ಸೂರ್ಯಕುಮಾರ್ ಯಾದವ್‌ಗೆ ಕಾಡ್ತಿರೋ ಸ್ಫೋರ್ಟ್ಸ್ ಹರ್ನಿಯಾ ಎಂದ್ರೇನು?
ಟೀಂ ಇಂಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್ ಸ್ಫೋರ್ಟ್ಸ್ ಹರ್ನಿಯಾಕ್ಕೆ ಒಳಗಾಗಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಅವರು, ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹಾರಲಿದ್ದಾರೆ. ಆಟಗಾರರನ್ನು ಕಾಡುವ ಸ್ಫೋರ್ಟ್ಸ್ ಹರ್ನಿಯಾ ಬಗ್ಗೆ ಮಾಹಿತಿ ಇಲ್ಲಿದೆ.
ಟೀಂ ಇಂಡಿಯಾದ ಅಬ್ಬರದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಂಗಿರುವ ಅವರು ಚೇತರಿಸಿಕೊಳ್ತಿದ್ದಾರೆ. ಸೂರ್ಯಕುಮಾರ್ ಯಾದವ್, ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯ ಮ್ಯೂನಿಚ್‌ಗೆ ಹಾರಲಿದೆ ಎಂದು ವರದಿ ಮಾಡಲಾಗಿದೆ. ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡ್ತಿದ್ದ ಅವರು ಸ್ಫೋರ್ಟ್ಸ್ ಹರ್ನಿಯಾದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡ್ತಿರುವ ಸೂರ್ಯಕುಮಾರ್ ಯಾದವ್, ಈ ಋತುವಿನಲ್ಲಿ ಆರಂಭದ ಕೆಲ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ದಟ್ಟವಾಗಿದೆ. ಸೂರ್ಯಕಾಂತ್ ಯಾದವ್ ಅವರನ್ನು ಕಾಡ್ತಿರುವ ಸ್ಫೋರ್ಟ್ಸ್ ಹರ್ನಿಯಾ ಎಂದರೇನು ಎಂಬ ಮಾಹಿತಿ ಇಲ್ಲಿದೆ.
ಸ್ಫೋರ್ಟ್ಸ್ ಹರ್ನಿಯಾ (Sports Hernia) ಎಂದರೇನು? : ದಿಕ್ಕಿನ ಹಠಾತ್ ಬದಲಾವಣೆಗಳು ಅಥವಾ ತೀವ್ರ ತಿರುವು ಅಗತ್ಯವಿರುವ ಕ್ರೀಡೆಗಳನ್ನು ಆಡುವ ಜನರಲ್ಲಿ ಸ್ಫೋರ್ಟ್ಸ್ ಹರ್ನಿಯಾ ಹೆಚ್ಚಾಗಿ ಸಂಭವಿಸುತ್ತದೆ. ಸ್ನಾಯು (Muscle), ಅಸ್ಥಿರಜ್ಜು ಅಥವಾ ಸ್ನಾಯುರಜ್ಜು ಅಥವಾ ಹೊಟ್ಟೆಯಲ್ಲಿ ಸ್ನಾಯುವಿನ ಮೇಲೆ ಉಂಟಾಗುವ ಒತ್ತಡದಿಂದ ಸ್ಫೋರ್ಟ್ಸ್ ಹರ್ನಿಯಾ ಉಂಟಾಗುತ್ತದೆ. ಕೆಳ ಹೊಟ್ಟೆಯ ಆಳವಾದ ಒಳಪದರವನ್ನು ಸಂಪರ್ಕಿಸುವ ಸ್ನಾಯುರಜ್ಜುಗಳು ಅಥವಾ ಸೊಂಟಕ್ಕೆ ಸಂಪರ್ಕಿಸುವ ಸ್ನಾಯುಗಳು ದುರ್ಬಲಗೊಂಡಾಗ ಅಥವಾ ಹರಿದಾಗ ಸಾಮಾನ್ಯವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸ್ಫೋರ್ಟ್ಸ್ ಹರ್ನಿಯಾ ಎಂಬುದು ಹರ್ನಿಯಾ ಅಲ್ಲ. ಜಿಗಿತ, ಟ್ವಿಸ್ಟಿಂಗ್, ಒದೆಯುವಂತಹ ತೀವ್ರವಾದ ಪುನರಾವರ್ತಿತ ಚಲನೆಗಳು ಸ್ನಾಯುವಿನ ಒತ್ತಡವನ್ನು ಉಂಟುಮಾಡುತ್ತವೆ, ಇದು ಸ್ಫೋರ್ಟ್ಸ್ ಹರ್ನಿಯಾಕ್ಕೆ ಕಾರಣವಾಗುತ್ತದೆ. ಪ್ಯುಬಿಕ್ (Pubic) ಮೂಳೆಗೆ ಓರೆಯಾದ ಸ್ನಾಯುಗಳನ್ನು ಜೋಡಿಸುವ ಸ್ನಾಯುರಜ್ಜುಗಳು ತುಂಬಾ ದುರ್ಬಲವಾಗಿರುತ್ತವೆ.
ಆರೋಗ್ಯದ ನಿಧಿ ಕೆಸುವಿನ ಎಲೆ…ತಿನ್ನೋದ್ರಿಂದ ಪಡೆಯಿರಿ ಹಲವು ರೋಗಗಳಿಂದ ಮುಕ್ತಿ
ಪ್ಯುಬಿಕ್ ಮೂಳೆಗೆ ತೊಡೆಯ ಸ್ನಾಯುಗಳನ್ನು ಸಂಪರ್ಕಿಸುವ ಸ್ನಾಯುರಜ್ಜುಗಳು ಪುನರಾವರ್ತಿತ ಅಥವಾ ಸ್ಫೋಟಕ ಚಲನೆಯಿಂದ ಉಂಟಾದರೆ ಹಿಗ್ಗುತ್ತವೆ ಅಥವಾ ಹರಿದು ಹೋಗುತ್ತವೆ. ಫುಟ್ಬಾಲ್, ಹಾಕಿ, ಸಾಕರ್ ಮತ್ತು ರಗ್ಬಿ ಆಡುವ ಆಟಗಾರರಿಗೆ ಸ್ಪೋರ್ಟ್ಸ್ ಹರ್ನಿಯಾ ಹೆಚ್ಚಾಗಿ ಸಂಭವಿಸುತ್ತದೆ. ಕೆಎಲ್ ರಾಹುಲ್ ಕ್ರೀಡಾ ಹರ್ನಿಯಾದಿಂದ ಬಳಲುತ್ತಿದ್ದರು. ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 2022 ರಲ್ಲಿ ಕ್ರೀಡಾ ಹರ್ನಿಯಾದಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ಕೆಲವು ತಿಂಗಳುಗಳ ಕಾಲ ಆಟದಿಂದ ಹೊರಗುಳಿದಿದ್ದರು. ಸಾಮಾನ್ಯವಾಗಿ ಇಪ್ಪತ್ತರ ದಶಕದ ಅಂತ್ಯದಲ್ಲಿ ಕ್ರೀಡಾಪಟುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವು ಕ್ರೀಡೆಗಳಲ್ಲಿ ಸೊಂಟ ಮತ್ತು ಸೊಂಟದ ಮೇಲೆ ಒತ್ತಡ ಹೆಚ್ಚಾಗಿ ಬೀಳುವ ಕಾರಣ ಸ್ಫೋರ್ಟ್ಸ್ ಹರ್ನಿಯಾ ತಪ್ಪಿಸುವುದು ಕಷ್ಟ.
ಸ್ಫೋರ್ಟ್ಸ್ ಹರ್ನಿಯಾ ಸರಿಯಾಗೋದು ಹೇಗೆ? : ಸ್ಫೋರ್ಟ್ಸ್ ಹರ್ನಿಯಾಕ್ಕೆ ಚಿಕಿತ್ಸೆ ಇದೆ. ವಿಶ್ರಾಂತಿ, ದೈಹಿಕ ಚಿಕಿತ್ಸೆ, ಉರಿಯೂತದ ಔಷಧಿಗಳು ಮತ್ತು ಕಾರ್ಟಿಕೊಸ್ಟೆರಾಯ್ಡ್ಗಳು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಬಹುದಾದ ಚಿಕಿತ್ಸೆಗಳಾಗಿವೆ. ಇದು ತೀವ್ರವಾಗಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡುತ್ತಾರೆ. ರೋಗಿ ದೀರ್ಘಕಾಲದವರೆಗೆ ನೋವನ್ನು ಅನುಭವಿಸುತ್ತಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.
ಬೆಳಗ್ಗೆ ಎದ್ದ ಹಾಗೆ ಮೊಬೈಲ್ ನೋಡ್ತೀರಾ? ನಿಮಗೆ ಕಾದಿದೆ ಗಂಡಾಂತರ…
ಸ್ಫೋರ್ಟ್ಸ್ ಹರ್ನಿಯಾದಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು? : ಚಿಕಿತ್ಸೆ ಮತ್ತು ಚೇತರಿಕೆ ಗಾಯದ ಪ್ರಕಾರ ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ. ಗಾಯ ಆಳವಾಗಿದ್ದರೆ ಸುಧಾರಣೆಗೆ ಸಮಯ ತೆಗೆದುಕೊಳ್ಳುತ್ತದೆ. ಆಧುನಿಕ ಚಿಕಿತ್ಸೆಯ ಮೂಲಕ,ಆರರಿಂದ ಎಂಟು ವಾರಗಳ ನಂತರ ರೋಗಲಕ್ಷಣಗಳು ಗಮನಾರ್ಹವಾಗಿ ಸುಧಾರಿಸುತ್ತವೆ. ದೈಹಿಕ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿ ಸಿಕ್ಕಲ್ಲಿ, ಸ್ಫೋರ್ಟ್ಸ್ ಹರ್ನಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಆರು ಮತ್ತು ಹನ್ನೆರಡು ವಾರಗಳ ನಡುವೆ ಸಂಪೂರ್ಣ ಚೇತರಿಕೆ ಕಾಣುತ್ತಾರೆ. ಅವರು ಹನ್ನೆರಡು ವಾರದಲ್ಲಿ ತಮ್ಮ ಕ್ರೀಡೆಗಳು ಅಥವಾ ಚಟುವಟಿಕೆಗಳಿಗೆ ಸಂಪೂರ್ಣವಾಗಿ ವಾಪಸ್ ಆಗಬಹುದು.