Asianet Suvarna News Asianet Suvarna News

ಎರಡೇ ವರ್ಷದಲ್ಲಿ 71 ಕೆಜಿ ತೂಕ ಇಳಿಸಿದ ಸಿಇಒ, ಹೊಟ್ಟೆಗೆ ತಿಂದಿದ್ದೇನು?

ತೂಕ ಹೆಚ್ಚಳದಿಂದ ನಾನಾ ಆರೋಗ್ಯ ಸಮಸ್ಯೆ ಕಾಡುತ್ತದೆ. ಓವರ್ ವೇಟ್ ನಿಂದಾಗಿ ಹೌಸಿಂಗ್ ಡಾಟ್ ಕಾಮ್ ಸಿಇಓ ಸಾಕಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೊನೆಗೂ ತಮ್ಮ ತೂಕ ಇಳಿಕೆ ನಿರ್ಧಾರ ಕೈಗೊಂಡ ಅವರು ಎರಡೇ ವರ್ಷದಲ್ಲಿ ಯಶಸ್ವಿಯಾಗಿದ್ದಾರೆ. 
 

Housing Com CEO Dhruv Agarwala Weight Loss Journey Is Inspiring roo
Author
First Published Mar 27, 2024, 12:30 PM IST

ತೂಕ ಇಳಿಸಿಕೊಳ್ಳೋದು ಈಗಿನ ದಿನಗಳಲ್ಲಿ ಸವಾಲಿನ ಕೆಲಸ. ಜಡ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಜನರು ಒಂದೇ ಸಮನೆ ತೂಕ ಏರಿಸಿಕೊಳ್ತಾರೆ. ಆದ್ರೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ನಿತ್ಯ ವ್ಯಾಯಾಮ ಮಾಡಿದ್ರೂ ಅನೇಕರು ಕೆಜಿ ಇಳಿಸಿಕೊಳ್ಳಲು ಹರಸಾಹಸ ಮಾಡ್ತಾರೆ. ಈ ಬೊಜ್ಜು ಬರೀ ತೂಕ ಹೆಚ್ಚಳ ಮಾಡೋದು ಮಾತ್ರವಲ್ಲ ನಾನಾ ರೋಗಕ್ಕೆ ದಾರಿಯಾಗುತ್ತದೆ. ಮಧುಮೇಹ, ರಕ್ತದೊತ್ತಡ, ಹೃದಯಾಘಾತದಂತಹ ರೋಗದ ಅಪಾಯ ಹೆಚ್ಚು. ವಿಪರೀತ ತೂಕ ಏರಿಕೆ ನಂತ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಹೌಸಿಂಗ್ ಡಾಟ್ ಕಾಮ್ ಸಿಇಒ ಧ್ರುವ ಅಗರ್ವಾಲ್ ತೂಕ ಇಳಿಸಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದಲ್ಲಿ 71 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೌಸಿಂಗ್.ಕಾಮ್ ಸಿಇಒ ಧ್ರುವ ಅಗರ್ವಾಲ್ (Dhruva Agarwal), ಪ್ರಾಪ್‌ಟೈಗರ್.ಕಾಮ್ ಮತ್ತು ಮಕಾನ್.ಕಾಮ್ ಗ್ರೂಪ್ ಸಿಇಒ ಕೂಡ ಹೌದು. ಧ್ರವ ಅಗರ್ವಾಲ್ ಆಗ 152 ಕೆಜಿ ತೂಕ ಹೊಂದಿದ್ದರು. ಸಿಂಗಾಪುರ (Singapore) ಮೂಲದ ಉದ್ಯಮಿ ಧ್ರವ ಅಗರ್ವಾಲ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಎದೆಯುರಿ ಕಾಣಿಸಿಕೊಂಡಿತ್ತು. 2021ರಲ್ಲಿ ಅವರು ಆಸ್ಪತ್ರೆ (Hospital) ತುರ್ತುನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುವಂತಾಯ್ತು. ಈ ಸಮಯದಲ್ಲಿ ಧ್ರವ ಅಗರ್ವಾಲ್ ತೂಕ ಇಳಿಸಿಕೊಳ್ಳುವ ತೀರ್ಮಾನ ಕೈಗೊಂಡು, ಎರಡು ವರ್ಷದ ಪ್ರಯತ್ನದ ನಂತ್ರ ತೂಕವನ್ನು 81 ಕೆಜಿಗೆ ತಂದು ನಿಲ್ಲಿಸಿದ್ರು. 

ಗರ್ಭ ಧರಿಸೋದಕ್ಕೆ ಸಮಸ್ಯೆ ಆಗ್ತಿದ್ಯಾ? ನಿಮ್ಮ ಆಹಾರದಲ್ಲಿ ಏಲಕ್ಕಿ, ತುಪ್ಪ, ದಾಳಿಂಬೆ ಇರಲಿ!

ಧ್ರವ ಅಗರ್ವಾಲ್ ಆಸ್ಪತ್ರೆ ಸೇರುವ ಮುನ್ನ ಅವರ ತೂಕ ಅತಿ ಹೆಚ್ಚಿತ್ತು. ಮೊದಲೇ ಹೇಳಿದಂತೆ ಆಗ ಅಗರ್ವಾಲ್ 151.7 ಕೆ.ಜಿ ತೂಕ ಹೊಂದಿದ್ದರು. ಪೂರ್ವ ಮಧುಮೇಹ, ನಿದ್ರೆಯಲ್ಲಿ ಉಸಿರುಗಟ್ಟಿಸುವ ತೊಂದರೆ, ಅಧಿಕ ಕೊಲೆಸ್ಟ್ರಾಲ್ (Excess Cholesterol) ಮತ್ತು ರಕ್ತದೊತ್ತಡದ ಔಷಧಿಗಳನ್ನು ಧ್ರವ ಅಗರ್ವಾಲ್ ಸೇವನೆ ಮಾಡುತ್ತಿದ್ದರು. 

ಒಂದು ದಿನ ನಾನು ತೂಕವನ್ನು ಕಳೆದುಕೊಳ್ಳುತ್ತೇನೆ, ಒಂದು ದಿನ ನಾನು ಫಿಟ್ ಆಗುತ್ತೇನೆ ಎಂದು ನಾನು ಸದಾ ಆಲೋಚನೆ ಮಾಡುತ್ತಿದ್ದೆ. ಆದ್ರೆ ಅದು ಆಗಿರಲಿಲ್ಲ. ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಮಲಗಿದ್ದಾಗ ಇನ್ನೇನು ನನ್ನ ಪ್ರಾಣ ಹೋಯ್ತು ಎಂದುಕೊಂಡಿದ್ದೆ. ಹೃದಯ ವೇಗವಾಗಿ ಬಡಿಯುತ್ತಿತ್ತು, ನನ್ನ ಹೃದಯ ಬಡಿತ ಹೆಚ್ಚಾಯಿತು. ಆಗ್ಲೇ ನನ್ನ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ನಿರ್ಧರಿಸಿದೆ ಎಂದು ಧ್ರವ ಅಗರ್ವಾಲ್ ಹೇಳಿದ್ದಾರೆ. 

ಧ್ರವ ಅಗರ್ವಾಲ್ ಎರಡು ವರ್ಷದಲ್ಲಿ ತೂಕ ಇಳಿಸಿಕೊಂಡಿದ್ದು ಹೇಗೆ? : ಆಸ್ಪತ್ರೆಯಿಂದ ಹೊರಗೆ ಬಂದ ನಂತ್ರ ಧ್ರವ ಅಗರ್ವಾಲ್, ಸಿಂಗಾಪುರದಲ್ಲಿ ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಂಡ್ರು. ಅಗರ್ವಾಲಾ ವಾರಕ್ಕೆ ಮೂರು ಬಾರಿ ಶಕ್ತಿ ತರಬೇತಿ ಸೆಷನ್ ತೆಗೆದುಕೊಂಡರು. ಅವರು ದಿನಕ್ಕೆ 10,000 ರಿಂದ 12,000 ಸ್ಟೆಪ್ಸ್ ಪೂರ್ಣಗೊಳಿಸುತ್ತಿದ್ದರು.

ಗುದದ ಮೂಲಕ ಹೊಟ್ಟೆಗ್ಹೋದ ಹಾವು, ಜೀವಂತವಾಗಿ ಹೊರ ತೆಗೆದ ಡಾಕ್ಟರ್ಸ್ !

ಧ್ರವ ಅಗರ್ವಾಲ್ ಅವರಿಗೆ ಅಹ್ಮದ್ ಝಾಕಿ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ರು. ಅವರು ಟೆನಿಸ್ ದಂತಕಥೆ ರೋಜರ್ ಫೆಡರರ್ ಕಥೆ ಹೇಳುವ ಮೂಲಕ ಧ್ರವ ಅಗರ್ವಾಲ್ ಅವರನ್ನು ತೂಕ ಇಳಿಸಿಕೊಳ್ಳಲು ಪ್ರೋತ್ಸಾಹಿಸಿದ್ರು. ಧ್ರವ ಅಗರ್ವಾಲ್ ತಮ್ಮ ಆಹಾರ ಸೇವನೆಯಲ್ಲಿ ಕ್ಯಾಲೋರಿ ಕಡಿಮೆ ಮಾಡಿದ್ರು. ದೈನಂದಿನ ಕ್ಯಾಲೋರಿಯನ್ನು ಅವರು  1,700 ಕ್ಯಾಲೋರಿಗೆ ಕಡಿಮೆ ಮಾಡಿದ್ರು. ಸಮೋಸಾ, ದೋಸೆ ಮತ್ತು ಪನೀರ್ ಟೋಸ್ಟ್‌ಗಳಂತಹ ಹೆಚ್ಚಿನ ಕಾರ್ಬ್ ಆಹಾರಗಳನ್ನು ತಿನ್ನಲು ಒಗ್ಗಿಕೊಂಡಿರುವ ಅವರು ಆಲ್ಕೋಹಾಲ್ (Alchohol), ಸಂಸ್ಕರಿಸಿದ ಮತ್ತು ಕರಿದ ಆಹಾರಗಳನ್ನು (Processed and Fried Foods) ಸಂಪೂರ್ಣವಾಗಿ ತ್ಯಜಿಸಿದರು ಮತ್ತು ಪ್ರತಿ ಊಟದಲ್ಲಿ ಪ್ರೋಟೀನ್ (Protein) ತಿನ್ನುವುದನ್ನು ಖಚಿತಪಡಿಸಿಕೊಂಡರು. ಮಾದಕವಸ್ತು ಸೇವನೆಯ ನಿಯಂತ್ರಣವನ್ನೂ ಅವರು ಅಭ್ಯಾಸ ಮಾಡಿದರು.ಹಸಿವನ್ನು ನಿಯಂತ್ರಿಸಲು ಧ್ರವ ಅಗರ್ವಾಲ್, ಡ್ರೈ ಫ್ರೂಟ್ಸ್ (Dry Fruits), ಕ್ಯಾರೆಟ್, ಸೌತೆಕಾಯಿ (Cucumber) ಮತ್ತು ಮೊಸರು (Curds) ಮುಂತಾದ ಆರೋಗ್ಯಕರ ಆಹಾರವನ್ನು ಸೇವಿಸಿದ್ರು. 
 

Follow Us:
Download App:
  • android
  • ios