ಕರ್ನಾಟಕದಲ್ಲಿಯೇ 35 ಕೋವಿಡ್ ಉಪತಳಿ ಜೆಎನ್1 ಕೇಸ್‌ಗಳು ಪತ್ತೆ: ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್!
ಕರ್ನಾಟಕದ 35 ಜನರಿಗೆ ಕೋವಿಡ್ ಹೊಸ ಉಪತಳಿ ಜೆಎನ್.1 ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಡಿ.25): ದೇಶಾದ್ಯಂತ ಕಳೆದ 15 ದಿನಗಳಿಂದ ಕೋವಿಡ್ ಉಪತಳಿ ಜೆಎನ್.1 ತಳಿಯ ಆರ್ಭಟ ಜೋರಾಗಿದೆ. ಈವರೆಗೆ ವಿದೇಶಗಳಲ್ಲಿ ಮಾತ್ರ ಪತ್ತೆಯಾಗಿದ್ದ ಜೆಎನ್.1 ಕೋವಿಡ್ ವೈರಸ್ ಈಗ ಕರ್ನಾಟದಲ್ಲಿಯೂ ಪತ್ತೆಯಾಗಿದೆ. ರಾಜ್ಯದ 35 ಜನರಲ್ಲಿ ಈ ಹೊಸ ಉಪತಳಿ ಮತ್ತೆಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲಿಯೇ 20 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲದ ನೀಡಿದ ಮಾಹಿತಿಯಲ್ಲಿ ಒಟ್ಟು 63 ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಪುನಃ ರಾಜ್ಯ ಸರ್ಕಾರಕ್ಕೆ ಕಳುಹಿಸಲಾದ ವರದಿಯಲ್ಲಿ ಕರ್ನಾಟಕದಲ್ಲಿಯೇ ಒಟ್ಟು 35 JN.1 ಕೇಸ್ ಪತ್ತೆಯಾಗಿವೆ ಎಂದು ಮಾಹಿತಿ ನೀಡಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 20 ಜೆಎನ್1 ಕೇಸ್ ಪತ್ತೆಯಾಗಿವೆ. ಉಳಿದಂತೆ ಮೈಸೂರು 4, ಮಂಡ್ಯ 3, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು ಹಾಗೂ ಚಾಮರಾಜನಗರದಲ್ಲಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಜೆಎನ್.1 ಉಪತಳಿ ಸೋಂಕಿತರು ಪತ್ತೆಯಾಗಿದ್ದಾರೆ.