ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲಾಗುವ ಅಶ್ವಗಂಧ ಎಂಬ ಗಿಡಮೂಲಿಕೆ ಕೊರೋನಾ ವೈರಸ್‌ನಿಂದ ಉಂಟಾಗುವ ಜ್ವರಕ್ಕೆ ಪರಿಣಾಮಕಾರಿ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಇದು ಕೊರೋನಾ ಸೋಂಕು ತಡೆಯಲು ಬಳಸಬಹುದು ಎಂದು ಅಧ್ಯಯನ ನಡೆಸಿದ ದಿಲ್ಲಿ ಐಐಟಿ ಮತ್ತು ಜಪಾನಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಇಂಡಸ್ಟ್ರಿಯಲ್ ಸೈನ್ಸ್ ಆಂಡ್‌ ಟೆಕ್ನಾಲಜಿಯ ತಜ್ಞರು ಹೇಳಿದ್ದಾರೆ.
ಈ ತಜ್ಞರು ಭಾರತೀಯ ಗಿಡಮೂಲಿಕೆಯಾದ ಅಶ್ವಗಂಧವನ್ನು ಹಲವು ಜ್ವರಗಳಿಗೆ ಸಂಬಂಧಿಸಿದಂತೆ ಇಲ್ಲಿನ ಪಾರಂಪರಿಕ ವೈದ್ಯರು ಆಂಟಿಬಯಾಟಿಕ್‌ ಆಗಿ ಬಳಸುತ್ತಿರುವುದನ್ನು ಗಮನಿಸಿದ್ದರು. ಇದರಲ್ಲಿರುವ ಹಲವು ಔಷಧೀಯ ಅಂಶಗಳನ್ನು ಪಡೆದುಕೊಂಡು, ಅವುಗಳನ್ನು ಸಾರ್ಸ್‌- ಕೋವಿಡ್‌ ವೈರಸ್‌ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಜೀವಕೋಶದಲ್ಲಿರುವ ಪ್ರೊಟೀನನ್ನು ಒಡೆಯುವ ಸಾರ್ಸ್‌ ವೈರಸ್‌ನ ಗುಣವನ್ನು ತಡೆಗಟ್ಟಲು ಅಶ್ವಗಂಧದಲ್ಲಿರುವ ವಿದನೋನ್‌ ಎಂಬ ರಾಸಾಯನಿಕ ಸಂಯುಕ್ತವನ್ನು ಹಾಗೂ ನ್ಯೂಜಿಲ್ಯಾಂಡ್‌ ಮೂಲದ ಪ್ರೊಪೀಲಿಸ್ ಎಂಬ ಮೂಲಿಕೆಯ ಕೆಫೆಯೀಕ್‌ ಆಸಿಡ್‌ ಫಿನತೈಲ್‌ ಎಸ್ತರ್‌ ಎಂಬ ಸಂಯುಕ್ತವನ್ನು ಜೊತೆಗೂಡಿಸಿ ಬಳಸಿದ್ದಾರೆ. ಇದು ಫಲ ನೀಡಿದಯಂತೆ. ಈ ಅಧ್ಯಯನದ ನೇತೃತ್ವವನ್ನು ಭಾರತೀಯ ವೈದ್ಯರಾದ, ಇಂಟರ್‌ನ್ಯಾಷನಲ್‌ ಲ್ಯಾಬೊರೇಟರ್‌ ಫಾರ್‌ ಅಡ್ವಾನ್ಸ್‌ಡ್ ಬಯೋಮೆಡಿಸಿನ್‌ನ ತಜ್ಞ ಡಾ.ಸುಂದರ್‌ ವಹಿಸಿದ್ದಾರೆ. ಅಧ್ಯಯನ ಪೂರ್ಣಗೊಂಡಿದ್ದು, ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ ಜರ್ನಲ್‌ ಆಫ್‌ ಬಯೋಮಾಲೆಕ್ಯುಲರ್‌ ಸ್ಟ್ರಕ್ಚರ್‌ ಆಂಡ್‌ ಡೈನಾಮಿಕ್ಸ್‌ನಲ್ಲಿ ಈ ಬಗ್ಗೆ ವಿಸ್ತಾರ ಪ್ರಬಂಧ ಪ್ರಕಟವಾಗಲಿದೆಯಂತೆ. 

ಆಸ್ತಮಾ ಮಂದಿ ಏನು ಮಾಡಬೇಕು; ಇದು ಹುಡುಗಾಟಿಕೆ ಟೈಮ್‌ ಅಲ್ಲ! 


ಅಶ್ವಗಂಧ ಹಲವು ತೊಂದರೆಗಳಿಗೆ ಉತ್ತಮ ಔಷಧ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ತೊಂದರೆಗಳಿಗೆಲ್ಲಾ ಇದು ಅತ್ಯುತ್ತಮ ಉಪಶಮನಕಾರಿ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು, ಖಿನ್ನತೆಯನ್ನು ಕಡಿಮೆ ಮಾಡುವುದು ಇವೆಲ್ಲ ಇದರ ಅದ್ಭುತ ಗುಣಗಳು.
ಅಶ್ವಗಂಧ ಮಾನಸಿಕ ಒತ್ತಡವನ್ನು ನಿವಾರಿಸಿ, ಖಿನ್ನತೆಯನ್ನು ಇಲ್ಲವಾಗಿಸಿ ಮನಸ್ಸನ್ನು ನಿರಾಳಗೊಳಿಸುವ ಗುಣ ಹೊಂದಿದೆ. ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣ ಮೆದುಳಿನಲ್ಲಿ ಉತ್ಪತ್ತಿಯಾಗುವ ’ಕಾರ್ಟಿಸೋಲ್’ ಎಂಬ ಹಾರ್ಮೋನ್‌. ಅಶ್ವಗಂಧ ಈ ಹಾರ್ಮೋನ್‌ನ ಉತ್ಪಾದನೆಯನ್ನು ನಿಗ್ರಹಿಸಿ ಇದರಿಂದ ಎದುರಾಗುವ ಮಾನಸಿಕ ಒತ್ತಡದಿಂದ ರಕ್ಷಣೆ ಒದಗಿಸುತ್ತದೆ. ಈ ಗುಣವನ್ನು ಕಂಡುಕೊಂಡ ಔಷಧ ಸಂಸ್ಥೆಗಳು ಖಿನ್ನತೆ ನಿವಾರಕ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿವೆ. 

ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ 
ಅಶ್ವಗಂಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದ್ದು ನೂರಾರು ವರ್ಷಗಳಿಂದ ಇದನ್ನು ಇದೇ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಬಲಿಷ್ಟವಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಕಾಗುತ್ತದೆ. ಸಕಾಲದಲ್ಲಿ ಇದನ್ನು ಸೇವಿಸಿದರೆ, ಆರಂಭ ಕಾಲದ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಯೂ ನಿಲ್ಲುತ್ತದೆ ಎಂದು ಸಿದ್ಧವಾಗಿದೆ.
ಅಶ್ವಗಂಧದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ ಹಾಗೂ ಇವು ಗಾಯಗಳಾದರೆ ಶೀಘ್ರವೇ ಮಾಗಿಸಲು ಮತ್ತು ಸೋಂಕು ಉಂಟಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ. ಹಿಂದೆ ಗಾಯಗಳಾದರೆ ನಿವಾರಣೆಗೆ ಅಶ್ವಗಂಧದ ಎಲೆಗಳನ್ನು ಅರೆದು ಹಚ್ಚಲಾಗುತ್ತಿತ್ತು. ಅಶ್ವಗಂಧದ ನಿಯಮಿತ ಸೇವನೆಯಿಂದ ವೃದ್ಧಾಪ್ಯವನ್ನು ದೂರವಿಡಬಹುದು, ಮರೆಗುಳಿತನ ಕಡಿಮೆ ಮಾಡಬಹುದು. ಉತ್ತಮ ಮಾನಸಿಕ ಆರೋಗ್ಯ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ರಾತ್ರಿ ನಿದ್ದೆ ಬಾರದೇ ಇರುವ ತೊಂದರೆ ಇದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚ ಅಶ್ವಗಂಧದ ಪುಡಿಯನ್ನು ಬೆರೆಸಿ ಕುಡಿದರೆ ಸುಖಕರ ನಿದ್ದೆ ಆವರಿಸುತ್ತದೆ.

ವ್ಹಿಸ್ಕಿ ಜೀವದ ಗೆಳೆಯ, ಅದಕ್ಕಿಂದೇ ಪ್ರೀತಿಯ ಸಮಯ!

ಅಶ್ವಗಂಧದ ಸೇವನೆಯಿಂದ ದೇಹದಲ್ಲಿ ಹಾರ್ಮೋನ್‌ ಸಮತೋಲನ ಸಾಧಿಸಬಹುದಂತೆ. ಅಶ್ವಗಂಧ ಮಹಿಳೆಯರಲ್ಲಿ ಮೆನೋಪಾಸ್‌ ಸಮಯದಲ್ಲಿ ಹಾರ್ಮೋನ್‌ ಏರುಪೇರು ಸರಿಪಡಿಸಲು ನೆರವಾಗುತ್ತದೆ. ಅಶ್ವಗಂಧದ ಸೇವನೆಯಿಂದ ಪುರುಷರಲ್ಲಿ ಚೈತನ್ಯ, ಪೌರುಷ ಮತ್ತು ಹುರುಪು ಹೆಚ್ಚುತ್ತದೆ. ಅಲ್ಲದೇ ಲೈಂಗಿಕ ಸಾಮರ್ಥ್ಯವೂ ಹೆಚ್ಚುವುದನ್ನು ಗಮನಿಸಲಾಗಿದೆ. ಹೀಗಾಗಿ ಇದನ್ನು ಕಾಮೋತ್ತೇಜಕವಾಗಿಯೂ ಬಳಸಲಾಗುತ್ತಿದೆ. ಚರ್ಮ ಸುಕ್ಕುಗಟ್ಟುವುದನ್ನು ನಿಧಾನಗೊಳಿಸುತ್ತದೆ. ತಲೆಕೂದಲ ಹೊಳಪನ್ನು ಉಳಿಸುತ್ತದೆ.