Health Tips: ಋತು ಬದಲಾಗ್ತಿದ್ದಂತೆ ಅಚಾನಕ್ ಕಿರಿಕಿರಿ ಶುರುವಾದ್ರೆ ಈ ಕಾಯಿಲೆ ಕಾಡ್ಬೋದು ಹುಷಾರ್‌!

ಜ್ವರ, ನೆಗಡಿ ಶುರುವಾದಾಗ ನಾವು, ಚಳಿಗಾಲ ಕಳೆದು ಬೇಸಿಗೆ ಬರ್ತಿದೆ. ಹಾಗಾಗಿ ಈಗ ಇಂಥ ಅನಾರೋಗ್ಯ ಕಾಮನ್ ಎನ್ನುತ್ತೇವೆ. ಆದ್ರೆ ಋತು ಬದಲಾದಂತೆ ನಿಮ್ಮ ಮೂಡ್ ಕೂಡ ಬದಲಾಗುತ್ತೆ. ನಿಮಗೂ ಮನಸ್ಥಿತಿ ಬದಲಾಗ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ.
 

Health Tips Know What Is Seasonal Affective Disorder

ಹವಾಮಾನದಲ್ಲಿ ಆಗುವ ಏರುಪೇರು ಮನುಷ್ಯನ ಜೀವನದ ಮೇಲೆ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಋತುವಿಗೆ ಅನುಗುಣವಾಗಿ ನಮ್ಮ ಬೇಕು ಬೇಡಗಳು ಕೂಡ ಬದಲಾಗುತ್ತವೆ. ಮಳೆಗಾಲದಲ್ಲಿ ಬಿಸಿ ಬಿಸಿಯಾದ ರುಚಿಯಾದ ಆಹಾರವನ್ನು ಸೇವಿಸಬೇಕು ಎನಿಸುತ್ತದೆ. ಚಳಿಗಾಲದಲ್ಲಿಯೂ ಹೀಗೆ ಬಿಸಿಯಾದ ಆಹಾರವೇ ಬೇಕು ಎನಿಸುತ್ತದೆ. ಅದೇ ಬೇಸಿಗೆಯಲ್ಲಿ ಸೆಕೆಯ ಕಾರಣದಿಂದ ತಣ್ಣನೆಯ ಪಾನೀಯಗಳ ಮೊರೆಹೋಗುತ್ತೇವೆ. ನಮ್ಮ ಶರೀರ ಕೂಡ ಒಂದೊಂದು ಸೀಸನ್ ನಲ್ಲಿ ಒಂದೊಂದು ರೀತಿ ಬದಲಾಗುತ್ತದೆ, ಕೆಲವೊಮ್ಮೆ ಹವಾಮಾನ ಬದಲಾವಣೆಯಿಂದ ಕಿರಿಕಿರಿಗೂ ಒಳಗಾಗುತ್ತೇವೆ. ಮಳೆಗಾಲದಲ್ಲಿ ಬಟ್ಟೆಯೆಲ್ಲ ಒದ್ದೆಯಾಗುವ ಕಾರಣಕ್ಕೆ ಅನ್ ಕಂಫರ್ಟೆಬಲ್ ಅನಿಸಬಹುದು. ಸೆಕೆಯಲ್ಲಿ ಬೆವರು, ಸುಸ್ತಿನ ಕಾರಣ ಮೂಡ್ ಔಟ್ ಆಗುತ್ತದೆ. ಇನ್ನು ಚಳಿಗಾಲದಲ್ಲಿ ಚರ್ಮದ ತೊಂದರೆಗಳಿಗೆ ಒಳಗಾಗುತ್ತೇವೆ.

ಸೀಸನ್ (Season) ಗೆ ತಕ್ಕಂತೆ ನಮ್ಮ ಮೂಡ್ (Mood) ಕೂಡ ಬದಲಾಗುತ್ತೆ. ಈಗಂತೂ ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಈಗ ತಿನ್ನುವ ಮೂಡಿಲ್ಲ ಆಮೇಲೆ ತಿಂತೀನಿ, ಇವತ್ತು ಪೇಟೆಗೆ ಹೋಗುವ ಮನಸ್ಸಿಲ್ಲ, ಇಂದು ಸಿನೆಮಾ ನೋಡುವ ಮನಸ್ಸಿಲ್ಲ…ಹೀಗೆ ಹತ್ತು ಹಲವು ಕಾರಣಗಳನ್ನು ಹೇಳುತ್ತಾರೆ. ಎಲ್ಲ ಕೆಲವೂ ಮೂಡ್ ಮೇಲೇ ಡಿಪೆಂಡ್ ಆಗಿರುತ್ತೆ. ಮಕ್ಕಳು, ಯುವಕರು ಸೇರಿದಂತೆ ಎಲ್ಲರೂ ಸಣ್ಣ ಸಣ್ಣ ವಿಷಯಕ್ಕೂ ಕಿರಿಕಿರಿಗೆ ಒಳಗಾಗುವುದು, ವಿಪರೀತ ಕೋಪ (Anger) ಗೊಳ್ಳುವುದು, ಬೇಸರದಿಂದ ಇಡೀ ದಿನ ನಿದ್ದೆ ಮಾಡುವುದು, ಏಕಾಂಗಿಯಾಗಿರುವುದು ಮುಂತಾದವು ನಿತ್ಯವೂ ನಡೆಯುತ್ತದೆ. ಆದರೆ ಈ ತರಹದ ಖಿನ್ನತೆ (Depression) ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದರೆ, ಹವಾಮಾನ ಬದಲಾದಂತೆ ವ್ಯಕ್ತಿಯ ಮನಸ್ಥಿತಿಯಲ್ಲೂ ಬದಲಾವಣೆ ಕಂಡರೆ ಅದನ್ನು ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ ಎಂದು ಕರೆಯುತ್ತಾರೆ.

ಹೆಚ್ತಿದೆ ಸಡನ್‌ ಹಾರ್ಟ್‌ಅಟ್ಯಾಕ್ ಕೇಸ್‌, ದಿನಕ್ಕೆ 11 ನಿಮಿಷ ವಾಕ್‌ ಮಾಡಿ ಜೀವ ಉಳಿಸಿಕೊಳ್ಬೋದಾ?

ಏನೋ ಮೂಡ್ ಬದಲಾಗುತ್ತೆ ಅಷ್ಟೇ ಎಂದು ಅಲ್ಲಗೆಳೆಯಬೇಡಿ. ಏಕೆಂದರೆ ಇದೇ ಮುಂದೆ ನಿಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೊದಮೊದಲು ಸಾಮಾನ್ಯವೆನಿಸುವ ಇಂತಹ ಮನಸ್ಥಿತಿಗಳು ಋತುಗಳು ಬದಲಾದಂತೆ ಅಸ್ವಸ್ಥತೆಯೂ ಭಿನ್ನವಾಗಿರುತ್ತೆ. ಹಾಗಾಗಿ ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ ಅನ್ನು ನಿರ್ಲಕ್ಷಿಸುವಂತಿಲ್ಲ.

ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ (SAD)ನ ಲಕ್ಷಣಗಳಿವು : ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ ಸಾಮಾನ್ಯವಾಗಿ ಚಳಿಗಾಲದ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಕಂಡುಬರುತ್ತದೆ. ಹಾಗಾಗಿ ಇದನ್ನು ವಿಂಟರ್ ಬ್ಲೂಸ್ ಎಂದು ಕೂಡ ಕರೆಯುತ್ತಾರೆ. ಚಳಿಗಾಲ ಮುಗಿದು ಬೇಸಿಗೆ ಕಾಲ ಇನ್ನೇನು ಆರಂಭವಾಗುತ್ತೆ ಎನ್ನುವ ಹೊತ್ತಿಗೆ ಈ ರೋಗ ಲಕ್ಷಣಗಳು ಕಡಿಮೆಯಾಗುತ್ತ ಬರುತ್ತದೆ. ಕೆಲವೊಬ್ಬರಿಗೆ ರೋಗ ಲಕ್ಷಣವೇ ಸಂಪೂರ್ಣವಾಗಿ ವಿರುದ್ಧವಾಗಬಹುದು. ಇನ್ನು ಕೆಲವು ಮಂದಿಗೆ ಬೇಸಿಗೆಯ ಪ್ರಾರಂಭದಲ್ಲಿ ಅಸ್ವಸ್ಥತೆ ಕಾಡುತ್ತದೆ. ಬೇಸಿಗೆಯ ದಿನಗಳ ಈ ಅಸ್ವಸ್ಥತೆ ಬಿಸಿಲು, ತಾಪಮಾನ ಹೆಚ್ಚಿದಂತೆ ಉಲ್ಬಣವಾಗುತ್ತೆ.

ಚಳಿಗಾಲದಲ್ಲಿ SAD ನ ಲಕ್ಷಣಗಳು : 
• ಹೆಚ್ಚು ನಿದ್ದೆ ಬರುವುದು
• ಹಸಿವಿನ ವಿಧಾನಗಳಲ್ಲಿ ಬದಲಾವಣೆ. ವಿಶೇಷವಾಗಿ ಹೆಚ್ಚು ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ತಿನ್ನಲು ಬಯಸುವುದು
• ತೂಕ ಹೆಚ್ಚುವುದು
• ಆಯಾಸ ಅಥವಾ ಶಕ್ತಿ ಕಡಿಮೆಯಾದ ಅನುಭವವಾಗುವುದು

Mental Health: ಹಿಂದಿನ ಘಟನೆಗಳ ನೆನಪಿಂದ ಹೊರಬರೋಕೆ ಆಗಲ್ವಾ?

ಬೇಸಿಗೆಯಲ್ಲಿ SAD ನ ಲಕ್ಷಣಗಳು : 
• ನಿದ್ರೆ ಬರಲು ಒದ್ದಾಟ
• ಹಸಿವಾಗದೇ ಇರುವುದು
• ತೂಕದಲ್ಲಿ ಶೀಘ್ರ ಇಳಿಕೆಯಾಗುವುದು
• ಆತಂಕ ಅಥವಾ ಹೆಚ್ಚು ಕಿರಿಕಿರಿಯಾಗುವುದು
• ದುಃಖ ಅಥವಾ ಖಿನ್ನತೆಯ ಭಾವನೆ
• ಮೆಚ್ಚಿನ ಕೆಲಸಗಳನ್ನು ಮಾಡುವಲ್ಲಿ ಆಸಕ್ತಿ ಇಲ್ಲದೇ ಇರುವುದು
• ದಣಿವಾಗುವುದು
• ಏಕಾಗ್ರತೆಯ ಕೊರತೆ
• ಬದುಕುವ ಇಚ್ಛೆ ಕಡಿಮೆಯಾಗುವುದು

ಯಾವ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿಯಾಗಬೇಕು? : ಸಾಮಾನ್ಯವಾಗಿ ಎಲ್ಲರೂ ಒಮ್ಮೊಮ್ಮೆ ಕಿರಿಕಿರಿಗೆ ಒಳಗಾಗುವುದು ಆಯಾಸಪಟ್ಟುಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಹಲವು ದಿನಗಳವರೆಗೂ ಈ ಇದೇ ಪರಿಸ್ಥಿತಿ ಮುಂದುವರೆದರೆ ಖಂಡಿತವಾಗಿಯೂ ನೀವು ವೈದ್ಯರ ಬಳಿ ಹೋಗಲೇಬೇಕು. ಏಕೆಂದರೆ ಇದು ಮಿತಿ ಮೀರಿದರೆ ಮಾರಣಾಂತಿಕವೂ ಆಗಬಹುದು.

Latest Videos
Follow Us:
Download App:
  • android
  • ios