆ. ಈ ಬಾರಿ ಕೇಸ್ ಕಡ್ಡಾಯವಾಗಿ ಆರ್ ಟಿ ಪಿಸಿ ಆರ್ ಮಾಡಲು ಸೂಚಿಸಿದೆ. ಎಲ್ಲಾ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. PM care ವೆಂಟಿಲೇಟರ್ ಮೈಂಟೆನ್ನೆಸ್‌ ದುಬಾರಿ ಇದೆ ಅದನ್ನ ಕಡಿಮೆ ಮಾಡಿ ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ಕ್ರಿಸ್ಮಸ್ ಹಾಗೂ ನ್ಯೂಯರ್  ಗೆ ಸ್ಕ್ರೀಕ್ಟ್ ರೂಲ್ಸ್ ವಿಚಾರವಾಗಿ ಸದ್ಯಕ್ಕೆ ಯಾವುದೇ ನಿರ್ಬಂಧ ಇಲ್ಲ. ಕೇಂದ್ರ ಸಹ ಯಾವುದೇ ನಿರ್ಬಂಧ ಇಲ್ಲ ಅಂತ ಹೇಳಿದೆ. ಅಂತಾರಾಷ್ಟ್ರೀಯ ಟ್ರಾವೆಲ್ ಬಗ್ಗೆಯೂ ಈಗಲೇ ಯಾವುದೇ ನಿಬಂಧನೆಗಳು ಇಲ್ಲ. ಟೆಸ್ಟಿಂಗ್ ಜಾಸ್ತಿ ಮಾಡಲು ಸೂಚಸಿದ್ದೇವೆ. ನೀವು ಸಹಜ ಜೀವನ ನಡೆಸಿಕೊಂಡು ಹೋಗಿ. ಹೊರಗಡೆ ಹೋದಾಗ ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು. ವಯಸ್ಸಾದವರು ಮಾಸ್ಕ್  ಹಾಕಿಕೊಳ್ಳಬೇಕು. ಬೆಂಗಳೂರಿನಲ್ಲಿ ಸಾವನ್ನಪಿದವರ ಜೀನೋಮ್ ಸಿಕ್ವೇನ್ಸ್ 50 ಸ್ಯಾಂಪಲ್ ಬೇಕು ಅದನ್ನ ನಾವು ಕಳಿಸುತ್ತೇವೆ. ಟೆಸ್ಟಿಂಗ್ ಬೇಕಾಗುವ ಎಲ್ಲಾ ಸಲಕರಣೆಗಳು ಇವೆ‌. ಸರ್ಕಾರಿ ಆಸ್ಪತ್ರೆಗಳಲ್ಲಿ RTPCR ಫ್ರೀ ಇದೆ. ಖಾಸಗಿ ಆಸ್ಪತ್ರೆ ದರ ಬಗ್ಗೆ ನಾಳೆ ಸಿಎಂ ಜೊತೆ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಯಾರು ಪ್ಯಾನಿಕ್ ಬೇಡ ಬೇರೆ ಬೇರೆ ರಾಷ್ಟ್ರದಲ್ಲೂ ಬಂದಿದೆ, ಮುಂಜಾಗ್ರತಾ ಕ್ರಮ ತಗೆದುಕೊಂಡೆ ಸಾಕು ಎಂಬ ಅಭಿಪ್ರಾಯವನ್ನ ಕೇಂದ್ರ ಹೇಳಿದೆ.

ಡಿ.23ರಿಂದ ನಿತ್ಯ 5000 ಕೋವಿಡ್‌ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

ಗಡಿ ಬಾಗದಲ್ಲಿ ಟೆಸ್ಟಿಂಗ್ ಹೆಚ್ಚು ಮಾಡಲು ಸೂಚಿಸಿದ್ದೇವೆ. ಕ್ರೌಡ್ ಏರಿಯಾಗದಲ್ಲಿ ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು. ಕ್ವಾರಂಟೈನ್ ಬಗ್ಗೆ ಎಲ್ಲಾ ಆ ಮಟ್ಟಿಗೆ ಹೋಗಿಲ್ಲ. ಸೊಂಕು ಹೆಚ್ಚಾದ್ರೆ ಮಾತ್ರ ಅದ್ರ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಸಚಿವರು ಹೇಳಿದ್ದಾರೆ.

 ರಾಜ್ಯದ ಜನತೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಹೊರಗಡೆ ತೆರಳುವಾಗ ಮಾಸ್ಕ್‌ ಧರಿಸಿ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಬೇಕು, ವೈರಲ್ ಟ್ರಾನ್ಸಪೋರ್ಟ್ ಮಿಡಿಯಾ ಖರೀದಿ ನಡೆಸುವಂತೆಯೂ ಈ ವೇಳೆ ಅವರು ಈಗಾಗಲೇ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios