ಹಾಸನ[ಜೂ. 20]  ಕಾರು‌ ಮತ್ತು ಬೈಕ್ ನಡುವೆ ನಡುವಿನ ಭೀಕರ ಅಪಘಾತದಲ್ಲಿ  ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ವಿಜಯ್(22)ರಾಜುನಾಯ್ಕ್ (22) ಮೃತ ವಿದ್ಯಾರ್ಥಿಗಳು.

ಹಾಸನದ ಪಶುವೈದ್ಯ ಕಾಲೇಜಿನಲ್ಲಿ ಅಂತಿಮ‌ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿಗಳು ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದಾರೆ.

ಚಾಮರಾಜನಗರ: ಮಗುವಿನ ಮುಂದೆಯೇ ಪಾಲಕರ ಜೀವ ಬಲಿಪಡೆದ ಟೆಂಪೋ

ಹಿಂಬದಿಯಿಂದ ವೇಗವಾಗಿ ಬಂದ ಇನ್ನೊವಾ ಕಾರ್ ಇಬ್ಬರ ಮೇಲೂ ಚಲಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರಲ್ಲಿ  ಅಪಘಾತ ನಡೆದಿದೆ. ಇನ್ನೋವಾ ಕಾರು ಚಾಲಕ ಎಸ್ಕೇಪ್ ಆಗಿದ್ದು ಪೊಲೀಸರು ಬಲೆ ಬೀಸಿದ್ದಾರೆ.