ಹಾವೇರಿ: ಗಮನ ಸೆಳೆದ ಗುತ್ತಲದ ಹೋರಿ ಬೆದರಿಸುವ ಸ್ಪರ್ಧೆ

ಗೌರಿ ಹುಣ್ಣಿಮೆಯ ದಿನದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆ| ಹೋರಿಗಳ ಅಲಂಕಾರಕ್ಕೆ ಮೆಚ್ಚಿಸಿಳ್ಳೆ, ಕೇಕೆ ಹಾಕಿದ ಜನ|ಕಮಿಟಿಯವರ ಧ್ವನಿವರ್ಧಕದಲ್ಲಿ ಹೋರಿ ಬಿಟ್ಟಾರಾ, ಪೀಪೀ ಪೀಪಿ ಎಂಬ ಜೈಕಾರ ವೀಕ್ಷಕರನ್ನು ಹುಚ್ಚೆಬ್ಬಿಸುತ್ತಿತ್ತು|

Bull Race Held at Guttal in Haveri District

ಗುತ್ತಲ[ನ.13]:  ಮೈನವಿರೇಳಿಸುವಂತಹ  ರೋಮಾಂಚನಕಾರಿ ಅಪ್ಪಟ ಗ್ರಾಮೀಣ ಸೊಗಡಿನ ಹೋರಿ ಬೆದರಿಸುವ ಸ್ಪರ್ಧೆ ಸಮೀಪದ ಬಸಾಪುರ ಗ್ರಾಮದಲ್ಲಿ ಮಂಗಳವಾರ ಜರಗಿತು. ಪ್ರತಿ ವರ್ಷದಂತೆ ಗೌರಿ ಹುಣ್ಣಿಮೆಯ ದಿನದಂದು ಬೆಳಗ್ಗೆಯಿಂದ ಆರಂಭವಾದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನ ಅನೇಕ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ಝಗಮಗಿಸುವ ವಸ್ತ್ರಾಲಂಕಾರ, ಬಲೂನ, ರಿಬ್ಬನ್, ಜೂಲಾ ಸೇರಿದಂತೆ ವಿವಿಧ ಬಣ್ಣಗಳಿಂದ ಅಲಂಕರಿಸಿದ್ದರು. ಹೋರಿಯ ಹೆಸರು ಹೊಂದಿದ ಟೀ ಶರ್ಟ್, ಧ್ವಜ ಹಿಡಿದು ಹುರಿದುಂಬಿಸುವ ಕೆಲಸ ಹೋರಿಗಳ ಮಾಲೀಕರು ಹಾಗೂ ಅವರ ಹಿಂಬಾಲಕರದಾಗಿದ್ದರೆ ಹೋರಿಗಳ ಅಲಂಕಾರಕ್ಕೆ ಮೆಚ್ಚಿ ಜನರು ಸಹ ಸಿಳ್ಳೆ, ಕೇಕೆಯನ್ನು ಹಾಕುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಮಿಟಿಯವರ ಧ್ವನಿವರ್ಧಕದಲ್ಲಿ ಹೋರಿ ಬಿಟ್ಟಾರಾ, ಪೀಪೀ ಪೀಪಿ ಎಂಬ ಜೈಕಾರ ವೀಕ್ಷಕರನ್ನು ಹುಚ್ಚೆಬ್ಬಿಸುತ್ತಿತ್ತು. ನೂರಾರು ಗ್ರಾಮಗಳಿಂದ ಆಗಮಿಸಿದ ಭಾರಿ ಹೋರಿಗಳು ವಿಶೇಷವಾದ ಹೆಸರುಗಳಾದ ರಾಕ್‌ಸ್ಟಾರ್, ಭೈರವ, ರಾಕ್ಷಸ, ಬ್ರಹ್ಮಾಂಡ, ಚಿನ್ನಾಟದ ಚೆಲುವ, ರಾಣಿಬೆನ್ನೂರ ಹುಲಿ, ಬಕಾಸುರ, ಜೋಗಿ, ಅಧಿಪತಿ, ಅಶ್ವಮೇಧ, ಏಕಲವ್ಯ ಎಂಬ ದೇವರು, ನಾಯಕ ನಟರ, ಚಲನ ಚಿತ್ರಗಳ ಹೆಸರು ಹೊಂದಿರುವ ನೂರಾರು ಹೋರಿ ಗಳು ನೆರೆದ ಜನರನ್ನು ರಂಜಿಸಿದವು, ಹೋರಿ ಗಳ ಕೊರಳಿಗೆ ಕಟ್ಟಿದ್ದ ಕೊಬ್ಬರಿಯನ್ನು ಪ್ರಾಣದ ಹಂಗು ತೊರೆದು ಹರಿಯುವ ಸಾಹಸ ಯುವಕರದ್ದು, ಕೆಲವು ಹೋರಿಗಳು ತೀವ್ರ ಸ್ಪರ್ಧೆ ಒಡ್ಡಿದರೂ ಸಹ ಅಂತಿಮವಾಗಿ ಸೋಲನ್ನಪ್ಪಿದ್ದರೆ ಹಲವು ಹೋರಿಗಳು ಮಿಂ ಚಿನ ವೇಗದಲ್ಲಿ ಜನರ ಮಧ್ಯ ಓಡಿ ಹೋಗು ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. 

ಇದರ ಮಧ್ಯ ಅವು ಶರವೇಗದಲ್ಲಿ ಓಡಿ ಬರುತ್ತಿದ್ದಾಗ ಹೋರಿಗಳ ಕೊಬ್ಬರಿಯನ್ನು ಕಿತ್ತುಕೊಳ್ಳುವ ಸಾಹಸ ಮಾಡಲು ಹೋದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಸಂಭವಿಸಿತು. ಹೋರಿ ಬೆದರಿಸುವ ದೃಶ್ಯವನ್ನು ಕುತೂ ಹಲದಿಂದ ನೋಡಲು ಬಸಾಪುರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಇನ್ನೂ ಸ್ಪರ್ಧೆಗೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಹೋರಿಗಳು ಆಗಮಿಸಿದ್ದವು.
 

Latest Videos
Follow Us:
Download App:
  • android
  • ios