ಮಹಿಳೆ ಪಿತ್ತಕೋಶದಲ್ಲಿತ್ತು 2000 ಕ್ಕೂ ಹೆಚ್ಚು ಕಲ್ಲುಗಳು..!
ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 2000 ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ : ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 2000 ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 55 ವರ್ಷ ಪ್ರಾಯದ ಮಧುಮೇಹ ಕಾಯಿಲೆಯನ್ನು ಹೊಂದಿರುವ ಮಹಿಳೆಯೊಬ್ಬರು ಚೆನ್ನೈನಲ್ಲಿರುವ ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆ ಬಂದಿದ್ದರು, ಗ್ಯಾಸ್ಟಿಕ್ ಹಾಗೂ ಅಜೀರ್ಣದ ಸಮಸ್ಯೆಯ ಕಾರಣ ಹೇಳಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಸ್ಕ್ಯಾನಿಂಗ್ ಮಾಡಿದಾಗ ಮೊದಲಿಗೆ ಅವರ ಪಿತ್ತಕೋಶದಲ್ಲಿ 50ಕ್ಕೂ ಹೆಚ್ಚು ಕಲ್ಲುಗಳಿರುವುದು ಕಂಡು ಬಂತು.
ಇದಾದ ನಂತರ ಆಸ್ಪತ್ರೆಯ ವೈದ್ಯರ ತಂಡ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ತೆಗೆದು ಹಾಕಲು ನಿರ್ಧರಿಸಿದರು. ಆದರೆ ಈ ಪ್ರಕ್ರಿಯೆ ವೇಳೆ ಅವರಿಗೆ , ಮಹಿಳೆಯ ಪಿತ್ತಕೋಶದಲ್ಲಿ 2,000 ಕ್ಕೂ ಹೆಚ್ಚು ಕಲ್ಲುಗಳು ಕಂಡು ಬಂದಿದ್ದು, ಇದನ್ನು ನೋಡಿ ವೈದ್ಯರೇ ಒಂದು ಕ್ಷಣ ದಂಗಾಗಿದ್ದರು. ಈ 2 ಸಾವಿರ ಕಲ್ಲುಗಳಲ್ಲಿ 2 ಎಂಎಂಗಿಂತ ದೊಡ್ಡದಾದ 1,240 ಕಲ್ಲುಗಳಿದ್ದವು. ಉಳಿದ ಕಲ್ಲುಗಳು ಈ ಗಾತ್ರಕ್ಕಿಂತ ಚಿಕ್ಕದಾಗಿದ್ದವು.
11 ಹೆತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ: ಮನೆಯಿಂದ ಹೊರ ಹಾಕಿದ ಪತಿ
ಈ ಬಗ್ಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಸಹಾಯಕ ನಿರ್ದೇಶಕ, ಮಧುಮೇಹ ತಜ್ಞ ಬ್ರಿಜೇಂದ್ರ ಕುಮಾರ್ ಶ್ರೀವಾತ್ಸವ್ (Brijendra Kumar Srivatsav) ಮಾತನಾಡಿ 'ನನ್ನ 20 ವರ್ಷಗಳ ಅನುಭವದಲ್ಲಿ, ಪಿತ್ತಕೋಶದಲ್ಲಿ ಇಷ್ಟೊಂದು ಪಿತ್ತಗಲ್ಲುಗಳನ್ನು ಎಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಸ್ಥೂಲಕಾಯದ ಮಹಿಳೆಯರಲ್ಲಿ ಪಿತ್ತಗಲ್ಲು ಹೆಚ್ಚಾಗಿ ರೂಪುಗೊಳ್ಳುತ್ತದೆ. ಅದರಲ್ಲೂ ಸಕ್ಕರೆ ಕಾಯಿಲೆ ಹೊಂದಿರುವವರಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ. ಈಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಗಿ 12 ವರ್ಷಗಳಿಂದಲೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ಅವರು ಹೇಳಿದರು.
ಒಂದು ವೇಳೆ ಶಸ್ತ್ರಚಿಕಿತ್ಸೆ ನಡೆಸದೇ ಈ ಕಲ್ಲುಗಳನ್ನು ತೆಗೆಯದೇ ಹೋಗಿದ್ದರೆ, ರೋಗಿಯ ಪಿತ್ತಕೋಶವೂ ಸಿಡಿಯುವ ಸಾಧ್ಯತೆ ಇತ್ತು. ಅಲ್ಲದೇ ಈ ಕಲ್ಲುಗಳು ಮುಂದೆ ಕ್ಯಾನ್ಸರ್ ಗಡ್ಡೆಯಾಗಿ ಬದಲಾಗುವ ಸಾಧ್ಯತೆ ಇತ್ತು ಎಂದು ಅವರು ಹೇಳಿದರು.
ಅಬ್ಬಬ್ಬಾ..ಆಕೆಗಿತ್ತು ಭರ್ತಿ 11 ಕೆಜಿ ಸ್ತನ, ಯಶಸ್ವೀ Breast reduction ಸರ್ಜರಿ ಮಾಡಿದ ವೈದ್ಯರು
ಯಕೃತ್ತಿನಿಂದ ಬರುವ ಪಿತ್ತರಸವು ಪಿತ್ತಕೋಶದಲ್ಲಿ(gallbladder) ಸಂಗ್ರಹವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ಅಗತ್ಯವಾದಾಗ ಬಿಡುಗಡೆಯಾಗುತ್ತದೆ. ಆದರೆ ಕೆಲವು ವ್ಯಕ್ತಿಗಳಲ್ಲಿ ಪಿತ್ತಕೋಶದಿಂದ ಪಿತ್ತರಸವು ಪರಿಣಾಮಕಾರಿಯಾಗಿ ಬರುವುದಿಲ್ಲ. ಅಂತಹವರ ಅವರ ಪಿತ್ತಕೋಶವು ಪಿತ್ತರಸದಿಂದ ಮುಚ್ಚಿಹೋಗಬಹುದು ಅಥವಾ ಕಲ್ಲುಗಳನ್ನು ಅಭಿವೃದ್ಧಿಪಡಿಸಬಹುದು. ಕೇವಲ ಒಂದು ಅಥವಾ ಎರಡು ಕಲ್ಲುಗಳಿದ್ದರೆ ಅಜೀರ್ಣದಂತಹ ಸಣ್ಣ ಲಕ್ಷಣಗಳು ಮಾತ್ರ ಕಂಡುಬರುತ್ತವೆ. ಆದರೆ ಪಿತ್ತಕೋಶಕ್ಕೆ ಅಡ್ಡಿಯಾದಾಗ ಅಡಚಣೆಯಾದಾಗ, ಪಕ್ಕೆಲುಬಿನ (rib cage)ಬಲಭಾಗವು ನೋಯಲು ಆರಂಭವಾಗುತ್ತದೆ ಎಂದು ವೈದ್ಯ ಡಾ ಬ್ರಿಜೇಂದ್ರ (Dr Brijendra) ಹೇಳಿದರು.
ಶಸ್ತ್ರಚಿಕಿತ್ಸಾ ತಂಡದಲ್ಲಿದ್ದ ಅರಿವಳಿಕೆ ತಜ್ಞ (Anesthesiologist) ಸತೀಶ್ ಬಾಬು (Sathish Babu)ಮಾತನಾಡಿ, ಬೊಜ್ಜು ತಪ್ಪಿಸಿ, ನಿತ್ಯ ವ್ಯಾಯಾಮ, ಸಮತೋಲಿತ ಆಹಾರ ಸೇವಿಸುವ ವ್ಯಕ್ತಿಗೆ ಪಿತ್ತಕೋಶ ಆರೋಗ್ಯಯುತವಾಗಿರುತ್ತದೆ ಎಂದು ಹೇಳಿದರು.