Asianet Suvarna News Asianet Suvarna News

ಕೊರೋನಾ ಸೋಂಕಿತ 300  ಗರ್ಭಿಣಿಯರ ಹೆರಿಗೆ ಮಾಡಿಸಿದ ಬೆಂಗಳೂರಿನ ಆಸ್ಪತ್ರೆ

* ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಸಾಧನೆ
* ಮೂರು ನೂರು ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ
* ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತಡೆ
* ಆಸ್ಪತ್ರೆಯ ಸಾಧನೆ ಶ್ಲಾಘಿಸಿದ ಸಚಿವ ಡಾ. ಕೆ. ಸುಧಾಕರ್

 

HSIS Gosha Government Hospital for pregnant COVID positive women completes 300 deliveries mah
Author
Bengaluru, First Published Jun 13, 2021, 10:32 PM IST

ಬೆಂಗಳೂರು (ಜೂ.  13) ಬೆಂಗಳೂರಿನ  HSIS  Gosha  ಸರ್ಕಾರಿ ಆಸ್ಪತ್ರೆ  ಸಾಧನೆ ಮಾಡಿದೆ. ಜೂನ್ 12 ರಂದು ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಕೊರೋನಾ ಪೀಡಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ.

ಈ ಬಗ್ಗೆ ವಿವರಣೆಯನ್ನು ಆಸ್ಪತ್ರೆ ನಿರ್ದೇಶಕ ಡಾ. ತುಳಸಿದೇವಿ ನೀಡಿದ್ದಾರೆ. ಈ ವರ್ಷದ   ಮಾರ್ಚ್  27  ರಂದು ರಾಜ್ಯ ಸರ್ಕಾರ ನಮಗೊಂದು ಆದೇಶ ನೀಡಿತ್ತು. ಕೊರೋನಾ ಸೊಂಕಿತ ಗರ್ಭಿಣಿಯರಿಗೆಂದೇ ವಿಶೇಷ ವಾರ್ಡ್ ಸಿದ್ಧಮಾಡಲು ತಿಳಿಸಿತ್ತು.  ಅಲ್ಲಿಂದ 564 ಕೊರೋನಾ ಕೇಸ್ ಹ್ಯಾಂಡಲ್ ಮಾಡಿದ್ದೇವೆ. ಮೂರು ನೂರು ಹೆರಿಗೆ ಮಾಡಿಸಿದ್ದೇವೆ ಎಂದು ತಿಳಿಸಿದರು.

ಶುಭ ಸುದ್ದಿ; ಕರ್ನಾಟಕದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೋನಾ

 141 ನರ್ಮಲ್ ಹೆರಿಗೆಯಾಗಿದ್ದರೆ  159 ಸಿಸೇರಿಯನ್  ಮಾಡಲಾಗಿದೆ.  28  ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ತಾಯಿಯಿಂದ ಮಗುವಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ  ಆರು ಮಂದಿಗೆ ಅಬಾರ್ಶನ್ ಮಾಡಲಾಗಿದೆ.  ಕೊರೋನಾದ ಎಲ್ಲ ನಿಯಮ ಪಾಲನೆ ಮಾಡಿಕೊಂಡು ಕಾರ್ಯನಿರ್ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆಸ್ಪತ್ರೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.  ಕರ್ನಾಟಕಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು ಸರ್ಕಾರ ಲಾಕ್ ಡೌನ್ ಸಡಿಲಿಕೆಯೆಡೆ  ಹೆಜ್ಜೆ ಇಟ್ಟಿದೆ. 

Follow Us:
Download App:
  • android
  • ios