ಹಾಸನ(ಏ. 23)   ಆರೋಪ‌  ಬಂದ ಕಾರಣಕ್ಕೆ  ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹಾಸನ‌ ನಗರದ ವಿಶಾಲ್ ಮಾರ್ಟ್ ಅಂಗಡಿ ಸಿಬ್ಬಂದಿ ವಿರುದ್ದ ಬ್ರಹ್ಮದೇವರಹಳ್ಳಿಯ ಪ್ರಮೋದ್(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾರ್ಟ್ ನ ವ್ಯಾಪಾರದ  60 ಸಾವಿರ ಹಣ ದುರುಪಯೋಗ ಮಾಡಿಕೊಂಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಆರೋಪದಿಂದ‌ ಮನನೊಂದು ಎರಡು ದಿನದ ಹಿಂದೆ ಪ್ರಮೋದ್ ವಿಷ ಸೇವಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ  ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ಸಾವಿಗೂ ಮುನ್ನ ಕಿರಣ್ , ಜುನೈದ್, ಆದಿಲ್  ಮಾನಸಿಕ‌ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಮೋದ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.