ಜೂನ್‌ನಲ್ಲಿ ಕರ್ನಾಟಕದಲ್ಲಿ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ
ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ (cervical cancer) ಕಾಪಾಡುವ ಸಲುವಾಗಿ ಅವರಿಗೆ ವಿಶೇಷ ಲಸಿಕಾ ಅಭಿಯಾನ ನಡೆಸಲು ಕೇಂದ್ರ ಸರ್ಕಾರ ನಡೆಸಿದೆ. ಮೊದಲ ಹಂತದಲ್ಲಿ ಮುಂಬರುವ ಜೂನ್‌ನಿಂದ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನಿರ್ಧರಿಸಿದೆ.
ನವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ (cervical cancer) ಕಾಪಾಡುವ ಸಲುವಾಗಿ ಅವರಿಗೆ ವಿಶೇಷ ಲಸಿಕಾ ಅಭಿಯಾನ ನಡೆಸಲು ಕೇಂದ್ರ ಸರ್ಕಾರ ನಡೆಸಿದೆ. ಮೊದಲ ಹಂತದಲ್ಲಿ ಮುಂಬರುವ ಜೂನ್‌ನಿಂದ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನಿರ್ಧರಿಸಿದೆ.
ಹ್ಯೂಮನ್ ಪಾಪಿಲ್ಲೋಮಾವೈರಸ್ (HPA) ಎಂದು ಕರೆಯಲಾಗುವ ಲಸಿಕೆಯನ್ನು ಕರ್ನಾಟಕ (Karnataka), ತಮಿಳುನಾಡು (Tamil Nadu), ಮಿಜೋರಂ(Mizoram), ಛತ್ತೀಸ್‌ಗಢ (Chhattisgarh), ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ (Uttar Pradesh)2.55 ಕೋಟಿ ಹೆಣ್ಣು ಮಕ್ಕಳಿಗೆ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಅಭಿಯಾನದ ಭಾಗ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಏಪ್ರಿಲ್‌ನಲ್ಲಿ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ವಿತರಿಸಲು ನಿರ್ಧರಿಸಿದೆ. 2026ರ ವೇಳೆಗೆ ಒಟ್ಟು 16.02 ಕೋಟಿ ಲಸಿಕೆ ಖರೀದಿ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರತಿ ವರ್ಷ 74,000ಕ್ಕೂ ಹೆಚ್ಚು ಮಹಿಳೆಯರು ಸಾವು
ಪ್ರಸಕ್ತ ಮಾರುಕಟ್ಟೆಯಲ್ಲಿ ಅಮೆರಿಕ ಕಂಪನಿಯ ಗಾರ್ಡಸಿಲ್ ಲಸಿಕೆ (American company Gardasil vaccine) ಮಾತ್ರವೇ ಲಭ್ಯವಿದೆ. ಸಿಂಗಲ್ ಡೋಸ್‌ನ ಈ ಲಸಿಕೆಗೆ ಭರ್ಜರಿ 10850 ರು. ದರ ಇದೆ. ಆದರೆ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ (Pune-based Serum Institute) ಇತ್ತೀಚೆಗೆ ಗರ್ಭಕಂಠದ ಕ್ಯಾನ್ಸರ್‌ಗೆಂದೇ ಸೆರ್‌ವಾವ್ಯಾಕ್ ಎಂಬ ಲಸಿಕೆ ಅಭಿವೃದ್ಧಿಪಡಿಸಿದೆ. ಎರಡು ಡೋಸ್ ಮಾದರಿಯ ಲಸಿಕೆ ಇದಾಗಿದ್ದು, ಪ್ರತಿ ಡೋಸ್‌ಗೆ 2000 ರು.ದರದಲ್ಲಿ ಖಾಸಗಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದೇ ಲಸಿಕೆಯನ್ನು ಕಂಪನಿ ಸರ್ಕಾರಕ್ಕೆ ಇನ್ನಷ್ಟು ಅಗ್ಗದ ದರದಲ್ಲಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲಸಿಕೆ ಏಕೆ?:
ವಿಶ್ವದ ಒಟ್ಟು ಮಹಿಳೆಯರ ಪ್ರಮಾಣದಲ್ಲಿ ಭಾರತದ ಪಾಲು ಶೇ.16ರಷ್ಟಿದ್ದರೂ, ಜಾಗತಿಕ ಗರ್ಭಕಂಠದ ಕ್ಯಾನ್ಸರ್ ಪ್ರಮಾಣದಲ್ಲಿ ಭಾರತದ ಪಾಲು ಶೇ.25ಕ್ಕಿಂತ ಹೆಚ್ಚಿದೆ. ಜೊತೆಗೆ ಜಾಗತಿಕ ಗರ್ಭಕಂಠದ ಕ್ಯಾನ್ಸರ್‌ನಿಂದ (global cervical cancer deaths) ಸಂಭವಿಸುವ ಸಾವಿನಲ್ಲಿ ಶೇ.50ರಷ್ಟು ಪಾಲು ಭಾರತದ್ದಾಗಿದೆ. ಜೊತೆಗೆ ಜೀವಮಾನದಲ್ಲಿ ಒಮ್ಮೆಯಾದರೂ ಈ ಸಮಸ್ಯೆಗೆ ಸಿಕ್ಕಿಬೀಳುವ ಸಾಧ್ಯತೆ ಶೇ.1.6ರಷ್ಟುಭಾರತೀಯರ ಮಹಿಳೆಯರನ್ನು ಕಾಡುತ್ತಿದೆ. ಅಂದರೆ ಪ್ರತಿ ವರ್ಷ ಭಾರತದಲ್ಲಿ 80,000 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, 35,000 ಮಹಿಳೆಯರು ಇದೇ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಆರಂಭಿಕ ಹಂತದಲ್ಲೇ ಬಾಲಕಿಯರಿಗೆ ಈ ಲಸಿಕೆ ನೀಡಲು ಕೇಂದ್ರ ಸರ್ಕಾರ ಈ ಅಭಿಯಾನ ರೂಪಿಸಿದೆ.
ಗರ್ಭಕಂಠದ ಕ್ಯಾನ್ಸರ್: ಗಂಭೀರ ಅನಾರೋಗ್ಯವನ್ನು ತಡೆಗಟ್ಟುವುದು ಹೇಗೆ?