Asianet Suvarna News Asianet Suvarna News

ಬ್ಲ್ಯಾಕ್,  ವೈಟ್, ಯಲ್ಲೋ ಆಯ್ತು, ಇದೀಗ  ಹಸಿರು ಫಂಗಸ್ ಪತ್ತೆ

* ವೈಟ್, ಬ್ಲಾಕ್, ಯಲ್ಲೋ ಆಯ್ತು ಇದೀಗ ಗ್ರೀನ್ ಫಂಗಸ್
* ಮಧ್ಯ ಪ್ರದೇಶದಲ್ಲಿ ಮೊದಲ ಪ್ರಕರಣ ದಾಖಲು
* ರೋಗಿಯನ್ನು ಚಿಕಿತ್ಸೆಗಾಗಿ ಮುಂಬೈಗೆ ಶಿಫ್ಟ್  ಮಾಡಲಾಗಿದೆ
* ಕೊರೋನಾ ವೈರಸ್ ರೂಪಾಂತರಿ ಅಟ್ಟಹಾಸ

Corona Second Wave  Green Fungus Case Reported In Madhya Pradesh Mah
Author
Bengaluru, First Published Jun 16, 2021, 6:51 PM IST

ಭೋಪಾಲ್ ( ಜೂ.16)  ಕಪ್ಪು, ಬಿಳಿ, ಯೆಲ್ಲೋ ಫಂಗಸ್ ಗಳು ಕಾಟ ಕೊಡಲು ಆರಂಭಿಸಿದ್ದನ್ನು ನೋಡಿದ್ದೆವು. ನಂತರ ಇದೀಗ ಗ್ರೀನ್ ಫಂಗಸ್ ಕಾಟ.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಹಸಿರು ಶಿಲೀಂಧ್ರ ಸೋಂಕು (Green fungus) ಪತ್ತೆಯಾಗಿದೆ. ಮಧ್ಯ ಪ್ರದೇಶದ ಇಂದೋರ್‌ನ ವ್ಯಕ್ತಿಯಲ್ಲಿ ಹಸಿರು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಈ ಗ್ರೀನ್ ಫಂಗಸ್ ಅನ್ನು ವೈದ್ಯಕೀಯ Aspergillosis ಎಂದು ಕರೆಯಲಾಗುತ್ತದೆ.

ಗ್ರೀನ್ ಫಂಗಸ್ ಬಗ್ಗೆ  ಅರಬಿಂದೋ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ವಿಭಾಗದ ವೈದ್ಯ ಡಾ. ರವಿ ದೋಸಿ ಮಾಹಿತಿ ನೀಡಿದ್ದಾರೆ.  ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಈ ವ್ಯಕ್ತಿ ಜ್ವರದಿಂದ ಬಳಲುತ್ತಲೇ ಇದ್ದರು.  ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಇದು ಮ್ಯೂಕರ್ ಮೈಕೋಸಿಸ್ (ಕಪ್ಪು ಶಿಲೀಂಧ್ರ) ಇರಬಹುದೆಂಬ ಶಂಕೆಯಿಂದ ಪರೀಕ್ಷೆ ಮಾಡಿಸಿದ್ದಾರೆ. ಆಗ ಹಸಿರು ಶಿಲೀಂಧ್ರ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಬದುಕಿಗೆ ಕತ್ತಲೆ ತಂದ ಕಪ್ಪು ಶಿಲೀಂಧ್ರ

ವ್ಯಕ್ತಿಯ ಶ್ವಾಸಕೋಶ ಹಾಗೂ ರಕ್ತದಲ್ಲಿ ಈ ಹಸಿರು ಶಿಲೀಂಧ್ರ ಕಂಡುಬಂದಿದೆ. ರೋಗಿಯು ಎರಡು ತಿಂಗಳ ಮುನ್ನ ಕೊರೊನಾ ಸೋಂಕಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ್ದು, ಸುಮಾರು ಒಂದು ತಿಂಗಳ ಕಾಲ ಐಸಿಯುನಲ್ಲಿದ್ದರು. ಗುಣಮುಖರಾಗಿ ಮನೆಗೆ ತೆರಳಿದ ನಂತರ ಮೂಗಿನಲ್ಲಿ ರಕ್ತಸ್ರಾವವಾಗಿ ಅಧಿಕ ಜ್ವರ ಕಾಣಿಸಿಕೊಂಡಿತ್ತು. ಕೆಲವೇ ದಿನಗಳಲ್ಲಿ ತೂಕದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು ಎಂಬ  ರೋಗ ಲಕ್ಷಣದ ಮಾಹಿತಿಯನ್ನು ನೀಡಿದ್ದಾರೆ.

ಗ್ರೀನ್ ಫಂಗಸ್ ಸೋಂಕು ಕಂಡು ಬಂದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮುಂಬೈಗೆ ಶಿಫ್ಟ್ ಮಾಡಲಾಗಿದೆ.  ಕೊರೋನಾ ವೈರಸ್ ಹೊಸ ಹೊಸ ರೂಪಾಂತರಿ ರೀತಿ ಕಂಡು ಬರುತ್ತಿರುವುದು ಆತಂಕ ಹೆಚ್ಚು ಮಾಡಿದೆ. 

 

Follow Us:
Download App:
  • android
  • ios