‘ರಾಜ್ಯದ ಜನತೆ ವಿರೋಧ ಪಕ್ಷಗಳ ಹೇಳಿಕೆಗಳಿಂದ‌ ನಿರಾಶರಾಗಬೇಕಿಲ್ಲ’

ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ ರೈತ ಪರ ಸರ್ಕಾರವನ್ನು ಕೊಡುವುದು ನಮ್ಮ ಧ್ಯೇಯ ಎಂದ ಸಿಎಂ| ವಿರೋಧ ಪಕ್ಷಗಳ ಮಾತಿಗೆ ಕಿವಿಕೊಡಬೇಡಿ|ರಾಜ್ಯದ ಜನ ವಿರೋಧ ಪಕ್ಷಗಳು ನೀಡುತ್ತಿರುವ ಹೇಳಿಕೆಗಳಿಂದ‌ ನಿರಾಶರಾಗಬೇಕಿಲ್ಲ| ರಾಜ್ಯ ಸರ್ಕಾರ ನಿಮ್ಮ ಜೊತೆಗಿದೆ|

CM Yediyurappa Talked About Statements of Opposition Parties

ಹಾವೇರಿ[ನ.7]: ರಾಜ್ಯದ ಜನ ವಿರೋಧ ಪಕ್ಷಗಳು ನೀಡುತ್ತಿರುವ ಹೇಳಿಕೆಗಳಿಂದ‌ ನಿರಾಶರಾಗಬೇಕಿಲ್ಲ. ರಾಜ್ಯ ಸರ್ಕಾರ ನಿಮ್ಮ ಜೊತೆಗಿದೆ  ಈಗಷ್ಟೇ ನೂರು ದಿನಗಳನ್ನು ಪೂರೈಸಿದೆ ಮುಂದಿನ ದಿನಗಳಲ್ಲಿ‌ ನೀರಾವರಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಕೊಡಿಸುವುದು ನಮ್ಮ ಆಧ್ಯತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.

ಗುರುವಾರ ನಗರದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಸಭೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಸಿಎಂ, ಸಧ್ಯ ರಾಜ್ಯದಲ್ಲಿ ವಿದ್ಯುತ್  ಸಮಸ್ಯೆ ಇಲ್ಲ, ಸರಪ್ಲಸ್ ವಿದ್ಯುತ್ ನಮ್ಮಲ್ಲಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ ರೈತ ಪರ ಸರ್ಕಾರವನ್ನು ಕೊಡುವುದು ನಮ್ಮ ಧ್ಯೇಯವಾಗಿದೆ ವಿರೋಧ ಪಕ್ಷಗಳ ಮಾತಿಗೆ ಕಿವಿಕೊಡಬೇಡಿ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ   

ವೈದ್ಯರ ಮುಷ್ಕರ ಸಂಬಂಧ ಮಾತನಾಡಿದ ಸಿಎಂ ಇವತ್ತು ನಮ್ಮ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿ‌ ಬಗೆಹರಿಸುತ್ತಾರೆ.ಇವತ್ತು ಸರಿ ಮಾಡುತ್ತಾರೆ. ಇವತ್ತು ಎಲ್ಲಾ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ. ಎನ್.ಡಿ.ಆರ್ ಎಫ್ ನಿಯಮ ಬಿಟ್ಟು ಹೆಚ್ಚಿನ ಪರಿಹಾರ ನೀಡುವ ಸಂಬಂಧ ಮಾತನಾಡಿದ ಅವರು, ಬೆಳೆ ಹಾನಿಗೆ ಪ್ರತಿಹೆಕ್ಟರ್ ಗೆ  ರೈತರಿಗೆ 10 ಸಾವಿರ ಹೆಚ್ಚಿನ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ. 307 ಕೋಟಿ‌ ರು. ರೈತರಿಗೆ ಹೆಚ್ಚಿನ ಪರಿಹಾರ ಸಿಗಲಿದೆ.ಈ ಹಣವನ್ನು ತಕ್ಷಣ ಬಿಡುಗಡೆ ಮಾಡುತ್ತೆನೆ ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದೆ.‌ ಈ ಸಂಬಂಧ ಕೇಂದ್ರ ಸರ್ಕಾರ ಕೂಡ ಅನುಮತಿ ನೀಡಿದೆ. ಶೀಘ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ ಎಂದು ಹೇಳಿದ್ದಾರೆ. 

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಶಾಸಕರು ಭಾಗಿಯಾಗಿದ್ದರು. 
 

 

Latest Videos
Follow Us:
Download App:
  • android
  • ios