Kidney Transplant : ಇದೇ ಮೊದಲ ಬಾರಿ ಮನುಷ್ಯನಿಗೆ ಕಸಿಯಾಯ್ತು ಹಂದಿ ಕಿಡ್ನಿ
ಮೂತ್ರಪಿಂಡ ರೋಗಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಕಿಡ್ನಿ ಸಮಸ್ಯೆಯಿಂದ ಬಳಲುವ ಕೆಲ ರೋಗಿಗಳಿಗೆ ಕಿಡ್ನಿ ಕಸಿಯೊಂದೇ ಅಂತಿಮ ಭರವಸೆ. ಆದ್ರೆ ಕಸಿಗೆ ಕಿಡ್ನಿ ದಾನಿಗಳ ಅಗತ್ಯವಿರುತ್ತದೆ. ಕಸಿಗೆ ಕಿಡ್ನಿ ಸಿಗ್ತಿಲ್ಲ ಎನ್ನುವ ರೋಗಿಗಳಿಗೆ ಅಮೆರಿಕಾ ವೈದ್ಯರ ತಂಡ ನೆಮ್ಮದಿ ಸುದ್ದಿ ನೀಡಿದೆ.
ವೈದ್ಯಕೀಯ ಲೋಕದಲ್ಲಿ ಪ್ರತಿ ದಿನ ಸಾಕಷ್ಟು ಬದಲಾವಣೆ ಆಗ್ತಿದೆ. ರೋಗಗಳ ಪತ್ತೆಗೆ ಹೊಸ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಲಾಗ್ತಿದೆ. ರೋಗಕ್ಕೆ ಮಾತ್ರೆ, ಔಷಧಿ ಸೇರಿದಂತೆ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. ಮೂತ್ರಪಿಂಡ, ಹೃದಯ, ಲಿವರ್ ಸೇರಿದಂತೆ ದೇಹದ ಅನೇಕ ಅಂಗಗಳನ್ನು ಕಸಿ ಮಾಡಲಾಗುತ್ತದೆ. ಒಬ್ಬ ಸಾವನ್ನಪ್ಪಿದ ವ್ಯಕ್ತಿಯ ದೇಹದ ಅಂಗಾಗಳನ್ನು ಅಗತ್ಯವಿರುವವರಿಗೆ ಕಸಿ ಮಾಡಿ ಐದಾರು ಜನರಿಗೆ ಜೀವದಾನ ಮಾಡಲಾಗುತ್ತದೆ. ಕೆಲ ಸಂದರ್ಭದಲ್ಲಿ ಎರಡು ಆರೋಗ್ಯಕರ ಕಿಡ್ನಿ ಹೊಂದಿರುವ ಜನರು ಒಂದನ್ನು ತಮ್ಮ ಆಪ್ತರಿಗೆ ದಾನ ನೀಡುತ್ತಾರೆ. ಮನುಷ್ಯರಿಗೆ ಮನುಷ್ಯರ ಕಿಡ್ನಿ, ಹೃದಯ ಕಸಿ ಮಾಡೋದನ್ನು ನಾವು ನೋಡಿದ್ದೇವೆ. ಆದ್ರೆ ಈಗ ಅಮೆರಿಕಾ ವೈದ್ಯರು ಮತ್ತೊಂದು ಅದ್ಭುತ ಮಾಡಿದ್ದಾರೆ.
ಹಂದಿ (Pig)ಮೂತ್ರಪಿಂಡ (Kidney) ಮಾನವನಿಗೆ ಕಸಿ (Transplant) : ಮೂತ್ರಪಿಂಡಗಳು ನಮ್ಮ ದೇಹದ ನೀರು ಮತ್ತು ಖನಿಜ ಮಟ್ಟವನ್ನು ಸಮತೋಲನಗೊಳಿಸುತ್ತದೆ. ನಮ್ಮ ರಕ್ತದಿಂದ ತ್ಯಾಜ್ಯವನ್ನು ಫಿಲ್ಟರ್ ಮಾಡುತ್ತದೆ. ಕಿಡ್ನಿ ನಮ್ಮ ದೇಹದ ಮುಖ್ಯ ಭಾಗಗಳಲ್ಲಿ ಒಂದು. ಅದು ಕೆಲಸ ನಿಲ್ಲಿಸಿದ್ರೆ ರೋಗಿಯ ಸ್ಥಿತಿ ಚಿಂತಾಜನಕವಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಕಿಡ್ನಿ ರೋಗಿಗಳ ಸಂಖ್ಯೆ ಸಾಕಷ್ಟಿದ್ದು, ಅನೇಕರಿಗೆ ಕಿಡ್ನಿ ಡಯಾಲಿಸ್ ಮಾಡಿಸೋದೆ ದುಬಾರಿಯಾಗಿದೆ. ಇನ್ನು ಕಿಡ್ನಿ ಕಸಿ ದೂರದ ಮಾತು. ಕಿಡ್ನಿ ಕಸಿ ಮಾಡಿಸಲು ದಾನಿಗಳನ್ನು ಹುಡುಕುವುದು ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಅಮೆರಿಕಾ ವಿಜ್ಞಾನಿಗಳು ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಮನುಷ್ಯನಿಗೆ ಮನುಷ್ಯರ ಬದಲು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿದ ಘಟನೆ ನಡೆದಿದೆ. ಹಂದಿ ಕಿಡ್ನಿಯನ್ನು ಕಸಿ ಮಾಡಿದ ಅಮೆರಿಕದ ವೈದ್ಯರು ವಿಶ್ವದಲ್ಲೇ ಮೊದಲ ಬಾರಿಗೆ ಇಂಥ ಸಾಧನೆ ಮಾಡಿದ್ದಾರೆ. ಈ ಮೂತ್ರಪಿಂಡವನ್ನು ಕಸಿ ಮಾಡುವ ಮೊದಲು, ಅಮೆರಿಕದ ಶಸ್ತ್ರಚಿಕಿತ್ಸಕರು ಇದನ್ನು ತಳೀಯವಾಗಿ ಸಂಪಾದಿಸಿದ್ದರು. ಇದಾದ ನಂತರ ಹಂದಿಯ ಮೂತ್ರಪಿಂಡವನ್ನು ಯಶಸ್ವಿಯಾಗಿ 62 ವರ್ಷದ ರೋಗಿಗೆ ಕಸಿ ಮಾಡಿದ್ದಾರೆ.
ತಾಯಿಗಾಗಿ 2 ಕೋಟಿ ರೂ.ಗೆ ಕಿಡ್ನಿ ಮಾರಾಟಕ್ಕೆ ಮುಂದಾಗಿ, 6 ಲಕ್ಷ ರೂ. ಕಳೆದುಕೊಂಡ ಚಾರ್ಟೆಡ್ ಅಕೌಂಟೆಂಟ್!
ಯುನೈಟೆಡ್ ಸ್ಟೇಟ್ಸ್‌ನ ಬೋಸ್ಟನ್‌ನಲ್ಲಿರುವ ಶಸ್ತ್ರಚಿಕಿತ್ಸಕರ ದೊಡ್ಡ ತಂಡವು ರೋಗಿಗೆ ಹಂದಿಯ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡುವುದಾಗಿ ಘೋಷಿಸಿದೆ. ವೈದ್ಯಕೀಯ ಲೋಕದಲ್ಲಿ ಇದೊಂದು ದೊಡ್ಡ ಕ್ರಾಂತಿ ಎಂದು ನಂಬಲಾಗಿದೆ.
ವಿಶ್ವದ ಮೊದಲ ತಳೀಯವಾಗಿ ವಿನ್ಯಾಸಗೊಳಿಸಲಾದ ಹಂದಿ ಮೂತ್ರಪಿಂಡವನ್ನು ರೋಗಿಗೆ ಕಸಿ ಮಾಡುವ ಮೊದಲು ಅಮೇರಿಕನ್ ವೈದ್ಯರು ದೀರ್ಘಕಾಲದವರೆಗೆ ತೀವ್ರ ಸಂಶೋಧನೆ ನಡೆಸಿದರು. ಇದಾದ ನಂತರ ವೈದ್ಯರು ಕಸಿ ಮಾಡಿದ್ದಾರೆ. ಇದು ವಿಶ್ವದ ಮೊದಲ ತಳೀಯವಾಗಿ ವಿನ್ಯಾಸಗೊಳಿಸಲಾದ ಹಂದಿ ಮೂತ್ರಪಿಂಡ ಎಂದು ಅಮೆರಿಕದ ವೈದ್ಯರು ಹೇಳಿದ್ದಾರೆ.
ಬೋಸ್ಟನ್ ವೈದ್ಯರು ಮಸಾಚುಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಕೊನೆಯ ಹಂತದಲ್ಲಿದ್ದ ಮೂತ್ರಪಿಂಡ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆದಿದೆ. ಕೊನೆಗೂ ಮೂತ್ರಪಿಂಡದ ಕಸಿ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ಮೊದಲ ಪ್ರಯೋಗವಲ್ಲ. ಈ ಹಿಂದೆಯೂ ಇಂಥ ಪ್ರಯೋಗ ನಡೆದಿದೆ. ಈ ಹಿಂದೆ ಹಂದಿಯ ಮೂತ್ರಪಿಂಡಗಳನ್ನು ತಾತ್ಕಾಲಿಕವಾಗಿ ಮೆದುಳು ಸತ್ತ ದಾನಿಗಳಿಗೆ ಕಸಿ ಮಾಡಲಾಗಿತ್ತು.
Kidney Health Safety Tips: ಒಂದೇ ಒಂದು ಕಿಡ್ನಿ ಇರೋರು ಎಷ್ಟು ಸುರಕ್ಷಿತ?
ಹಂದಿಯ ಮೂತ್ರಪಿಂಡ ಮಾತ್ರವಲ್ಲ ಹಂದಿಯ ಹೃದಯ ಕಸಿ ಕೂಡ ನಡೆದಿತ್ತು. ಆದ್ರೆ ಹೃದಯ ಕಸಿ ಮಾಡಿದ ಕೆಲವೇ ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ವೈದ್ಯರು ಇದಕ್ಕೆ ಅಂತ್ಯ ಹಾಡಿದ್ದರು. ಮತ್ತ್ಯಾರಿಗೂ ಹೃದಯ ಕಸಿ ಮಾಡುವ ಪ್ರಯತ್ನ ಮಾಡಿಲ್ಲ. ಈಗ ಅಮೆರಿಕದ ವೈದ್ಯರ ತಂಡ ಹೊಸ ಪವಾಡ ಮಾಡಿದೆ. ಈಗ ವೈದ್ಯರು ಈ ರೋಗಿಯನ್ನು ಹಲವು ವರ್ಷಗಳವರೆಗೆ ಮೇಲ್ವಿಚಾರಣೆ ಮಾಡಲಿದ್ದಾರೆ. ಒಂದ್ವೇಳೆ ಹಂದಿ ಮೂತ್ರಪಿಂಡದ ಕಸಿ ಯಶಸ್ವಿಯಾದ್ರೆ ಲಕ್ಷಾಂತರ ಮಂದಿಗೆ ಇದ್ರಿಂದ ಪ್ರಯೋಜನವಾಗಲಿದೆ.