ಶ್ವಾಸಕೋಶದ ಸೋಂಕು ಕಾಡ್ಬಾರದು ಅಂದ್ರೆ ಸರಿಯಾಗಿ ಬ್ರೆಶ್ ಮಾಡಿ

ಬಾಯಿ ಸ್ವಚ್ಛವಾಗಿದ್ರೆ ಇಡೀ ದೇಹ ಆರೋಗ್ಯವಾಗಿದ್ದಂತೆ. ನಾವು ದೇಹದ ಉಳಿದ ಭಾಗಗಳ ಬಗ್ಗೆ ಹೆಚ್ಚು ಕಾಳಜಿವಹಿಸ್ತೇವೆ. ಆದ್ರೆ ಬಾಯಿ ಕ್ಲೀನ್ ಮಾಡೋದನ್ನು ಮರೆಯುತ್ತೇವೆ. ಹಲ್ಲನ್ನು ಸರಿಯಾಗಿ ಉಜ್ಜಿದ್ರೆ ಖಾಯಿಲೆಯಿಂದ ದೂರ ಇರ್ಬಹುದು ಎಂಬುದು ನಿಮಗೆ ಗೊತ್ತಾ?
 

How Oral Bacteria Can Affect The Lungs

ನಮ್ಮ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಹಾಗೆ ಶ್ವಾಸಕೋಶ ಕೂಡ ಮುಖ್ಯ. ಹೃದಯ ತನ್ನ ಪಾಡಿಗೆ ತಾನು ಕೆಲಸ ಮಾಡಿದಂತೆ ಶ್ವಾಕೋಶ ಕೂಡ ಉಸಿರಾಟ ಕ್ರಿಯೆಯನ್ನು ಸಲೀಸಾಗಿ ನಡೆಸುತ್ತದೆ. ಆದರೆ ಈಗಿನ ಕಲುಷಿತ ವಾತಾವರಣ, ವಾಯುಮಾಲಿನ್ಯ ಮುಂತಾದವುಗಳ ಕಾರಣದಿಂದ ಕಲುಷಿತ ಗಾಳಿ ಮೂಗಿನ ಮೂಲಕ ಅಥವಾ ಬಾಯಿಯ ಮೂಲಕ ಶ್ವಾಸಕೋಶವನ್ನು ಸೇರಿ ಅದು ದುರ್ಬಲವಾಗುವಂತೆ ಮಾಡುತ್ತವೆ. ಕೆಲವೊಮ್ಮೆ ಮನುಷ್ಯನ ಕೆಟ್ಟ ಚಟಗಳಿಂದಲೂ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. 

ಶ್ವಾಸಕೋಶ (Lungs) ದ ಆರೋಗ್ಯ (Health) ಕಾಪಾಡಿಕೊಳ್ಳಲು ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಏಕೆಂದರೆ ಬಾಯಿಯ ಮೂಲಕವೇ ಕೆಟ್ಟ ಗಾಳಿ ಮತ್ತು ಸೂಕ್ಷ್ಮ ಜೀವಿಗಳು ಶ್ವಾಸಕೋಶವನ್ನು ತಲುಪುತ್ತವೆ. ಇದರಿಂದ ಹಲ್ಲು (Tooth) ಮತ್ತು ವಸಡಿನ ಆರೋಗ್ಯದ ಜೊತೆ ಶ್ವಾಸಕೋಶ ಕೂಡ ಹಾಳಾಗುತ್ತದೆ. ಹಾಗಾಗಿ ಶ್ವಾಸಕೋಶ ಸರಿಯಾಗಿ ಕೆಲಸ ನಿರ್ವಹಿಸಬೇಕಾದರೆ ನೀವು ಬಾಯಿಯ ಆರೋಗ್ಯವನ್ನು ಮೊದಲು ಕಾಪಾಡಿಕೊಳ್ಳಬೇಕು. ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಟಿಪ್ಸ್ (Tips) ಇಲ್ಲಿದೆ.

ಬಾಯಿಯ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ :
ಸರಿಯಾದ ಕ್ರಮದಲ್ಲಿ ಬ್ರಶ್ ಮಾಡಿ :
ಬೆಳಿಗ್ಗೆ ಎದ್ದ ತಕ್ಷಣ ಬಹುತೇಕ ಎಲ್ಲರೂ ಬ್ರಶ್ ಮಾಡ್ತಾರೆ. ಆದ್ರೆ ಅನೇಕರಿಗೆ ಸರಿಯಾದ ಕ್ರಮದಲ್ಲಿ ಬ್ರಶ್ ಮಾಡೋದು ತಿಳಿದಿಲ್ಲ. ಸರಿಯಾಗಿ ಬ್ರಶ್ ಮಾಡದೆ ಹೋದ್ರೆ ಅನೇಕ ರೋಗಗಳು ನಮ್ಮನ್ನು ಸುತ್ತಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ. ಬ್ರಶ್ ಮಾಡುವ ವಿಧಾನ ತಪ್ಪಾಗಿದ್ದರೆ ಲಂಗ್ಸ್ ಇನ್ಫೆಕ್ಷನ್ ಕೂಡ ಆಗಬಹುದು. ಪ್ರತಿವರ್ಷವೂ ಲಕ್ಷಾಂತರ ಜನರು ಲಂಗ್ಸ್ ಇನ್ಫೆಕ್ಷನ್ ತೊಂದರೆಯಿಂದ ಬಳಲುತ್ತಾರೆ ಎನ್ನುತ್ತಾರೆ ವೈದ್ಯರು.  

ದಿನಾ ಮೊಟ್ಟೆ ಸೇವಿಸಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚುತ್ತಾ?

ಎಷ್ಟು ಬಾರಿ ಬ್ರಶ್ ಮಾಡಬೇಕು? : ದಿನದಲ್ಲಿ 3 ಬಾರಿಯಾದರೂ ಬ್ರಶ್ ಮಾಡಬೇಕು. ಹೀಗೆ ಮಾಡುವುದರಿಂದ ನಾವು ಅನೇಕ ರೋಗಗಳಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಬಹಳ ಮಂದಿ ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ಹಲ್ಲುಜ್ಜುತ್ತಾರೆ. ಇನ್ನು ಕೆಲವು ಮಂದಿಗೆ ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವ ಅಭ್ಯಾಸವಿರುತ್ತದೆ.  ಬೆಳಿಗ್ಗೆ ಬ್ರೆಶ್ ಮಾಡದೆ ಹೋದ್ರೂ ಪರವಾಗಿಲ್ಲ ರಾತ್ರಿ ಅಗತ್ಯವಾಗಿ ಬ್ರೆಶ್ ಮಾಡಿ ಎನ್ನತ್ತಾರೆ ವೈದ್ಯರು.

ಹಲ್ಲಿನಲ್ಲಿ ಸಿಕ್ಕಿ ಬೀಳುವ ಆಹಾರದಿಂದ ಲಂಗ್ಸ್ ಗೆ ತೊಂದರೆ : ನಾವು ದಿನದಲ್ಲಿ ಅನೇಕ ಬಾರಿ ಅನೇಕ ರೀತಿಯ ಆಹಾರ ಸೇವಿಸುತ್ತೇವೆ. ಹೀಗೆ ನಾವು ಸೇವಿಸಿದ ಆಹಾರಗಳ ಸಣ್ಣ ಸಣ್ಣ ತುಣುಕುಗಳು ಹಲ್ಲಿನಲ್ಲಿ ಸಿಕ್ಕಿಬೀಳುವುದು ಸಹಜ. ಹೀಗೆ ಸಿಕ್ಕಬಿದ್ದ ಆಹಾರಗಳ ಮೂಲಕ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಯಾವಾಗ ಅವು ನಮ್ಮ ಶ್ವಾಸಕೋಶವನ್ನು ಹಾಳುಮಾಡುತ್ತವೆ ಎಂಬುದು ತಿಳಿಯುವುದೇ ಇಲ್ಲ. ಇಂತಹ ಬ್ಯಾಕ್ಟೀರಿಯಾಗಳು ಎಸಿಡ್ ಉತ್ಪತ್ತಿ ಮಾಡಿ ಕ್ಯಾವಿಟಿಯನ್ನು ಕೂಡ ಉಂಟುಮಾಡುತ್ತವೆ.

Diet Tips: ತೂಕ ಇಳಿಸೋಕೆ ಮೆಂತ್ಯ – ಪಾಲಕ್ ನಲ್ಲಿ ಯಾವುದು ಬೆಸ್ಟ್?

ಪ್ರತಿ ಬಾರಿ ಆಹಾರ ಸೇವನೆ ಮಾಡಿದ ನಂತ್ರ ಬಾಯಿ ಮುಕ್ಕಳಿಸುವ ಅಭ್ಯಾಸ ಮಾಡಿಕೊಳ್ಳಬೇಕು. ನೀರಿನಿಂದ ಬಾಯಿ ಮುಕ್ಕಳಿಸಿದ್ರೆ ಹಲ್ಲಿನಲ್ಲಿ ಸಿಕ್ಕಿಬಿದ್ದ ಆಹಾರ ಹೊರಗೆ ಬರುತ್ತದೆ. 
ಬಾಯಿಯ ಸ್ವಚ್ಛತೆಯ ಜೊತೆಗೆ ನಾವು ಇನ್ನೂ ಕೆಲವು ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು. ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಧೂಮಪಾನದಿಂದ ದೂರವಿರಬೇಕು.  ಸಿಗರೇಟ್ ನಿಂದ ಬರುವ ಹೊಗೆಯಿಂದ ಶ್ವಾಸಕೋಶಕ್ಕೆ ಬಲವಾದ ತೊಂದರೆಯಾಗಬಹುದು. ಪ್ರತಿನಿತ್ಯ ನಾವು ಕಚೇರಿಗಳಿಗೋ ಅಥವಾ ಇನ್ಯಾವುದೋ ಕೆಲಸದ ಸಲುವಾಗಿ ಹೊರಗಡೆ ಹೋಗಲೇಬೇಕಾಗುತ್ತದೆ. ಈಗ ಎಲ್ಲ ಕಡೆಗಳಲ್ಲೂ ವಾಹನ, ಕಾರ್ಖಾನೆಗಳ ಕಲುಷಿತ ಹೊಗೆಯೇ ತುಂಬಿರುವುದರಿಂದ ನಾವು ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ ಹೋಗುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಖಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ಕಲುಷಿತ ಗಾಳಿ ಮೂಗು ಮತ್ತು ಬಾಯಿಯ ಒಳಗೆ ಹೋಗುವುದನ್ನು ತಪ್ಪಿಸಬಹುದು.

Latest Videos
Follow Us:
Download App:
  • android
  • ios